Antilia : ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಈ ಮದುವೆಯನ್ನು ತಿರುಗಿ ನೋಡಿತು. ಈ ಮದುವೆಗೆ ಅಂಬಾನಿ ಕುಟುಂಬ 5000 ಕೋಟಿ ರೂ. ಖರ್ಚು ಮಾಡಿದೆ. ಈ ಹಣವು ಅವರ ಆಸ್ತಿ ಮೌಲ್ಯದ ಶೇ. 0.5 ರಷ್ಟು ಮಾತ್ರ ಎಂಬುದೇ ಅಚ್ಚರಿಯ ಸಂಗತಿ.
ಇನ್ನು ಆಂಟಿಲಿಯಾ, ಮುಕೇಶ್ ಅಂಬಾನಿ ಅವರ ಐಷಾರಾಮಿ ಮನೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದು ವಿಶ್ವದ ಅತ್ಯಂತ ದುಬಾರಿ ನಿವಾಸಗಳಲ್ಲಿ ಒಂದಾಗಿದೆ. ಈ ಭವ್ಯ ಬಂಗಲೆ 27 ಅಂತಸ್ತನ್ನು ಒಳಗೊಂಡಿದ್ದು, ಇದರ ನಿರ್ಮಾಣಕ್ಕೆ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ.
ಅಂದಹಾಗೆ ಆಂಟಿಲಿಯಾ ಮನೆಯನ್ನು ನಿರ್ವಹಿಸಲೆಂದೇ ನೂರಾರು ಮಂದಿ ಕೆಲಸಗಾರರಿದ್ದಾರೆ. ಈ ಕೆಲಸಗಾರರನ್ನು ಅಂಬಾನಿ ಕುಟುಂಬ ಹೇಗೆ ಆಯ್ಕೆ ಮಾಡುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ? ಅಂಬಾನಿ ಮನೆಯಲ್ಲಿ ಕೆಲಸ ಮಾಡುವವರ ಸಂಬಳ ಲಕ್ಷಾಂತರ ರೂಪಾಯಿ ಇದೆ ಎಂದು ಅನೇಕ ವರದಿಗಳು ಹೇಳುತ್ತವೆ. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುವವರಂತೆಯೇ ಎಲ್ಲ ರೀತಿಯ ಪ್ರಯೋಜನಗಳು ಆಂಟಿಲಿಯಾದಲ್ಲಿ ಕೆಲಸ ಮಾಡುವವರಿಗೆ ಸಿಗುತ್ತವೆ. ಆಂಟಿಲಿಯಾದಲ್ಲಿ 600 ರಿಂದ 700 ಜನರು ಕೆಲಸ ಮಾಡುತ್ತಾರೆಂದು ತಿಳಿದುಬಂದಿದೆ.
ಇತ್ತೀಚೆಗೆ ಕೆಲವು ಮಾಧ್ಯಮಗಳು ಮುಕೇಶ್ ಅಂಬಾನಿಯವರ ಚಾಲಕನ ಸಂಬಳದ ಬಗ್ಗೆ ವರದಿ ಮಾಡಿವೆ. ಅವರ ಸಂಬಳ ತಿಂಗಳಿಗೆ 2 ಲಕ್ಷ ರೂಪಾಯಿ. ಅಂದರೆ, ಚಾಲಕನಿಗೆ ವರ್ಷಕ್ಕೆ 24 ಲಕ್ಷ ರೂ.ಗಳವರೆಗೆ ಸಂಬಳ ಸಿಗುತ್ತದೆ. ಮುಕೇಶ್ ಅಂಬಾನಿಯವರ ಭದ್ರತಾ ಸಿಬ್ಬಂದಿಗೆ ತಿಂಗಳಿಗೆ 55,869 ರೂ.ಗಳವರೆಗೆ ಸಂಬಳ ಸಿಗುತ್ತದೆ. ಇದು ಸರ್ಕಾರಿ ಅಧಿಕಾರಿಗಳ ಸಂಬಳಕ್ಕಿಂತ ಹೆಚ್ಚಾಗಿದೆ.
ಅಂಬಾನಿಯವರ ಐಷಾರಾಮಿ ನಿವಾಸದಲ್ಲಿ ಕೆಲಸ ಪಡೆಯಲು ಕಠಿಣ ಪರೀಕ್ಷೆ ಮತ್ತು ಸಂದರ್ಶನ ಅಗತ್ಯವಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಪದವಿ ಮೂಲ ಅರ್ಹತೆಯಾಗಿದೆ. ಉದಾಹರಣೆಗೆ, ನೀವು ಅಡುಗೆಯವರ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ನೀವು ಹೊಂದಿರಬೇಕು. ಉತ್ತಮ ಸಂಬಳದ ಜೊತೆಗೆ, ಅವರು ಆರೋಗ್ಯ ವಿಮೆಯನ್ನು ಸಹ ಪಡೆಯುತ್ತಾರೆ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಆಂಟಿಲಿಯಾದಲ್ಲಿ ಸಂಬಳ ಹೆಚ್ಚಳವನ್ನು ಸಹ ಜಾರಿಗೆ ತರಲಾಗುತ್ತದೆ. (ಏಜೆನ್ಸೀಸ್)
100 ವರ್ಷಗಳ ಬಳಿಕ ಮಹಾ ಶಿವರಾತ್ರಿಯಂದು ಶನಿಯ ಪವಾಡ : ಈ ರಾಶಿವರಿಗೆ ಅದೃಷ್ಟವೋ ಅದೃಷ್ಟ, ಧನ ಲಾಭ! Zodiac Signs