

ಸಾಮಾನ್ಯವಾಗಿ ಸಾಫ್ಟ್ವೇರ್ನ ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ನಂತಹ ದೈತ್ಯ ಕಂಪನಿಗಳ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ(ಸಿಇಒ)ಗಳಿಗೆ ತಿಂಗಳ ವೇತನ ಅತಿ ಹೆಚ್ಚು ಎಂದು ಭಾವಿಸಲಾಗಿದೆ. ಆದರೆ, ಇದೀಗ ಕಾರ್ಪೊರೇಟ್ ಜಗತ್ತಿನಲ್ಲೇ ಅತ್ಯಧಿಕ ವೇತನ ಪಡೆಯುವ ಮೂಲಕ ಸ್ಟಾರ್‌ಬಕ್ಸ್ CEO ಬ್ರಿಯಾನ್ ನಿಕೋಲ್ ಹೊಸ ದಾಖಲೆ ಬರೆದಿದ್ದಾರೆ.
ಹೌದು, 50 ವರ್ಷದ ನಿಕೋಲ್ ಮೊದಲು ಚಿಪಾಟ್ಲ(CEO of Chipotle) ಸಿಇಒ ಆಗಿದ್ದ ಇತ ಇದೀಗ ಸ್ಟಾರ್‌ಬಕ್ಸ್ ಕಂಪನಿಯ ಸಿಇಒ ಅಧಿಕಾರ ವಹಿಸಿಕೊಂಡಿದ್ದು, ಕೇಲವ ನಾಲ್ಕು ತಿಂಗಳಿಗೆ 96 ಮಿಲಿಯನ್ ಡಾಲರ್ ವೇತನ ಎಂದು ವರದಿಯಾಗಿದೆ.
ಇವರ ನಾಲ್ಕು ತಿಂಗಳ ವೇತನ ಆ್ಯಪಲ್ ಮತ್ತು ಗೂಗಲ್ ಸಿಇಒಗಳಾದ ಟೀಮ್ ಕುಕ್, ಸುಂದರ್ ಪಿಚೈಗಿಂತ ಅಧಿಕ ವೇತನವಾಗಿದೆ. (ಕಳೆದ ವರ್ಷ ಇಬ್ಬರು ಸಿಇಒಗಳು 75 ಮಿಲಿಯನ್ ಡಾಲರ್ ವೇತನ ಪಡೆದಿದ್ದಾರೆ) ಈ ಮೂಲಕ ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಅತ್ಯಧಿಕ ಮತ್ತು ಅಧಿಕ ವೇತನ ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.
ಮೊದಲು ಚಿಪಾಟ್ಲ್‌ನ CEO ಆಗಿದ್ದ ನಿಕೋಲ್, ಸೆಪ್ಟೆಂಬರ್ 2024 ರಲ್ಲಿ ಸ್ಟಾರ್‌ಬಕ್ಸ್‌ಗೆ ಸೇರಿದರು. ಕಂಪನಿಯ ಫೈಲಿಂಗ್‌ಗಳಲ್ಲಿ ಬಹಿರಂಗಪಡಿಸಿದಂತೆ ಅವರ ಹೊಸದಾಗಿ ಕಾಲಿಟ್ಟ ಮೊದಲ ತಿಂಗಳೊಳಗೆ ಅವರಿಗೆ 5 ಮಿಲಿಯನ್ ಡಾಲರ್ ಸೈನ್-ಆನ್ ಬೋನಸ್ ನೀಡಲಾಯಿತು. ಅವರ ಗಳಿಕೆಯ 94% ಸ್ಟಾಕ್ ಪ್ರಶಸ್ತಿಗಳಿಂದ ಬಂದಿದೆ. ಇದು ಮೂರು ವರ್ಷಗಳ ಅವಧಿಯಲ್ಲಿ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದೆ. ಅಲ್ಲದೆ, ಅವರು ಸ್ಟಾರ್‌ಬಕ್ಸ್ ಕಾಲಿಟ್ಟಗಿನಿಂದ ಸ್ಟಾರ್‌ಬಕ್ಸ್ ಕಂಪನಿ ಉನ್ನತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಲಾಗಿದೆ.
ನಿಕೋಲ್‌ನ ಒಟ್ಟು ವಾರ್ಷಿಕ ವೇತನ ಪ್ಯಾಕೇಜ್ 113 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಅವರನ್ನು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 20 ಸಿಇಒಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.(ಏಜೆನ್ಸೀಸ್)