ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಬಾಲ್ಕನಿಯಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಕೆ; ಬಾಲಿವುಡ್​​​​​​ ಭಾಯಿಜಾನ್​​ ಭದ್ರತೆಗೆ ಹೆಚ್ಚಿನ ಆದ್ಯತೆ | Salman Khan

Untitled design - 2025-01-07T140444.400
Published on

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನಿಂದ ಸಲ್ಮಾನ್ ಖಾಖ್​​ಗೆ(Salman Khan) ಬರುತ್ತಿರುವ ಬೆದರಿಕೆಗಳ ನಡುವೆ ಸಲ್ಮಾನ್ ಖಾನ್ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬ್ಯಾಕ್ ಟು ಬ್ಯಾಕ್​​​ ಬೆದರಿಕೆಗಳು ಭಾಯಿಜಾನ್ ಮಾತ್ರವಲ್ಲದೆ ಅವರ ಕುಟುಂಬ ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಈ ಬೆದರಿಕೆಗಳಿಂದಾಗಿ ಸಲ್ಮಾನ್​​ ಖಾನ್​​​ ತನ್ನ ಮನೆಯ ಬಾಲ್ಕನಿಗೆ ಕೂಡ ಬರುತ್ತಿರಲಿಲ್ಲ. ಆದರೆ ಈಗ ಬಹುಶಃ ಈದ್ ಸಂದರ್ಭದಲ್ಲಿ ಅವರನ್ನು ನೋಡಲು ಸಾಧ್ಯವಾಗುತ್ತದೆ ಎಂದು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಕಾರಣ ಅವರ ಮನೆಯನ್ನು ಬುಲೆಟ್ ಪ್ರೂಫ್ ಮಾಡಲಾಗಿದೆ.

ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ನವೀಕರಣ ಕಾರ್ಯ ನಡೆಯುತ್ತಿದೆ. ಈಗ ಆ ಕೆಲಸ ಒಂದು ರೀತಿಯಲ್ಲಿ ಪೂರ್ಣಗೊಂಡಂತಿದೆ. ಸಲ್ಮಾನ್​ ಖಾನ್​ ಅವರ ಮನೆಯ ಬಾಲ್ಕನಿಯಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಲಾಗಿದೆ. ಅವರ ಬಾಲ್ಕನಿಯನ್ನು ಮುಚ್ಚಲಾಗಿದೆ. ಇದರಿಂದಾಗಿ ಬುಲೆಟ್ ಅದರ ಮೂಲಕ ಹಾದುಹೋಗಲು ಸಾಧ್ಯವಾಗುವುದಿಲ್ಲ. ಮತ್ತು ಅವರು ವಿಶ್ರಾಂತಿ ಮೋಡ್‌ನಲ್ಲಿ ವಿಶೇಷ ಸಮಯಗಳಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ.

ಇತ್ತೀಚೆಗೆ ಸಲ್ಮಾನ್ ಖಾನ್ ಭಾರೀ ಭದ್ರತೆಯ ಅಡಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ತನ್ನ 59ನೇ ಹುಟ್ಟುಹಬ್ಬವನ್ನು ಅಂಬಾನಿ ಕುಟುಂಬದ ಮನೆಯಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ಆಚರಿಸಿದರು. ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ 'ಸಿಕಂದರ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದು 2025ರ ಈದ್ ಸಮಯದಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. 'ಬಿಗ್ ಬಾಸ್ 18' ಕಾರ್ಯಕ್ರಮವನ್ನು ಹೋಸ್ಟ್ ಮಾಡುವ ಕೆಲಸವೂ ನಟ ಸಲ್ಮಾನ್​​ ಖಾನ್​ ಅವರ ಮೇಲಿದೆ. ಅವರು ಮಹಾರಾಷ್ಟ್ರ ಸರ್ಕಾರದಿಂದ Y+ ಭದ್ರತೆಯನ್ನು ಪಡೆದಿದ್ದಾರೆ. ಅಲ್ಲದೆ,ಬಾಬಾ ಸಿದ್ದಿಕಿ ಹತ್ಯೆಯಾದ ನಂತರ ಈ ಭದ್ರತೆಯನ್ನು ಮತ್ತೊಂದು ರೌಂಡ್​​ ಹೆಚ್ಚಿಸಲಾಗಿದೆ.

ಏಪ್ರಿಲ್ 2024ರಲ್ಲಿ ಗುಂಡಿನ ದಾಳಿ ಮತ್ತು ಬೆದರಿಕೆಗಳ ನಂತರ ಮುಂಬೈ ಪೊಲೀಸರು ಮುನ್ನೆಚ್ಚರಿಕೆಯಾಗಿ ಬಾಲ್ಕನಿ ಮತ್ತು ರಸ್ತೆಗೆ ಎದುರಾಗಿರುವ ಕಿಟಕಿಗಳ ಕಡೆಗೆ ನಟ ಸಲ್ಮಾನ್​ ಖಾನ್​ ಬರುವುದನ್ನು ನಿಷೇಧಿಸಿದ್ದರು ಎಂದು ಸಲೀಂ ಖಾನ್ ಹಲವು ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ಸಲ್ಮಾನ್​ ಖಾನ್​ ಕುಟುಂಬ ಸದಸ್ಯರು ಕೂಡ ಅದನ್ನು ಫಾಲೋ ಮಾಡುವಂತೆ ಸೂಚಿಸಿದ್ದರು. ಈಗ ಅದಕ್ಕೆ ಪರಿಹಾರ ಎಂಬಂತೆ ಮನೆಯನ್ನು ಬುಲೆಟ್ ಪ್ರೂಫ್ ಮಾಡಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net