ನಾಗ ಚೈತನ್ಯ ಜೊತೆ ಸಮಂತಾ ವಿಚ್ಛೇದನಕ್ಕೆ ಕಾರಣ ಆಕೆಯೇ? ವರ್ಷಗಳ ಬಳಿಕ ಬಹಿರಂಗಪಡಿಸಿದ ಸಮಂತಾ!

naga chaithnya- samantha
Published on

ಹೈದರಾಬಾದ್: ತನ್ನ ಸೌಂದರ್ಯ ಮತ್ತು ನಟನೆಯಿಂದ ಸಾವಿರಾರು ಅಭಿಮಾನಿಗಳ ಮನ ಗೆದ್ದಿದ್ದ ನಟಿ ಸಮಂತಾ ಇತ್ತೀಚೆಗೆ ತನ್ನ ವೈಯಕ್ತಿಕ ಜೀವನದಿಂದ ಸಾಕಷ್ಟು ಬಾರಿ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ವೈಯಕ್ತಿಕ ವಿಷಯಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇತ್ತೀಚೆಗಷ್ಟೇ ತನ್ನ ಮಾಜಿ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನಕ್ಕೆ ಕಾರಣವಾದ ಮಹಿಳೆ ಬಗ್ಗೆ ಹಾಕಿರುವ ಪೋಸ್ಟ್​ ಫುಲ್ ಟ್ರೆಂಡ್ ಆಗುತ್ತಿದೆ.

ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರೂ, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. ಎರಡನೇ ಮದುವೆ ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗಿನ ಸಂಬಂಧದ ಬಗ್ಗೆ ವಿವಿಧ ಗಾಸಿಪ್‌ಗಳಿವೆ. ಸಮಂತಾ ವಿಷಯಕ್ಕೆ ಬಂದರೆ, ವಿಚ್ಛೇದನದ ನಂತರವೂ ಅವರು ಹಲವು ಸಿನಿಮಾಗಳಲ್ಲಿ ಮಿಂಚಿದರು. ಈ ನಡುವೆ ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿ ಸಿನಿಮಾಗಳಿಗೆ ಬ್ರೇಕ್ ಕೊಟ್ಟರು. ವಿದೇಶ ಪ್ರವಾಸದಲ್ಲಿ ಒಂದು ವರ್ಷ ಕಳೆದ ಸಮಂತಾ . ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.

ಆಕೆ ತನ್ನ ವೈಯಕ್ತಿಕ ಜೀವನ ಅಥವಾ ಪ್ರವಾಸಗಳ ಚಿತ್ರಗಳನ್ನು ಕಾಲಕಾಲಕ್ಕೆ ಪೋಸ್ಟ್ ಮಾಡುತ್ತಾಳೆ. ಹೀಗಾಗಿಯೇ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಕ್ರಮದಲ್ಲಿ, ಇತ್ತೀಚೆಗೆ ಆಸಕ್ತಿದಾಯಕ ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಮಲೇಷ್ಯಾದಲ್ಲಿರುವ ತನ್ನ ಸ್ನೇಹಿತೆಯೊಂದಿಗೆ ಫೋಟೋ ಹಂಚಿಕೊಂಡಿದ್ದಾಳೆ. ಹುಡುಗಿಯ ಹೆಸರು ಮೇಘನಾ. ನನ್ನ ಒಳ್ಳೆ ನಿರ್ಧಾರಗಳಿಗೆ ಮುಖ ಹಾಕಿದದ್ದಾಳೆ ಮೇಘನಾಎಂದು ಕಮೆಂಟ್ ಕೂಡ ಬರೆಯಲಾಗಿತ್ತು. ಈ ಪೋಸ್ಟ್ ಈಗ ನೆಟ್‌ನಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ಈ ಪೋಸ್ಟ್ ಅನ್ನು ನೋಡಿ 'ಇದು ವಿಚ್ಛೇದನದ ನಿರ್ಧಾರದ ಹಿಂದೆ ಇದೆಯೇ?' ಎಂದು ವಿಪರೀತವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದರೆ, ಸಮಂತಾ- ನಾಗ ಚೈತನ್ಯ ಮಧ್ಯೆ ಎಂಟ್ರಿ ಕೊಟ್ಟಿದ್ದ ಆ ಮಹಿಳೆ ಮೇಘನಾ ಆಗಿದ್ದಾರಾ ಎಂಬ ಚರ್ಚೆ ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net