ಆ ಪಾತ್ರದಲ್ಲಿ ನಟಿಸಲು ಯಾರೂ ಮುಂದೆ ಬರಲಿಲ್ಲ..ಸಲ್ಮಾನ್​ ಕೇವಲ 1ರೂ. ಪಡೆದು ನಟಿಸಿದ್ದು ಯಾಕೆ ಗೊತ್ತಾ?

ಮುಂಬೈ: ಫಿರ್ ಮಿಲೇಂಗೆ ಚಿತ್ರದಲ್ಲಿ ಸಲ್ಮಾನ್ ಖಾನ್ ಎಚ್‌ಐವಿ ರೋಗಿಯ ಪಾತ್ರದಲ್ಲಿ ನಟಿಸಿದ್ದು, ಈ ಪಾತ್ರಕ್ಕೆ ಜೀವ ತುಂಬಲು ಯಾವುದೇ ನಟ ಸಿದ್ಧರಿರಲಿಲ್ಲ ಎಂದು ನಿರ್ಮಾಪಕ ಶೈಲೇಂದ್ರ ಸಿಂಗ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ‘ಎಷ್ಟು ದಿನ ಕಣ್ಣು ಮುಚ್ಚಿರುತ್ತೀರಿ?’: ಬಿಜೆಪಿ ವಿರುದ್ಧ ರಾಹುಲ್ ಆಕ್ರೋಶ

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್​ ಹಾಕಿರುವ ಶೈಲೇಂದ್ರ ಸಿಂಗ್, ‘ಸಲ್ಮಾನ್ ಖಾನ್ ಚಿತ್ರಕ್ಕೆ ಕೇವಲ ಒಂದು ರೂಪಾಯಿ ಶುಲ್ಕವನ್ನು ವಿಧಿಸಿದ್ದರು. ಚಿತ್ರದಲ್ಲಿ, ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ಕ್ಲೈಮ್ಯಾಕ್ಸ್‌ನಲ್ಲಿ ಎಚ್‌ಐವಿ ಸೋಂಕಿಗೆ ಒಳಗಾಗುತ್ತಾರೆ ಮತ್ತು ಸಾಯುತ್ತಾರೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಯಾರೂ ಈ ರೀತಿಯ ಪಾತ್ರ ಮಾಡಲು ಸಿದ್ಧರಿರಲಿಲ್ಲ. ಆಗ ನಾನು ಸಲ್ಮಾನ್ ಖಾನ್ ಗೆ ಕರೆ ಮಾಡಿ ಕೇಳಿಕೊಂಡಿದ್ದೆ. ಅವರು ಒಪ್ಪಿದರು ಎಂದು ವಿವರಿಸಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಲ್ಮಾನ್ ಪಾತ್ರ ಸಾಯುವುದನ್ನು ಅಭಿಮಾನಿಗಳು ಒಪ್ಪುವುದಿಲ್ಲ. ಆದರೆ ಇದು ಇಡೀ ದೇಶಕ್ಕೆ ಸಂದೇಶವನ್ನು ರವಾನಿಸಿದೆ. ಈ ಚಿತ್ರ ಕೇವಲ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿಲ್ಲ, ಟಿವಿಯಲ್ಲಿಯೂ ಸಹ ಪ್ರದರ್ಶನಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಫಿರ್ ಮಿಲೇಂಗೆ 2004 ರಲ್ಲಿ ಬಿಡುಗಡೆಯಾಗಿದ್ದು, ರೇವತಿ ನಿರ್ದೇಶಿಸಿದ್ದರು. ಸಲ್ಮಾನ್ ಖಾನ್ ಜೊತೆಗೆ ಶಿಲ್ಪಾ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಕೂಡ ನಟಿಸಿದ್ದರು.

ಸಿಜೆಐ ಮನೆಯ ಗಣೇಶ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ..ಶಿವಸೇನೆ ಸಂಸದ ಟೀಕೆ!

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…