More

    ಹೊಸ ಚಿತ್ರದಲ್ಲಿ ಭಾಯ್ಜಾನ್ ಆದ ಸಲ್ಮಾನ್ ಖಾನ್ …

    ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ರಾಧೇ ಚಿತ್ರವು ಮೇ 13ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಲಾಕ್​ಡೌನ್​ ಇಲ್ಲದಿದ್ದರೆ ಬಹುಶಃ ಅವರ ಅಭಿನಯದ ಹೊಸ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​​ ಕಾರಣ ಆ ಚಿತ್ರದ ಚಿತ್ರೀಕರಣ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಆಮೀರ್ ಖಾನ್ ಎಲ್ಲಿ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

    ಈ ಮಧ್ಯೆ, ಸಲ್ಮಾನ್​ ಅಭಿನಯದ ಆ ಚಿತ್ರದ ಹೆಸರು ಬದಲಾವಣೆಯಾಗಿದೆ. ಈ ಮುನ್ನ, ಚಿತ್ರಕ್ಕೆ ಕಭಿ ಈದ್​ ಕಭಿ ದಿವಾಳಿ ಎಂಬ ಹೆಸರನ್ನು ಇಡಲಾಗಿತ್ತು. ಆದರೆ, ಚಿತ್ರತಂಡದವರಿಗೇ ಈ ಹೆಸರಿನ ಬಗ್ಗೆ ವಿಶ್ವಾಸವಿರಲಿಲ್ಲ. ಹೆಸರು ಬದಲಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು.

    ಇದೀಗ ಚಿತ್ರದ ಹೆಸರು ಬದಲಾಗಿದ್ದು, ಚಿತ್ರಕ್ಕೆ ಭಾಯ್​ಜಾನ್​ ಎಂಬ ಹೆಸರನ್ನು ಇಡಲಾಗಿದೆಯಂತೆ. ಕಭಿ ಈದ್​ ಕಭಿ ದಿವಾಳಿಗಿಂತ ಈ ಹೆಸರು ಸರಳವಾಗಿದ್ದು, ಚಿತ್ರದ ಕಥೆಗೆ ಸೂಕ್ತವಾಗಿದೆಯಂತೆ. ಮೇಲಾಗಿ, ಸಲ್ಮಾನ್​ಗೆ ಹಲವರು ಭಾಯ್​ಜಾನ್​ ಎಂದು ಕರೆಯುವುದರಿಂದ, ಈ ಹೆಸರೇ ಸೂಪರ್​ ಆಗಿದೆ ಎಂದು ನಿರ್ಮಾಪಕ-ನಿರ್ದೇಶಕ ಸಾಜಿದ್​ ನಡಿಯಾಡ್​ವಾಲಾಗೆ ಅನಿಸುತ್ತಿದ್ದಂತೆಯೇ, ಅವರು ಹೆಸರು ರಿಜಿಸ್ಟರ್​ ಮಾಡಿಸುವುದರ ಜತೆಗೆ, ಚಿತ್ರಕ್ಕೆ ಭಾಯ್​ಜಾನ್​ ಎಂದು ಮರುನಾಮಕರಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಮದ್ವೆಯಾದ 2 ವರ್ಷಕ್ಕೆ ಡಿವೋರ್ಸ್​: ಖ್ಯಾತ ನಿರ್ದೇಶಕನ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಹೀರೋಯಿನ್!

    ಭಾಯ್​ಜಾನ್​ ಚಿತ್ರದಲ್ಲಿ ಸಲ್ಮಾನ್​ ಖಾನ್​ಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ವರ್ಷದ ಕೊನೆಯಲ್ಲಿ ಶುರುವಾಗುವ ನಿರೀಕ್ಷೆ ಇದೆ.

    ಸಾರಾ, ಅನನ್ಯ ನಿರಾಕರಿಸಿದ ಕಾಂಡೋಮ್​ ಟೆಸ್ಟರ್ ಪಾತ್ರವನ್ನು ರಾಕುಲ್​ ಒಪ್ಪಿಕೊಂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts