Saif Ali Khan : ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಕುಟುಂಬ ಬರೋಬ್ಬರಿ 15,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಪ್ರಕರಣಕ್ಕೆ ಪಾಕಿಸ್ತಾನದ ಲಿಂಕ್ ಕೂಡ ಇದೆ.
ಸೈಫ್ ಅಲಿ ಖಾನ್ ಬಾಲಿವುಡ್ ಚಿತ್ರರಂಗದ ಪ್ರಮುಖ ನಟ. ಅವರು ಮಧ್ಯಪ್ರದೇಶದ ಭೋಪಾಲ್‌ನ ನವಾಬರಾದ ಪಟೌಡಿ ಕುಟುಂಬದ ವಂಶಸ್ಥರು ಎಂಬುದು ಎಲ್ಲರಿಗೂ ತಿಳದಿದೆ. ಭೋಪಾಲ್ನಲ್ಲಿ ಅರಮನೆ, ಭೂಮಿ ಸೇರಿದಂತೆ 15 ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಭೋಪಾಲ್‌ನ ಕೊನೆಯ ನವಾಬನಾಗಿದ್ದ ಹಮೀದುಲ್ಲಾ ಖಾನ್‌ನ ಮಗಳು ಅಬಿದಾ ಸುಲ್ತಾನ್ ಈ ಆಸ್ತಿಗಳ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು.
ಆದರೆ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ಅಬಿದಾ ಸುಲ್ತಾನ್, 1950ರಲ್ಲಿ ಪಾಕಿಸ್ತಾನಕ್ಕೆ ತೆರಳಿದರು. ಇದರ ಪರಿಣಾಮವಾಗಿ, ತಮ್ಮ ಭಾರತೀಯ ಪೌರತ್ವವನ್ನು ಕಳೆದುಕೊಂಡರು. ಇದಾದ ಬಳಿಕ ಅಬಿದಾ ಸುಲ್ತಾನ್ಳ ಎರಡನೇ ಪುತ್ರಿ ಸಬಿಯಾ ಸುಲ್ತಾನ್ರನ್ನು ಆಸ್ತಿಗಳಿಗೆ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು. ಸೈಫ್ ಅಲಿ ಖಾನ್ ಅವರು ಸಬಿಯಾ ಸುಲ್ತಾನ್ ಸೋದರಿಯ ಮಗ.
ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋದವರ ಆಸ್ತಿಗಳು ಭಾರತದಲ್ಲಿದ್ದರೆ, ಅವುಗಳನ್ನು ಶತ್ರು ಆಸ್ತಿ ಎಂದು ಪರಿಗಣಿಸಲಾಗುವುದು. ಅದೇ ರೀತಿ 2014ರಲ್ಲಿ ಪಟೌಡಿ ನೇವಿ ಕುಟುಂಬದ ಆಸ್ತಿಯನ್ನು ಶತ್ರು ಆಸ್ತಿ ಎಂದು ಘೋಷಿಸಿ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿತ್ತು. ಶತ್ರು ಆಸ್ತಿ ಎಂದು ಘೋಷಿಸಿದರೆ ಆ ಆಸ್ತಿ ಕೇಂದ್ರ ಸರ್ಕಾರಕ್ಕೆ ಸೇರುತ್ತದೆ.
2015ರಲ್ಲಿ ಕೇಂದ್ರ ಸರ್ಕಾರದ ನೋಟಿಸ್ ವಿರುದ್ಧ ಸೈಫ್ ಅಲಿ ಖಾನ್ ಕುಟುಂಬ ಮಧ್ಯಪ್ರದೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಬಳಿಕ ಕೇಂದ್ರ ಸರ್ಕಾರದ ನೋಟಿಸ್‌ಗೆ ತಡೆ ನೀಡಲಾಗಿತ್ತು. ಇದಾದ ನಂತರ 2016ರಲ್ಲಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿ, ವಾರಸುದಾರರು ಭೂಪಾಲ್‌ನಲ್ಲಿರುವ ನವಾಬ್ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದಾದ ಬಳಿಕ 2024ರಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ಸೈಫ್ ಅಲಿ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು ಮತ್ತು ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಹೊರಡಿಸಿದ್ದ ನಿಷೇಧವನ್ನು ಸಹ ತೆಗೆದುಹಾಕಿತು.
ಇದನ್ನೂ ಓದಿ: ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology
ಈ ಆದೇಶದ ವಿರುದ್ಧ 30 ದಿನಗಳೊಳಗೆ ಸಂಬಂಧಪಟ್ಟ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಹೇಳಲಾಗಿದ್ದರೂ, 30 ದಿನಗಳು ಕಳೆದರೂ ಸೈಫ್ ಅಲಿ ಖಾನ್ ಕುಟುಂಬ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ. ಇದರಿಂದ ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಈ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ವಿಶ್ರಾಂತಿಯಲ್ಲಿ ಸೈಫ್ ಅಲಿ ಖಾನ್
ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಸೈಫ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಈ ದಾಳಿ ನಡೆದಿತ್ತು. ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆಹ್ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅವರನ್ನು ಚಿಕಿತ್ಸೆಗಾಗಿ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಬೆನ್ನುಹುರಿ ಸೇರಿದಂತೆ ಸುಮಾರು 6 ಸ್ಥಳಗಳಲ್ಲಿ ಗಾಯಗಳಾಗಿತ್ತು. ವೈದ್ಯರು 5 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು. ಆಪರೇಷನ್ ಯಶಸ್ವಿಯಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಸುಮಾರು 1 ತಿಂಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ಸೂಚನೆ ನೀಡಿದ್ದಾರೆ.
ಸೈಫ್ ಮೇಲೆ ದಾಳಿ ಮಾಡಿದ ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಕಳೆದ ಬುಧವಾರ (ಜ.15) ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್-ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ. (ಏಜೆನ್ಸೀಸ್)
ಹಾವಿನ ವಿಷಕ್ಕೆ ಸೆಡ್ಡು ಹೊಡೆಯುವ ಜೀವಿಗಳು: ಯಾವ ವಿಷವೂ ಈ ಪ್ರಾಣಿಗಳನ್ನು ಏನೂ ಮಾಡಲಾಗದು! General Knowledge