10ನೇ ಕ್ಲಾಸ್‌ನಲ್ಲಿ ಸಮಂತಾ ಪಡೆದ ಮಾರ್ಕ್ಸ್ ಎಷ್ಟು ಗೊತ್ತಾ?

Samantha Final
Published on

ಟಾಲಿವುಡ್‌ನ ಟಾಪ್ ನಟಿಯಾಗಿ ಗುರುತಿಸಿಕೊಂಡವರು ಸಮಂತಾ ಅಕ್ಕಿನೇನಿ. ನಟಿಯಾಗಷ್ಟೇ ಅಲ್ಲ, ಸ್ಕೂಲ್‌ನಲ್ಲಿದ್ದಾಗಲೂ ಸಮಂತಾ ಟಾಪರ್ ಎಂಬ ವಿಷಯವೊಂದು ಇದೀಗ ಹೊರಬಿದ್ದಿದೆ.

ಹೌದು, ಸ್ಕೂಲ್‌ನಲ್ಲೂ ಸಮಂತಾ ಟಾಪರ್ ಆಗಿದ್ದರು. ಅದಕ್ಕೆ ಉದಾಹರಣೆ, ಅವರ ಮಾರ್ಕ್ಸ್ ಕಾರ್ಡ್. ಸಮಂತಾ ಅವರ 10ನೇ ಕ್ಲಾಸ್‌ನ ಮಿಡ್ ಟರ್ಮ್‌ನ ಮಾರ್ಕ್ಸ್ ಕಾರ್ಡ್‌ನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ಮಾರ್ಕ್ಸ್ ಕಾರ್ಡ್ ನೋಡಿದವರೆಲ್ಲಾ, ಸಮಂತಾ ಈಗಷ್ಟೇ ಅಲ್ಲ, ಆಗಲೂ ಟಾಪರ್ ಆಗಿದ್ದರು ಎಂದು ಕೊಂಡಾಡುತ್ತಿದ್ದಾರೆ.

ಸಮಂತಾ ಓದಿದ್ದು ಚೆನ್ನೈನ ಪಲ್ಲಾವರಂನಲ್ಲಿರುವ ಸೇಂಟ್ ಸ್ಟೀನ್ ಮೆಟ್ರಿಕ್ಯೂಲೇಶನ್ ಸ್ಕೂಲ್‌ನಲ್ಲಿ. 2001-02ನೇ ಸಾಲಿನಲ್ಲಿ 10ನೇ ಕ್ಲಾಸ್ ಓದಿದ್ದ ಸಮಂತಾ, ಸಾವಿರಕ್ಕೆ 887 ಮಾರ್ಕ್ಸ್ ತೆಗೆಯುವ ಮೂಲಕ ಟಾಪರ್ ಎಂದನಿಸಿಕೊಂಡಿದ್ದಾರೆ. ಅದರಲ್ಲೂ ಗಣಿತದಲ್ಲಿ ಅವರದ್ದು ನೂರಕ್ಕೆ ನೂರು ಅಂಕ. ಗಣಿತದ ಎರಡನೆಯ ಭಾಗದಲ್ಲಿ 100ಕ್ಕೆ 99 ಅಂಕಗಳು. ಇನ್ನು ಇಂಗ್ಲೀಷ್, ಫಿಸಿಕ್ಸ್, ಹಿಸ್ಟರ್ ವಿಷಯಗಳಲ್ಲಿ ಅವರಿಗೆ 90ಕ್ಕೂ ಹೆಚ್ಚು ಅಂಕಗಳು ಬಂದಿವೆ.

ಬರೀ ಒಳ್ಳೆಯ ಅಂಕಗಳನ್ನು ಪಡೆಯುವುದಷ್ಟೇ ಅಲ್ಲ, ಆಕೆ ಈ ಶಾಲೆಗೆ ಒಂದು ಆಸ್ತಿ ಇದ್ದಂತೆ ಎಂದು ಟೀಚರ್‌ನಿಂದ ಸಿಕ್ಕಾಪಟ್ಟೆ ಹೊಗಳಿಸಿಕೊಂಡಿದ್ದಾರೆ ಸಮಂತಾ.

ಸೋಷಿಯಲ್ ಮೀಡಿಯಾದಲ್ಲಿ ಈ ಅಂಕಪಟ್ಟಿಯನ್ನು ನೋಡಿರುವ ಸಮಂತಾ, ‘ಈ ಮಾರ್ಕ್ಸ್ ಕಾರ್ಡ್ ಮತ್ತೊಮ್ಮೆ ಕಾಣಿಸಿಕೊಂಡಿದೆ’ ಎಂದು ಖುಷಿಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net