ವ್ಯಕ್ತಿತ್ವ ಅಭಿವೃದ್ಧಿಪಡಿಸಿದರೆ ಬದುಕಿನಲ್ಲಿ ಯಶಸ್ಸು : ಉದ್ಯಮಿ ಜೀವನ್ ಕೆ.ಶೆಟ್ಟಿ ಸಲಹೆ

New Project (9)
Published on

ಮೂಲ್ಕಿ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಗಳಿಸಲು ಮತ್ತು ತಮ್ಮ ಬದುಕನ್ನು ಸಾರ್ಥಕಗೊಳಿಸಲು ಕಾಲೇಜು ದಿನಗಳಲ್ಲಿ ವ್ಯಕ್ತಿತ್ವವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯ ಎಂದು ಕಾಲೇಜಿನ ಹಳೇ ವಿದ್ಯಾರ್ಥಿ ಉದ್ಯಮಿ ಜೀವನ್ ಕೆ.ಶೆಟ್ಟಿ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ವಾರ್ಷಿಕ ದಿನದಲ್ಲಿ ಅತಿಥಿಯಾಗಿ ಮಾತನಾಡಿದರು.

ಮುಖ್ಯ ಅತಿಥಿ ಮಂಗಳೂರು ಬೋಸ್ಕೊ ಪಿಯು ಕಾಲೇಜು ಪ್ರಾಂಶುಪಾಲೆ ಡಾ.ವಿಜಯಕುಮಾರಿ ವಿದ್ಯಾರ್ಥಿಗಳ ಕಲಿಕೆ, ಉದ್ಯೋಗಗಳಲ್ಲಿ ತಮ್ಮ ಬದುಕಿನ ಶಿಸ್ತನ್ನು ರೂಢಿಸಿಕೊಳ್ಳಬೇಕಾದ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಉಡುಪಿ ಜನತಾ ಫಿಶ್‌ಮೀಲ್ ಮತ್ತು ಆಯಿಲ್ ಪ್ರೊಡಕ್ಟ್ ಕಂಪನಿ ನಿರ್ದೇಶಕ ಪ್ರಶಾಂತ್ ಆನಂದ್ ಕುಮಾರ್ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಸುಹಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಸದಸ್ಯರಾದ ಪ್ರೊ.ಸ್ಯಾಮ್ ಮಾಬೆನ್, ಎಂ.ಬಿ.ಖಾನ್, ಎಚ್.ರಾಮದಾಸ್ ಕಾಮತ್ ಹಾಗೂ ಕಾಲೇಜಿನ ವಿವಿಧ ಸಂಘಗಳ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಪ್ರಾಪ್ತಿ ಅತಿಥಿಗಳನ್ನು ಸ್ವಾಗತಿಸಿದರು. ಪೃಥ್ವಿ ನಾಯಕ್ ನಿರೂಪಿಸಿದರು. ಪ್ರಥಮ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net