ಈದ್ ಹಬ್ಬದಂದು ಫ್ಯಾನ್ಸ್​​ಗೆ ಭಾಯಿಜಾನ್ ವಿಶ್​​​​​​​; ಬುಲೆಟ್ ಪ್ರೂಫ್ ಗ್ಲಾಸ್ ಬಾಲ್ಕನಿಯಲ್ಲಿ ಸಲ್ಮಾನ್​​ ಸೆಲ್ಯೂಟ್ | Salman Khan

Untitled design - 2025-03-31T183728.629
Published on

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್(Salman Khan) ಅವರು ಬಾಂದ್ರಾದಲ್ಲಿರುವ ತಮ್ಮ ಮನೆಯ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಈದ್ ಹಬ್ಬದ ಶುಭಾಶಯ ಕೋರುವ ಮೂಲಕ ತಮ್ಮ ನೂರಾರು ಅಭಿಮಾನಿಗಳಿಗೆ ಅತ್ಯುತ್ತಮ ಉಡುಗೊರೆಯನ್ನು ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ನಟನನ್ನು ನೋಡಲು ಅಭಿಮಾನಿಗಳ ಅಪಾರ ಗುಂಪು ಅವರ ಮನೆಯ ಹೊರಗೆ ಜಮಾಯಿಸಿತ್ತು. ಸೋಮವಾರ ಸಂಜೆ ಸಲ್ಮಾನ್ ಖಾನ್ ಅವರ ಬಾಲ್ಕನಿಯಿಂದ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕ್ಲಾಸಿಕ್ ಬಿಳಿ ಪಠಾಣಿ ಉಡುಪನ್ನು ಧರಿಸಿದ್ದ ಸಲ್ಮಾನ್​ ಖಾನ್​ ಕಿಟಕಿಯ ಗ್ಲಾಸ್​​​ ಬಳಿ ನಿಂತು ಅಭಿಮಾನಿಗಳತ್ತ ಕೈ ಬೀಸಿದರು.

ಪ್ರತಿ ವರ್ಷ ಈದ್ ಹಬ್ಬದಂದು ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಸಲ್ಮಾನ್ ಖಾನ್ ಅವರನ್ನು ಒಂದು ಬಾರಿ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಯಾವಾಗಲೂ ಹಾಗೆ ಈ ಬಾರಿಯೂ ಭಾಯಿಜಾನ್​ ತನ್ನ ಬಾಲ್ಕನಿಯಲ್ಲಿ ಬಿಳಿ ಪಠಾಣಿ ಧರಿಸಿ ಕಾಣಿಸಿಕೊಂಡರು. ಪೊಲೀಸರ ಲಾಠಿಚಾರ್ಜ್‌ನಿಂದ ತಪ್ಪಿಸಿಕೊಳ್ಳಲು ಮತ್ತು ಸಲ್ಮಾನ್ ಅವರನ್ನು ಒಂದು ನೋಟ ಕಾಣಲು ಅವರ ಕೆಲವು ಅಭಿಮಾನಿಗಳು ಮರ ಹತ್ತಿರುವುದನ್ನು ನೋಡಬಹುದು.

ಜನವರಿ 2025ರಲ್ಲಿ ಸಲ್ಮಾನ್ ತಮ್ಮ ಮನೆಯ ಭದ್ರತೆಯನ್ನು ಹೆಚ್ಚಿಸಿದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಬಾಲ್ಕನಿಯಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಲಾಯಿತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಅವರ ಮತ್ತು ಅವರ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಸಲ್ಮಾನ್ ತಮ್ಮ ಅಭಿಮಾನಿಗಳತ್ತ ಕೈಬೀಸುವ ಬಾಲ್ಕನಿ ಈಗ ಸಂಪೂರ್ಣವಾಗಿ ಬುಲೆಟ್ ಪ್ರೂಫ್ ಗಾಜಿನಿಂದ ಮುಚ್ಚಲ್ಪಟ್ಟಿದೆ.

ಈದ್ ಸಮಯದಲ್ಲಿ ಸಲ್ಮಾನ್ ತಮ್ಮ 'ಸಿಕಂದರ್' ಚಿತ್ರದ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದರು. ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ಕೂಡ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net