More

    ಸಂಸತ್ ಅಧಿವೇಶ ಕರೆದು ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ತರಬೇಕು: ಕೇಂದ್ರಕ್ಕೆ ಪಂಧೇರ್ ಒತ್ತಾಯ

    ನವದೆಹಲಿ: ರೈತರ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ತರಲು ಕೇಂದ್ರವು ಒಂದು ದಿನದ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಒತ್ತಾಯಿಸಿದರು.

    ಇದನ್ನೂ ಓದಿ:ಸದ್ದು ಮಾಡುತ್ತಿದೆ ‘ರೆಕಾರ್ಡ್ ಬ್ರೇಕ್’ ಟ್ರೇಲರ್

    ಐದು ವರ್ಷ ಸರ್ಕಾರಿ ಏಜೆನ್ಸಿಗಳಿಂದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕರಿಸಿದ ಒಂದು ದಿನದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರವು ಒಂದು ದಿನದ ಸಂಸತ್ ಅಧಿವೇಶನವನ್ನು ಕರೆದು ಶಾಸನವನ್ನು ತರಲು ಒತ್ತಾಯಿಸಿದರು.

    ಎಲ್ಲ ಬೆಳೆಗಳಿಗೂ ಎಂಎಸ್‌ಪಿ ತರಬೇಕೆಂಬುದು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾಗಿದೆ. ಕೃಷಿ ಸಾಲ ಮನ್ನಾ ಸೇರಿದಂತೆ ರೈತರ ಇತರ ಪ್ರಮುಖ ಬೇಡಿಕೆಗಳನ್ನು ಕೇಂದ್ರವು ಅಂಗೀಕರಿಸಬೇಕು. ಪಂಧೇರ್ ಹೇಳಿದರು.
    ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನನ್ನು ತರಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಧಾನಿ ಮೋದಿ ಅವರು ಇಚ್ಛಾಶಕ್ತಿ ತೋರಿ ಸಂಸತ್ತಿನ ಒಂದು ದಿನದ ಅಧಿವೇಶನ ಕರೆಯಬೇಕು. ವಿರೋಧ ಪಕ್ಷಗಳು ಅದನ್ನು ವಿರೋಧಿಸುವುದಿಲ್ಲ ಎಂಬ ವಿಶ್ವಾಸವಿದೆ. ಕೇಂದ್ರವು ಎಂಎಸ್​ಪಿ ಮೇಲೆ ಕಾನೂನನ್ನು ತಂದರೆ, ಅದಕ್ಕೆ ಮತ ಹಾಕುವ ಕುರಿತು ಎಲ್ಲಾ ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

    ಏತನ್ಮಧ್ಯೆ ಪಂಜಾಬ್ ಮತ್ತು ಹರಿಯಾಣದ ಗಡಿಗಳಲ್ಲಿ ಬೀಡುಬಿಟ್ಟಿರುವ ಸಾವಿರಾರು ಪ್ರತಿಭಟನಾಕಾರರು ಬುಧವಾರ ದೆಹಲಿಯತ್ತ ಮೆರವಣಿಗೆ ನಡೆಸಲು ಸಿದ್ಧರಾಗಿದ್ದಾರೆ. ಫೆಬ್ರವರಿ 21 ರಂದು ನಡೆಯಲಿರುವ “ದೆಹಲಿ ಚಲೋ” ಮೆರವಣಿಗೆಯಲ್ಲಿ ನೆರೆಯ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಿಂದ ಹೆಚ್ಚಿನ ಸಂಖ್ಯೆಯ ರೈತರು ಪಂಜಾಬ್‌ನ ಪ್ರತಿಭಟನಾ ನಿರತ ರೈತರೊಂದಿಗೆ ಸೇರಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ.
    ಪ್ರತಿಭಟನಾಕಾರರು ರಾಷ್ಟ್ರ ರಾಜಧಾನಿಗೆ ಬಲವಂತವಾಗಿ ಪ್ರವೇಶಿಸದಂತೆ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೆ ಶಾಂತಿಯುತವಾಗಿ ದೆಹಲಿಯತ್ತ ಸಾಗಲು ನಮಗೆ ಅವಕಾಶ ಮಾಡಿಕೊಡಿ ಎಂದು ರೈತರು ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ.

    ಪಂಜಾಬ್​ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಫೆಬ್ರವರಿ 13 ರಂದು ರೈತರು ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಆದರೆ ಭದ್ರತಾ ಪಡೆಗಳು ತಡೆದಿದ್ದು, ಇದು ಘರ್ಷಣೆಗೆ ಕಾರಣವಾಯಿತು. ಈ ನಡುವೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಟ್ರಾಲಿಗಳನ್ನು ಬಳಸುವಂತಿಲ್ಲ ಎಂದು ಹೇಳಿದೆ.

    ಪ್ರಿಯಾಂಕ್ ಮಾತಿಗೆ ತಬ್ಬಿಬ್ಬಾದ ಬೊಮ್ಮಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts