ಕವಿತೆ ಕನವರಿಕೆಗಳ ಅಕ್ಷರ ತೋರಣ : ಡಾ.ರಮಾನಂದ ಬನಾರಿ ಅಭಿಮತ

New Project (11)
Published on

ವಿಜಯವಾಣಿ ಸುದ್ದಿಜಾಲ ಪೆರ್ಲ

ಕವಿತೆ ಕನವರಿಕೆಗಳ ಅಕ್ಷರ ತೋರಣಗಳಾಗಿ ಸಮಾಜವನ್ನು ವರ್ತಮಾನದೊಡನೆ ಮುನ್ನಡೆಸುತ್ತದೆ. ಭಾಷೆ, ಸಂಸ್ಕೃತಿಯ ಬೆಳವಣಿಗೆ, ಸಮೃದ್ಧ ವಾಙ್ಮಯ ಸಂಪತ್ತು ಬೆಳೆಯಲು ಸಾಹಿತ್ಯದ ಕೊಡುಗೆ ಅಪಾರ ಎಂದು ಜಿಲ್ಲಾ ಲೇಖಕರ ಸಂಘ ಅಧ್ಯಕ್ಷ ಡಾ.ರಮಾನಂದ ಬನಾರಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಪೆರ್ಲ ವ್ಯಾಪಾರಿ ಭವನದಲ್ಲಿ ಶನಿವಾರ ಕವಿತಾ ಕೌತುಕ ಸರಣಿ-3 ಕವಿ ಕಾವ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕ ಉಮೇಶ್ ಕೆ.ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ಮುಖ್ಯ ಅತಿಥಿಗಳಾಗಿದ್ದರು. ಸವಿಹೃದಯದ ಕವಿ ಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕ ಮಾತನಾಡಿದರು. ಬಳಿಕ ಕವಿ ಕಾವ್ಯ ಸಂವಾದದಲ್ಲಿ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಂಯೋಜಕರಾಗಿ ಸಂವಾದ ನಡೆಸಿದರು. ಕವಿಗಳಾದ ಎಸ್.ಎನ್.ಭಟ್ ಸೈಪಂಗಲ್ಲು, ವೆಂಕಟ್ ಭಟ್ ಎಡನೀರು, ಸುಂದರ ಬಾರಡ್ಕ, ದೀಕ್ಷಾ ಕೆಜಕ್ಕಾರು, ಹರೀಶ್ ಪೆರ್ಲ, ನಳಿನಿ ಸೈಪಂಗಲ್ಲು, ಗ್ರೀಷ್ಮ ಬಳ್ಳ, ನಿರ್ಮಲ ಸೇಸಪ್ಪ ಖಂಡಿಗೆ, ಆನಂದ ರೈ ಅಡ್ಕಸ್ಥಳ, ವಿಜಯ ಕಾನ, ದೀಕ್ಷಾ ಎಸ್.ಪಿ., ಹರ್ಷಿತಾ ಪಿ., ಪ್ರೇಮಾ ಶೆಟ್ಟಿ, ರಿಷಾ ಪೆರ್ಲ, ದಯಾನಂದ ರೈ ಕಳ್ವಾಜೆ, ಹರೀಶ್, ಶಶಿಕಲಾ, ನಳಿನಿ ಭಾಗವಹಿಸಿದ್ದರು. ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ, ಮಂಜುಶ್ರೀ ನಲ್ಕ ನಿರೂಪಿಸಿದರು. ಆಯಿಷಾ ಎ.ಎ.ಪೆರ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net