

ಮುಂಬೈ: ಸೆರೆಬ್ರೆಲ್ ಪಾಲ್ಸಿ ಎಂಬ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದ ಅಮೀನಾ ಎಂಬ ಪುಟ್ಟ ಹುಡುಗಿ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ. ವೈದ್ಯರಿಂದ ಬಾಲಕಿಯನ್ನು ಗುಣಪಡಿಸಲು ಅಸಾಧ್ಯ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ, ತನ್ನ ನೆಚ್ಚಿನ ನಟನನ್ನು ನೋಡಿದ ಬಳಿಕ ಅಮೀನಾ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡುಬಂದಿರುವುದು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದೆ.
ಅಮೀನಾ ಎಂಬ ಬಾಲಕಿ ನಟ ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಸೆರೆಬ್ರೆಲ್ ಪಾಲ್ಸಿ ಎಂಬ ಖಾಯಿಲೆಗೆ ತುತ್ತಾಗಿದ್ದರು. ಕುಟುಂಬದವರು ಅಮೀನಾಳನ್ನು ಗುಣಪಡಿಸಲು ಹೆಚ್ಚಿನ ಚಿಕಿತ್ಸೆಗೆ ದೆಹಲಿ, ಮುಂಬೈನ ಹೆಸರಾಂತ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದ್ರೆ, ಎಲ್ಲಿಯೂ ಕೂಡ ಅಮೀನಾ ಖಾಯಿಲೆ ಗುಣವಾಗಿರಲಿಲ್ಲ.
ಸಲ್ಮಾನ್ ಅವರ ಸ್ಟೈಲ್, ಉಡುಗೆ-ತೊಡುಗೆಯನ್ನು ಅನುಸರಿಸುವ ಅಮೀನಾ, ಪ್ರತಿವರ್ಷ ತನ್ನ ನೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ BEING HUMAN ಸಂಸ್ಥೆಯ ಮೂಲಕ ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಸಲ್ಮಾನ್ ಅವರ ಭೇಟಿಗೂ ಮುನ್ನ ಅಮೀನಾ ಕೈಗಳು ತೆರೆಯಲಾಗುತ್ತಿರಲಿಲ್ಲ. ಆದ್ರೆ, ಇದೀಗ ನಟನ ನಿವಾಸದಲ್ಲಿ ಅವರನ್ನು ನೋಡಿದ ಬಳಿಕ ಬಾಲಕಿಯ ಆರೋಗ್ಯದಲ್ಲಿ ಪವಾಡದಂತೆ ಚೇತರಿಕೆ ಕಂಡಬಂದಿದೆ ಎಂದು ಅಮೀನಾ ತಾಯಿ ಮತ್ತು ಕುಟುಂಬದವರು ಸಲ್ಮಾನ್ ಖಾನ್ಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ಘಟನೆ ವೈದ್ಯಲೋಕವನ್ನೇ ಅಚ್ಚರಿ ಪಡುವಂತೆ ಮಾಡಿದೆ.
ಖುದ್ದಾಗಿ ಅಮೀನಾಳನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸಲ್ಮಾನ್ ಖಾನ್, ಕೆಲ ಸಮಯ ಬಾಲಕಿಯೊಂದಿಗೆ ಮಾತನಾಡಿ, ಅವರ ಮುಂದಿನ ಖರ್ಚು-ವೆಚ್ಚವನ್ನು ಭರಿಸುವುದಾಗಿ ಧೈರ್ಯ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅಮೀನಾ ತಾಯಿ, "ನನ್ನ ಮಗಳು ಎದ್ದು ಓಡಾಡುವುದಕ್ಕೂ ಕಷ್ಟ ಪಡುತ್ತಿದ್ದಳು. ಈಗ ಆರಾಮದಾಯಕವಾಗಿ ಮಾತನಾಡುತ್ತಾಳೆ. ಅವಳು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ, ಅವರ ಸಿನಿಮಾಗಳು, ಬಿಗ್ ಬಾಸ್ ಶೋ ಅನ್ನು ಮಿಸ್ ಮಾಡದೆ ನೋಡುತ್ತಾಳೆ" ಎಂದು ಹೇಳಿದ್ದಾರೆ.