

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮುಂಬೈನಲ್ಲಿಯೇ ವಿಚಾರಣೆ ನಡೆಸಲಾಗುವುದು.
ಸಲ್ಮಾನ್ ಖಾನ್ (Salman Khan) ಹಾಗೂ ಅ.12 ರಂದು ಗುಂಡಿಕ್ಕಿ ಕೊಂದ ಎನ್ಪಿಸಿ ನಾಯಕ ಬಾಬು ಸಿದ್ದಕ್ಕಿ ಹಾಗೂ ಇವರ ಪುತ್ರ ,ಜೀಶಾನ್ ಸಿದ್ದಿಕಿ (Zeeshan Siddiqui) ಮತ್ತು ಎಮ್ಎಲ್ಎ ಸೇರಿದಂತೆ ಹಲವರಿಗೆ ಜೀವ ಬೆದರಿಕೆ ಹಾಕಿದ್ದ 20 ವರ್ಷದ ಬಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಪೊಲೀಸ್ ತಂಡವು ಗುರ್ಫಾನ್ ಖಾನ್ ಅಲಿಯಾಸ್ ಮೊಹಮ್ಮದ್ ತಯ್ಯಬ್ ನನ್ನು ನೋಯ್ಡಾದ ಸೆಕ್ಟರ್ 39 ರಿಂದ ಬಂಧಿಸಿದೆ. ಗುರ್ಫಾನ್ ಖಾನ್ ಅಲಿಯಾಸ್ ಮೊಹಮ್ಮದ್ ತಯ್ಯಬ್, ಉತ್ತರಪ್ರದೇಶದ ಬರೇಲಿ ನಿವಾಸಿ. ಈತನೇ ಜೀಶನ್ ಸಿದ್ದಿಕಿ ಕಚೇರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ.
ಬಾಂದ್ರಾದಲ್ಲಿರುವ ಜೀಶಾನ್ ಸಿದ್ದಿಕಿ ಕಛೇರಿಗೆ ಶುಕ್ರವಾರ ಸಂಜೆ ಸಲ್ಮಾನ್ ಮತ್ತು ಶಾಸಕರನ್ನು ಸುಲಿಗೆ ಮತ್ತು ಕೊಲ್ಲುವುದಾಗಿ ಬೆದರಿಗೆ ಸಂದೇಶ ಬಂದಿದ್ದು, ಕೂಡಲೇ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ವೇಳೆ ಆರೋಪಿ ಮೊಹಮ್ಮದ್ ತಯ್ಯಬ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ತರಕಾರಿ ವ್ಯಾಪಾರಿಯೊಬ್ಬ ಸಲ್ಲುಭಾಯಿ ಅವರಿಗೆ ಬೆದರಿಕೆ ಹಾಕಿ ಸಂದೇಶ ಕಳುಹಿಸಿದ್ದ. 5 ಕೋಟಿ ಕೊಟ್ಟರೆ ಬದುಕ್ತೀಯ’ ಎಂದು ಸಲ್ಮಾನ್ ಗೆ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಮ್ಶೇಡ್ಪುರದ ತರಕಾರಿ ಮಾರಾಟಗಾರ ಶೇಖ್ ಮೌಸಿನ್ (24) ಬಂಧಿಸಿದ್ದರು. ಸಂದೇಶದಲ್ಲಿ ಕೊಲೆಮಾಡದಿರಲು 5 ಕೋಟಿ ರೂ. ನೀಡಬೇಕು ಎಂದು ಹೇಳಲಾಗಿತ್ತು.
ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನಟನ ಮನೆಯ ಹೊರಗೆ ಗುಂಡು ಹಾರಿಸಲಾಗಿತ್ತು. ಹೀಗಾಗಿ ಬಾಲಿವುಡ್ ಸ್ಟಾರ್ ನಟನಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎನ್ನಲಾಗಿದೆ.