ಸಲ್ಮಾನ್​ ಖಾನ್​ ಟೈಗರ್ ಸರಣಿಯ ಮೂರನೇ ಚಿತ್ರ ನಿರ್ದೇಶಿಸುವವರು ಇವರೇ!

tiger2
Published on

ಸಲ್ಮಾನ್​ ಖಾನ್​ ಸಿನಿಮಾ ಬತ್ತಳಿಕೆಯಲ್ಲಿ ಟೈಗರ್ ಸರಣಿಯ ಸಿನಿಮಾಗಳು ಯಶಸ್ವಿ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈಗಾಗಲೇ ಬಿಡುಗಡೆಯಾದ ಏಕ್​ ಥಾ ಟೈಗರ್​ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಗಳಿಕೆ ವಿಚಾರದಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿವೆ. ಹೀಗಿರುವಾಗಲೇ ಇದೀಗ ಇದೇ ಸರಣಿಯ ಮೂರನೇ ಸಿನಿಮಾ ಬಗ್ಗೆ ಬಾಲಿವುಡ್​ನಲ್ಲಿ ಟಾಕ್ಸ್ ಶುರುವಾಗಿವೆ.

ಏಕ್​ ಥಾ ಟೈಗರ್ ಚಿತ್ರವನ್ನು ಕಬೀರ್​ ಖಾನ್​ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಟೈಗರ್ ಜಿಂದಾ ಹೈ ಚಿತ್ರಕ್ಕೆ ಅಲಿ ಅಬ್ಬಾಸ್​ ಜಾಫರ್ ಆ್ಯಕ್ಷನ್​ ಕಟ್ ಹೇಳಿದ್ದರು. ಮೂರನೇ ಸರಣಿಗೆ ಯಥಾ ಪ್ರಕಾರ ಕಬೀರ್​ ಖಾನ್​ ಮುಂದುವರಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಅವರ ಹೆಸರ ಬದಲಿಗೆ ಮನೀಶ್​ ಶರ್ಮಾ ಹೆಸರು ಕೇಳಿಬರುತ್ತಿದೆ.

ಬಾಲಿವುಡ್​ನಲ್ಲಿ ಕೆಲ ವರ್ಷಗಳ ಹಿಂದೆ ಬ್ಯಾಂಡ್​ ಬಾಜಾ ಭಾರತ್​ ಸಿನಿಮಾಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದ ಮನೀಶ್​ ಶರ್ಮಾ, ಸಲ್ಮಾನ್​ ಖಾನ್​ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕ ಆದಿತ್ಯಾ ಚೋಪ್ರಾ ಹೊಸ ನಿರ್ದೇಶಕನಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಮನೀಶ್​ಗೆ ಚಾನ್ಸ್ ನೀಡುತ್ತಿದ್ದಾರಂತೆ.

ಎಲ್ಲ ಅಂದುಕೊಂಡಂತೆ ಆದರೆ, ಸೆಪ್ಟೆಂಬರ್​ 27ರ ಯಶ್ ರಾಜ್​ ಅವರ ಜಯಂತಿ ದಿನದಂದು ಈ ಸಿನಿಮಾ ಘೋಷಣೆ ಆಗುವ ಸಾಧ್ಯತೆಗಳಿವೆ. ಸದ್ಯ ರಾಧೆ ಸಿನಿಮಾ ಶೂಟಿಂಗ್​ನಲ್ಲೂ ಸಲ್ಮಾನ್​ ಭಾಗವಹಿಸಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net