ಭಾರತೀಯ ಹುಡುಗಿಯರು ಏನನ್ನಾದರೂ; India Gate ಮುಂಭಾಗದ ಬೋಲ್ಡ್​ ಡ್ಯಾನ್ಸ್ Viral​ ಆಗುತ್ತಿದ್ದಂತೆ ಯುವತಿಯ ರಿಯಾಕ್ಷನ್​ ಮಾತ್ರ...

Viral Reels
Published on

ನವದೆಹಲಿ: ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ಜನರು ವೈರಲ್​ ಆಗಲು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಬರೀ ಲೈಕ್ಸ್​, ವೀವ್ಸ್​ ಹಾಗೂ ಫಾಲೋವರ್ಸ್​ ಹೆಚ್ಚಿಸಿಕೊಳ್ಳುವ ಸಲುವಾಗಿ ಯುವತಿಯೊಬ್ಬಳು ಪ್ರತಿನಿತ್ಯ ಲಕ್ಷಾಂತರ ಜನರು ಭೇಟಿ ನೀಡುವ ಪ್ರಸಿದ್ಧ ಸ್ಥಳವಾದ ಇಂಡಿಯಾ ಗೇಟ್​ (India Gate) ಮುಂಭಾಗ ಟವೆಲ್‌ ಸುತ್ತಿಕೊಂಡು ಬೋಲ್ಡ್‌ ಡಾನ್ಸ್‌ (Bold Dance) ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲ್ಕತ್ತಾ ಮೂಲದ ಮಾಡೆಲ್‌ ಸನ್ನತಿ ಮಿಶ್ರಾ ಎಂಬಾಕೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಇಂಡಿಯಾ ಗೇಟ್​ ಮುಂಭಾಗ ಬರೀ ಟವೆಲ್‌ ಸುತ್ತಿ ರೀಲ್ಸ್‌ ಮಾಡಿದ್ದಾಳೆ. ಅಂತಾರಾಷ್ಟ್ರೀಯ ಪುರುಷರ ದಿನದ (ನವೆಂಬರ್​ 19) ಈಕೆ ಈ ರೀಲ್ಸ್​ ಮಾಡಿ ಪೋಸ್ಟ್​ ಮಾಡಿದ್ದು, ಪ್ರತಿನಿತ್ಯ ಲಕ್ಷಾಂತರ ಪ್ರವಾಸಿಗರು ಭೇಟಿ ಕೊಡುವ ಪ್ರಸಿದ್ದ ತಾಣದಲ್ಲಿ ಈಕೆ ನಡೆದುಕೊಂಡ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸನ್ನತಿ ಒಂದು ಬಿಳಿ ಟವೆಲ್‌ ಸುತ್ತಿಕೊಂಡು ಡಾನ್ಸ್‌ ಮಾಡುವ ದೃಶ್ಯವನ್ನು ಕಾಣಬಹುದು. ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂಡಿಯಾ ಗೇಟ್‌ ಮುಂದೆ ಬರೀ ಟವೆಲ್‌ ಸುತ್ತಿ ನಿಂತ ಸನ್ನತಿ ಹಿಂದಿ ಹಾಡೊಂದಕ್ಕೆ ಲಿಪ್‌ ಸಿಂಕ್‌ ಮಾಡುತ್ತಾ ಡಾನ್ಸ್‌ ಮಾಡಿದ್ದಾಳೆ. ಇದಕ್ಕೆ ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು ಅಡಿಬರಹವನ್ನು ನೀಡಿದ್ದಾಳೆ.

ಇದಾದ ಬಳಿಕ ಮತ್ತೊಂದು ವಿಡಿಯೋ ಪೋಸ್ಟ್​ ಮಾಡಿರುವ ಸನ್ನತಿ, ಎಲ್ಲರೂ ಪ್ರಯೋಗ ಮಾಡಲು ಇಷ್ಟಪಡುತ್ತಾರೆ. ಅದೇ ರೀತಿ ನಾನು ಕೂಡ ಪ್ರಯೋಗ ಮಾಡಿದ್ದೇನೆ. ಗೆಳೆಯರೇ ನಾನು ಟವೆಲ್​​ ಧರಿಸಿ ಇಂಡಿಯಾ ಗೇಟ್​ ಮುಂದೆ ಹೋಗುತ್ತಿದ್ದೇನೆ. ಅಲ್ಲಿ ಏನಾಗುತ್ತದೆ ನೋಡೋಣ ಎಂದು ಹೇಳಿದ್ದಾಳೆ. ಇದಲ್ಲದೆ ಆಕೆ ಕೆಲವರನ್ನು ಮಾತನಾಡಿಸಿದ್ದು, ಅನೇಕರು ಯುವತಿಯರಿಗೆ ತಮ್ಮದೇ ಆದ ಸ್ವಾತಂತ್ರ್ಯವಿದ್ದು, ಏನು ಬೇಕಾದರು ಧರಿಸಬಹುದುಎ ಎಂದು ಹೇಳಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ನೋಡಿ ತಮ್ಮ ಅಭಿಪ್ರಾಯವನ್ನು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net