ಮುಂಬೈ: ತಮ್ಮ ಹೊಸ ಚಿತ್ರ ‘ರಾಧೆ’ಯ ಪೈರೆಸಿಯಲ್ಲಿ ತೊಡಗದಂತೆ ನಟ ಸಲ್ಮಾನ್ ಖಾನ್ ಮನವಿ ಮಾಡಿದ್ದಾರೆ. ಸೈಬರ್ ಸೆಲ್ನವರು ಪೈರೇಟೆಡ್ ಸೈಟ್ಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ಅದರಲ್ಲಿ ಶಾಮೀಲಾಗಿ ತೊಂದರೆಗೆ ಸಿಕ್ಕುಹಾಕಿಕೊಳ್ಳಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ರಾಧೆ : ಯುವರ್ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರವು ಮೇ 13 ರಂದು ಜೀ5ನ ಜೀಪ್ಲೆಕ್ಸ್ ಪೇ-ಪರ್-ವ್ಯೂ ಸೇವೆಯಲ್ಲಿ ಬಿಡುಗಡೆಯಾಗಿದೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿರುವ ಸಲ್ಮಾನ್, “ನಮ್ಮ ಚಿತ್ರ ರಾಧೆಯನ್ನು ಒಂದು ವೀಕ್ಷಣೆಗೆ 249 ರೂ.ಗಳಂತೆ ಸಮಂಜಸವಾದ ಬೆಲೆಯಲ್ಲಿ ವೀಕ್ಷಿಸಲು ನಾವು ಅವಕಾಶ ನೀಡಿದ್ದೇವೆ. ಆದಾಗ್ಯೂ ಕೆಲವು ಪೈರೇಟೆಡ್ ಸೈಟ್ಗಳು ಚಿತ್ರವನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿದ್ದು, ಅದು ಗಂಭೀರ ಅಪರಾಧವಾಗಿದೆ. ಸೈಬರ್ ಸೆಲ್ ಈ ಎಲ್ಲಾ ಅಕ್ರಮ ಸೈಟ್ಗಳ ಮೇಲೆ ಕ್ರಮ ತೆಗೆದುಕೊಳ್ಲುತ್ತಿದೆ. ದಯವಿಟ್ಟು ರಾಧೆಯ ಪೈರೆಸಿಯಲ್ಲಿ ತೊಡಗಬೇಡಿ. ಅರ್ಥ ಮಾಡಿಕೊಳ್ಳಿ, ನೀವು ಸೈಬರ್ ಸೆಲ್ನವರಿಂದ ಭಾರೀ ತೊಂದರೆಗೆ ಒಳಗಾಗುತ್ತೀರಿ” ಎಂದು ಎಚ್ಚರಿಕೆಯನ್ನು ಪೋಸ್ಟ್ ಮಾಡಿದ್ದಾರೆ.
— Salman Khan (@BeingSalmanKhan) May 15, 2021
ಸಿನಿಮಾ ಮಂದಿರಗಳಲ್ಲಿ ತೆರೆಕಂಡ ಸಲ್ಮಾನ್ ಖಾನ್ ಕೊನೆಯ ಚಿತ್ರ 2019 ರ ‘ದಬ್ಬಾಂಗ್ 3’. ರಾಧೆ ಚಿತ್ರವು 2020 ರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈ ವರ್ಷ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಮತ್ತೆ ಸಿನಿಮಾ ಮಂದಿರಗಳು ಮುಚ್ಚಿದ್ದರಿಂದ ಓಟಿಟಿಯಲ್ಲಿ ವಿಶೇಷ ಪ್ರದರ್ಶನಕ್ಕೆ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಅವರು ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿರುವ ಈ ಚಿತ್ರದಲ್ಲಿ ಜಾಕಿ ಶ್ರಾಫ್, ದಿಶಾ ಪಟಾನಿ ಮತ್ತು ರಣದೀಪ್ ಹೂಡ ಮುಖ್ಯ ಪಾತ್ರಗಳಲ್ಲಿದ್ದಾರೆ. (ಏಜೆನ್ಸೀಸ್)
ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು