More

    ಟೈಗರ್​-3 ಟೀಸರ್ ಸದ್ದು…ಸೋತ ಸಲ್ಮಾನ್​ಗೆ ಕೊಡುತ್ತಾ ಮರುಜೀವ?

    ಮುಂಬೈ: ಸಲ್ಮಾನ್ ಖಾನ್ ಅವರ ಟೈಗರ್ ಸಿರೀಸ್‌ನ ಪಾರ್ಟ್3(Tiger 3) ಟ್ರೈಲರ್ ಸದ್ದು ಮಾಡುತ್ತಿದೆ.ಈ ಚಿತ್ರ ಸೋಲಿನ ಸುಳಿಯಲ್ಲಿರುವ ಭಜರಂಗಿ ಭಾಯ್​ಜಾನ್​ಗೆ ಮರುಜೀವ ಕೊಡುತ್ತಾ? ಎಂಬುದು ಚಿತ್ರರಂಗದಲ್ಲಿ ಚರ್ಚಿತ ವಿಷಯವಾಗಿದೆ.

    ಇದನ್ನೂ ಓದಿ: ಬೀದಿ ವ್ಯಾಪಾರಿಗಳಿಗೆ ಗೂಗಲ್ ಪೇ ಸಾಲ!

    ಒಂದು ಕಾಲದಲ್ಲಿ ಸಲ್ಲುಭಾಯ್ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹಣದ ಹೊಳೆ ಹರಿಸುತ್ತಿದ್ದವು. ಆದರೆ ಈಗ ಸೋತಲ್ಲೇ ಗೆಲ್ಲಲು ಸಲ್ಮಾನ್ ಯೋಚಿಸಿದಂತಿದೆ. ಹಿಂದಿನ ಏಕ್ ಥಾ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಸಲ್ಮಾನ್‌ಗೆ ನಿರಾಸೆ ಮಾಡಿರಲಿಲ್ಲ. ಇದೀಗ ಅದಕ್ಕಿಂತಲೂ ಅಡ್ವಾನ್ಸ್ ಆಗಿ ಬರುತ್ತಿದೆ ಟೈಗರ್ 3 ಸಿನಿಮಾ.

    ಟೈಗರ್ 3 ಟ್ರೈಲರ್ ರಿಲೀಸ್ ಆಗಿದೆ. ಬ್ಯಾಡ್ ಬಾಯ್ ಅಬ್ಬರಿಸಿದ್ದಾರೆ. ಅವರ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿದ್ದು, ನಿರೀಕ್ಷೆ ಮೂಡಿಸುತ್ತಿವೆ. ಇದೇ ದೀಪಾವಳಿ ಹಬ್ಬಕ್ಕೆ ಟೈಗರ್ 3 ಬಿಡುಗಡೆಯಾಗಲಿದೆ.

    ಇನ್ನು ಸಲ್ಮಾನ್ ಖಾನ್ ಜೊತೆ ಕತ್ರೀನಾಕೈಫ್​ ಮತ್ತೆ ತೆರೆ ಹಂಚಿಕೊಂಡಿದ್ದು, ಇವರಿಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಯಾವ ರೀತಿ ವರ್ಕೌಟ್ ಆಗುತ್ತದೆ ಎಂಬುದು ಕುತೂಹಲವಾಗಿದೆ. ಅರಿಜಿತ್ ಸಿಂಗ್ ಸಲ್ಮಾನ್ ಖಾನ್ ಗಾಗಿ ಹಾಡಿರುವ ಮೊದಲ ಹಾಡು ಲೇಕೆ ಪ್ರಭು ಕಾ ನಾಮ್ ಕೆಲವು ಸೆಕೆಂಡುಗಳ ಕಾಲ ಗಮನಸೆಳೆಯುತ್ತದೆ. ಕತ್ರಿನಾ ಕೈಫ್ ಹಲವು ಬಣ್ಣದ ಬಟ್ಟೆಗಳನ್ನು ತೊಟ್ಟು ನರ್ತಿಸಿದರೆ, ಸಲ್ಮಾನ್ ಕೆಂಪು ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಆದಿತ್ಯಾ ಚೋಪ್ರಾ ಚಿತ್ರ ಅದ್ಧೂರಿಯಾಗಿ ಮೂಡಿಬರಲು ಬಂಡವಾಳ ಹೂಡಿದ್ದಾರೆ.

    Ghost Movie Review ; ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಶಿವತಾಂಡವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts