ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಿಯೆ, ಇನ್ಸ್​​​​ಟಾಗ್ರಾ ಪೋಸ್ಟ್​ ವೈರಲ್​..! |Samantha Reacts

sam mix
Published on

ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಅವರ ವಿವಾಹಕ್ಕೂ ಮುನ್ನ ಸಮಂತಾ ನ್‌ಸ್ಟಾಗ್ರಾಮ್ ಖಾತೆಯಲ್ಲಿ ಕವನವೊಂದನ್ನು ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ.

ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುವುದರ ಜೊತೆಗೆ, ಸಮಂತಾ ಸಾಕಷ್ಟು ವಿಷಯಗಳನ್ನು ತಮ್ಮ ಇನ್ಸ್​​ಟಾಗ್ರಾಂ ಫಾಲೋವರ್ಸ್​​ ಜತೆಗೆ ಹಂಚಿಕೊಳ್ಳುತ್ತಾರೆ. ದೀಗ ಎಲ್ಲೆಡೆ ಸಮಂತಾ ಅವರ ಮಾಜಿ ಪತಿ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ಕುರಿತಾದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆ ಪೋಸ್ಟ್​ ಏನು ಅಂತಾ ನೋಡೋದಾದ್ರೆ

ಡಿಸೆಂಬರ್​​ ತಿಂಗಳಲ್ಲಿ ಶೋಭಿತಾ-ನಾಗಚೈತನ್ಯ ಮದುವೆ ನಡೆಯಲಿದ್ದು, ರುಡ್ಯಾರ್ಡ್ ಕಿಪ್ಲಿಂಗ್ ಬರೆದ ಪ್ರಸಿದ್ಧ ಇಂಗ್ಲಿಷ್ ಕವಿತೆಯನ್ನು ನಟಿ ಸಮಂತಾ ಇದೀಗ ಹಂಚಿಕೊಂಡಿದ್ದು, ಕಷ್ಟದ ಸಮಯದಲ್ಲಿ ಈ ಕವಿತೆ ತನಗೆ ಮಾರ್ಗದರ್ಶನ ನೀಡುತ್ತದೆ ಎಂದು ನಟಿ ಸಮಂತಾ ಇನ್ಸ್​​ಟಾ ಪೋಸ್ಟ್​ ಮಾಡಿದ್ದಾರೆ. ಈ ಕವಿತೆ ಯಾವಾಗಲೂ ಅವರಿಗೆ ದಾರಿದೀಪವಾಗಿದೆ, ಅದಕ್ಕಾಗಿಯೇ ನಾನು ಅದನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಶೀರ್ಷಿಕೆ ಬರೆದಿದ್ದಾರೆ.

ಶಾಂತವಾಗಿ ಉಳಿಯುವ ಶಕ್ತಿಯನ್ನು ಪಡೆಯುವುದು ಹೇಗೆ ಶಕ್ತಿಯನ್ನು ಕಾಪಾಡಿಕೊಳ್ಳುವುದು, ತರ್ಕಬದ್ಧ ಚಿಂತನೆ .. ಅಂದರೆ ನಿಮ್ಮ ಸುತ್ತಲಿರುವ ವಿಷಯದ ಮೇಲೆ ನೀವು ನಿಯಂತ್ರಣ ಅಥವಾ ಸ್ಥೈರ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಈ ಕವನ ಸಾರಿ ಹೇಳುತ್ತದೆ.

ಕವಿತೆ ತಾಳ್ಮೆಯ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ, ಒತ್ತಡದಲ್ಲಿ ಶಾಂತವಾಗಿರುವುದು ಮತ್ತು ಪ್ರಾಮಾಣಿಕವಾಗಿರುವುದು. ಗೆಲುವುಗಳನ್ನು ಸಮಾನವಾಗಿ ಕಾಣಲು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಪ್ರೋತ್ಸಾಹಿಸುತ್ತದೆ ಎಂದು ಸಮಂತಾ ಅವರು ಬರೆದುಕೊಂಡಿದ್ದು, ಸಮಂತಾ ನಾಗ-ಶೋಭಿತಾ ಮದುವೆಯ ಹಿನ್ನೆಲೆ ಈ ಪೋಸ್ಟ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net