More

    ಬಾಕ್ಸ್​ಆಫೀಸ್​ನಲ್ಲಿ ಸಲಾರ್​ ಸುನಾಮಿ! ಮೂರೇ ದಿನಕ್ಕೆ ದಾಖಲೆ ಗಳಿಕೆ, ಡಂಕಿ ಹಿಂದಿಕ್ಕಿ ಸಲಾರ್​ ದೋಚಿದ್ದೆಷ್ಟು?

    ಹೈದರಾಬಾದ್​: ನಟ ಪ್ರಭಾಸ್​ ಮತ್ತು ಪೃಥ್ವಿರಾಜ್​ ಚೌಹಾಣ್​ ನಟನೆಯ ಹಾಗೂ ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಭಾಗ 1 ಸೀಸ್​ಫೈರ್​ ಬಾಕ್ಸ್​ಆಫೀಸ್​ನಲ್ಲಿ ಸುನಾಮಿ ಎಬ್ಬಿಸಿದ್ದು, ಹಳೆಯ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಡಿ.22ರಂದು ವಿಶ್ವದಾದ್ಯಂತ ಬಿಡುಗಡೆಯಾದ ಆ್ಯಕ್ಸನ್​ ಥ್ರಿಲ್ಲರ್​ ಸಿನಿಮಾ ಎಲ್ಲೆಡೆ ಪಾಸಿಟಿವ್​ ರಿವಿವ್ಯೂ ಪಡೆದುಕೊಳ್ಳುತ್ತಾ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.

    ಸಲಾರ್ ಚಿತ್ರದ ನಿರ್ಮಾಪಕರು ಬಾಕ್ಸ್​ಆಫೀಸ್​ ಕಲೆಕ್ಷನ್​ ಅನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದು, ಇತ್ತೀಚಿನ ಅಪ್‌ಡೇಟ್ ಪ್ರಕಾರ ಚಿತ್ರವು ಶುಕ್ರವಾರ ಮತ್ತು ಶನಿವಾರ ವಿಶ್ವಾದ್ಯಂತ 295 ಕೋಟಿ ರೂ. ಗಳಿಸಿದರೆ, ಮೂರನೇ ದಿನವಾದ ಭಾನುವಾರ 100 ಕೋಟಿ ರೂ. ಗಳಿಸುವ ಮೂಲಕ 400 ಕೋಟಿ ರೂ. ಸಮೀಪಕ್ಕೆ ಬಂದಿದೆ.

    ದೇಶಿ ಸಿನಿಮಾ ಮಾರುಕಟ್ಟಯಲ್ಲಿ ಶಾರುಖ್​ ಖಾನ್​ ನಟನೆಯ ಡಂಕಿ ಸಿನಿಮಾವನ್ನು ಹಿಂದಿಕ್ಕಿ ಕೇವಲ 3 ದಿನದಲ್ಲಿ ಬರೋಬ್ಬರಿ 250 ಕೋಟಿ ರೂ. ಕಲೆಹಾಕಿದೆ. ಸಲಾರ್​ಗೂ ಒಂದು ದಿನ ಮುಂಚೆ ಬಿಡುಗಡೆಯಾದ ಡಂಕಿ ನಾಲ್ಕು ದಿನಕ್ಕೆ 200 ಕೋಟಿ ರೂ. ಮಾತ್ರ ಗಳಿಸಿದೆ. ಆದರೆ, ನಾಲ್ಕನೇ ದಿನವೂ ಬಾಕ್ಸ್​ಆಫೀಸ್​ನಲ್ಲಿ ಸಲಾರ್ ಸಿನಿಮಾ​ ಕಮಾಲ್​ ಮಾಡಲಿದೆ ಎಂದು ಸಿನಿ ವಿಮರ್ಶಕರು ಅಂದಾಜಿಸಿದ್ದಾರೆ. ಈಗಾಗಲೇ ಈ ಚಿತ್ರ ಬಿಡುಗಡೆಗೂ ಮುನ್ನ 20 ಕೋಟಿ ರೂ.ಗೂ ಅಧಿಕ ಹಣ ಗಳಿಸಿದ್ದು, 4 ದಿನಗಳ ಕಲೆಕ್ಷನ್​ ಬಳಿಕ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಲಿದೆ.

    ಪ್ರಶಾಂತ್​ ನೀಲ್​ ನಿರ್ದೇಶನವಿರುವ ಈ ಚಿತ್ರದಲ್ಲಿ ಬರೀ ಆ್ಯಕ್ಷನ್​ ದೃಶ್ಯಗಳೇ ತುಂಬಿಕೊಂಡಿವೆ. ತೆಲುಗು ರಾಜ್ಯದಲ್ಲಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಆ್ಯಕ್ಷನ್ ಡ್ರಾಮಾ ಇಬ್ಬರು ಸ್ನೇಹಿತರು, ಶತ್ರುಗಳಾಗಿ ಬದಲಾಗುವ ಕತೆಯಾಗಿದೆ. ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಮತ್ತು ರಾಮಚಂದ್ರರಾಜು ಪೋಷಕ ಪಾತ್ರಗಳ ಮೂಲಕ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ, ಚಿತ್ರಕ್ಕೆ ಕೆಜಿಎಫ್​ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್​)

    2 ದಿನದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಹೇಗೆ ಸಾಧ್ಯ ಎಂದ ನೆಟ್ಟಿಗರು? ಉತ್ತರ ಹೀಗಿದೆ…

    ದೊಡ್ಡ​ ಯೂಟ್ಯೂಬರ್ ಆಗುವ ಗುರಿ ಹೊಂದಿದ್ದ ಬಾಲಕ ಇಸ್ರೇಲ್​ ದಾಳಿಗೆ ಬಲಿ: ಸತ್ತ ನಂತ್ರ ನನಸಾಯ್ತು ಕನಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts