Saif Ali Khan Stabbing Case | ಗಡಿಯಲ್ಲಿ ನದಿದಾಟಿ ಅಕ್ರಮವಾಗಿ ಭಾರತದ ಪ್ರವೇಶ; ಪೊಲೀಸರು ಆರೋಪಿ ಶರೀಫುಲ್ ಜಾಡು ಕಂಡುಹಿಡಿದಿದ್ದೆ ರೋಚಕ

Untitled design - 2025-01-21T152923.519
Published on

ಮುಂಬೈ: ಬಾಲಿವುಡ್​ ನಟ ಸೈಫ್​ ಅಲಿ ಖಾನ್​​​​​​​​​ ಮೇಲಿನ ದಾಳಿಯ(Saif Ali Khan Stabbing Case) ಬೆಂಗಾಲ್ ನಂಟು ಬೆಳಕಿಗೆ ಬಂದಿದೆ. ಆರೋಪಿ ಶರೀಫುಲ್ ಇಸ್ಲಾಂ ಶಹಜಾದ್ ಬಾಂಗ್ಲಾದೇಶ ಪ್ರಜೆ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮುಂಬೈನಲ್ಲಿ ನೆಲೆಸಿದ್ದ, ಭಾರತಕ್ಕೆ ಬಂದ ನಂತರ ಶರೀಫುಲ್ ತನ್ನ ಹೆಸರನ್ನು ಬದಲಾಯಿಸಿಕೊಂಡು ಇಲ್ಲಿ ವಿಜಯ್ ದಾಸ್ ಎಂಬ ಹೆಸರಿನಲ್ಲಿ ಜೀವನ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.

ಸುಮಾರು ಏಳು ತಿಂಗಳ ಹಿಂದೆ ಷರೀಫುಲ್ ಅವರು ಮೇಘಾಲಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ದೌವ್ಕಿ ನದಿಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದರು. ಇದಾದ ನಂತರ ಅವರು ಪಶ್ಚಿಮ ಬಂಗಾಳಕ್ಕೆ ಬಂದು ಅಲ್ಲಿ ಅನೇಕ ಜಿಲ್ಲೆಗಳಲ್ಲಿ ಕೆಲಸ ಹುಡುಕಿ ಭಾರತೀಯ ಪ್ರಜೆ ಎಂದು ಗುರುತಿಸಿಕೊಳ್ಳಲು ದಾಖಲೆಯನ್ನು ಪಡೆಯಲು ಪ್ರಯತ್ನಿಸಿದ್ದಾಗೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಶರೀಫುಲ್ ಅವರು ಪಶ್ಚಿಮ ಬಂಗಾಳದಲ್ಲಿ ತಂಗಿದ್ದಾಗ ಸ್ಥಳೀಯ ಮಹಿಳೆಯ ಹೆಸರಿನಲ್ಲಿ ಭಾರತೀಯ ಸಿಮ್ ಕಾರ್ಡ್ ಪಡೆದಿದ್ದಾರೆ. ನಂತರ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾಗ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಈ ಸಿಮ್ ಅನ್ನು ಬಳಸಿದರು. ಮುಂಬೈ ಪೊಲೀಸರು ಈ ಮಾಹಿತಿಯನ್ನು ಪಶ್ಚಿಮ ಬಂಗಾಳ ಪೊಲೀಸರೊಂದಿಗೆ ಹಂಚಿಕೊಂಡು ಸಂಬಂಧಪಟ್ಟ ಮಹಿಳೆಯನ್ನು ಹುಡುಕುವಂತೆ ವಿನಂತಿಸಿದ್ದಾರೆ ಎಂದು ಹೇಳಲಾಗಿದೆ.

ಮುಂಬೈ ತಲುಪಿದ ನಂತರ ಶರೀಫುಲ್ ಅಲ್ಲಿ ಕೆಲಸ ಹುಡುಕಲು ಪ್ರಾರಂಭಿಸಿದನು. ಪೌರತ್ವದ ಪುರಾವೆ ಅಗತ್ಯವಿಲ್ಲದ ಸ್ಥಳಗಳಿಗೆ ಆದ್ಯತೆ ನೀಡಿ ಕೆಲಸ ಹುಡುಕಿದ್ದಾನೆ. ಈ ವೇಳೆ ಮುಂಬೈನಲ್ಲಿ ಗುತ್ತಿಗೆದಾರ ಅಮಿತ್ ಪಾಂಡೆ ಸಂಪರ್ಕಕ್ಕೆ ಬಂದಿದ್ದರು. ಪಾಂಡೆ ಆತನಿಗೆ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಲು ಸಹಾಯ ಮಾಡಿದರು. ಸೈಫ್ ಅಲಿಖಾನ್ ಅವರ ಮನೆಗೆ ಪ್ರವೇಶಿಸುವ ಮೊದಲು ಶರೀಫುಲ್ ಬಾಂದ್ರಾದಲ್ಲಿನ ಇನ್ನೊಬ್ಬ ನಟನ ಬಂಗಲೆಯ ಬಳಿ ತಿರುಗಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಶರೀಫುಲ್ ಕುಟುಂಬಸ್ಥರನ್ನು ಸಂಪರ್ಕಿಸಿರುವುದಾಗಿ ತಿಳಿಸಿದ್ದಾರೆ. ಅವನು ಬಾಂಗ್ಲಾದಲ್ಲಿರುವ ತನ್ನ ಸಹೋದರನೊಂದಿಗೆ ಮಾತನಾಡಿದ್ದಾನೆ. ಶರೀಫುಲ್ ಬಾಂಗ್ಲಾದೇಶದಲ್ಲಿ 12ನೇ ತರಗತಿಯವರೆಗೆ ಓದಿದ್ದು ಆತನಿಗೆ ಇಬ್ಬರು ಸಹೋದರರು ಇದ್ದಾರೆ. ಮುಂಬೈ ಪೊಲೀಸರ ತಂಡವೊಂದು ಪಶ್ಚಿಮ ಬಂಗಾಳಕ್ಕೆ ತಲುಪಿ ತನಿಖೆ ನಡೆಸಲಿದೆ ಎಂದು ಹೇಳಲಾಗಿದೆ.

ಶರೀಫುಲ್ ಬಂಧನದ ಕಥೆಯೂ ಸಾಕಷ್ಟು ಕುತೂಹಲಕಾರಿಯಾಗಿದೆ. ಮಾಹಿತಿ ಪ್ರಕಾರ, ಪೊಲೀಸರು ಯುಪಿಐ ವಹಿವಾಟಿನ ಮೂಲಕ ಆರೋಪಿಯನ್ನು ಹಿಡಿದಿದ್ದಾರೆ. ಈ ವಹಿವಾಟಿನಿಂದಾಗಿ ಪೊಲೀಸರಿಗೆ ಆತನ ನಂಬರ್ ಸಿಕ್ಕಿದೆ. ಇದಾದ ಬಳಿಕ ನಂಬರ್ ಟ್ರೇಸ್ ಮಾಡಿದಾಗ ಶರೀಫುಲ್ ಇರುವ ಸ್ಥಳ ಬಯಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net