

ಗುರುಪುರ: ಬ್ರಿಟಿಷರು ಈ ದೇಶದಲ್ಲಿ ಧಾರ್ಮಿಕ ಅರಾಜಕತೆ ಹಾಗೂ ಧರ್ಮ-ಧರ್ಮಗಳೊಂದಿಗೆ ವಿಷಬೀಜ ಬಿತ್ತಿ ಜನರನ್ನು ಒಡೆದು ಆಳಿದ್ದರು. ಸಮಸ್ತರ ಸಂಸ್ಮರಣೆಗಾಗಿ 1926ರಲ್ಲಿ ಸ್ಥಾಪಿಸಿದ ಸಮಸ್ತಕ್ಕೆ ಈಗ 100ರ ಸಂಭ್ರಮ. ಭಯೋತ್ಪಾದನೆ, ಮಾದಕ ವ್ಯಸನದಿಂದ ಯುವಜನರ ರಕ್ಷಿಸಿ, ಭವ್ಯ ಭಾರತ ನಿರ್ಮಿಸಬೇಕು ಎಂದು ಇಮಾಮ್ ಇಕ್ಬಾಲ್ ನಿಝಾಮಿ ಹೇಳಿದರು.
ಕುಪ್ಪೆಪದವಿನ ಶಂಸುಲ್ ಉಲಾಮ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನಲ್ಲಿ ಇತ್ತೀಚೆಗೆ 100ನೇ ವಾರ್ಷಿಕ ‘ಸಮಸ್ತ’ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಸಲೀಂ ಹಾಜಿ ಧ್ವಜಾರೋಹಣ ಮಾಡಿದರು. ಸ್ವಾಧಿಕ್ ಹನೀಫಿ, ಶಫಿಯುಲ್ಲ, ಅಬ್ದುಲ್ ಶಕೀರ್, ಅಬ್ದುಲ್ ರಹಿಮಾನ್ ಆಚಾರಿಜೋರ, ಬದ್ರುದ್ಧೀನ್, ಇಲ್ಯಾಸ್, ಶೇಖ್ ಅಬ್ದುಲ್ಲ, ಟಿ.ಉಮರಬ್ಬ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸುಹೈಲ್ ಕಾರ್ಯಕ್ರಮ ನಿರೂಪಿಸಿದರು. ಅರ್ಪಾಝ್ ವಂದಿಸಿದರು.