ನಾಲ್ಕನೇ ಬಾರಿ ಒಂದಾಗುತ್ತಿದ್ದಾರೆ ಸಮಂತಾ-ನಾಗಚೈತನ್ಯ; ಓಹ್​ ಬೇಬಿ ನಿರ್ದೇಶಕಿಯಿಂದ ಮತ್ತೊಂದು ರಿಮೇಕ್​?

Samantha-Embarrassing-Question-to-Naga-Chaitanya
Published on

ರಿಯಲ್​ ಲೈಫ್​ ಜೋಡಿ ಸಮಂತಾ ಮತ್ತು ನಾಗಚೈತನ್ಯ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಯೇ ಮಾಯೇ ಚೇಸಾವೆ‘, ‘ಆಟೋನಗರ ಸೂರ್ಯ’ ಮತ್ತು ‘ಮಜಿಲಿ‘ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ನಾಲ್ಕನೇ ಬಾರಿ ಈ ಜೋಡಿ ಒಂದಾಗುತ್ತಿದೆ. ವಿಶೇಷ ಏನೆಂದರೆ, ಸಮಾಂತಾ ಮುಖ್ಯಭೂಮಿಕೆ ನಿಭಾಯಿಸಿದ್ದ ಓಹ್​ ಬೇಬಿ ಚಿತ್ರವನ್ನು ನಿರ್ದೇಶಿಸಿದ್ದ ನಂದಿನಿ ರೆಡ್ಡಿ, ಈ ಹೊಸ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ.
ಹಾಗಾದರೆ, ಕಥೆ ಎಂಥದ್ದು? ಅದಕ್ಕೂ ಉತ್ತರ ಸಿಕ್ಕಿದ್ದು, ನಿರ್ದೇಶಕಿ ನಂದಿನಿ ಈ ಬಾರಿಯೂ ಕೊರಿಯನ್​ ಸಿನಿಮಾವನ್ನು ತೆಲುಗಿಗೆ ಭಟ್ಟಿ ಇಳಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅವರು ಈ ಹಿಂದೆ ನಿರ್ದೇಶಿಸಿದ್ದ ಓಹ್​ ಬೇಬಿ ಸಿನಿಮಾ ಸಹ ಕೊರಿಯನ್​ ಮೂಲದ್ದು.
ಸದ್ಯ ಟಾಲಿವುಡ್​ನಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, ಅಧಿಕೃತವಾಗಿ ಯಾವುದೂ ಅಂತಿಮವಾಗಿಲ್ಲ. ಇದು ಒಂದೆಡೆಯಾದರೆ, ಸದ್ಯ ಸಮಂತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಹಾಗಾಗಿ ಸಿನಿಮಾ ಒಪ್ಪಿಕೊಳ್ಳುವುದನ್ನು ಕೈಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಆ ಬಗ್ಗೆಯೂ ಅಕ್ಕಿನೇನಿ ಕುಟುಂಬದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
(ಏಜೆನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net