Dalit ಮಹಿಳೆ ಹತ್ಯೆ ಪ್ರಕರಣ; 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ Court

Law and Order
Published on

ತುಮಕೂರು: 2010ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ದಲಿತ (Dalit) ಮಹಿಳೆ ಹತ್ಯೆ ಪ್ರಕರಣದ 21 ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 13,500 ರೂಪಾಯಿ ದಂಡವನ್ನು ವಿಧಿಸಿ ತುಮಕೂರು ಜಿಲ್ಲೆಯ ಮೂರನೇ ಹೆಚ್ಚುವರಿ ಸೆಷನ್ಸ್​​ ನ್ಯಾಯಾಲಯ ಗುರುವಾರ (ನವೆಂಬರ್​ 21) ತೀರ್ಪು ನೀಡಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಹೊನ್ನಮ್ಮ ಎಂಬ ಮಹಿಳೆಯನ್ನು ಜೂನ್​ 28ರಂದು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ನಡೆದು 14 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದೆ.

2010ರ ಜೂನ್ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಸವರ್ಣೀಯರು ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ‌ ಮಾಡಿದ್ದರು. ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಒಟ್ಟು 27 ಜನರ ಮೇಲೆ ಆರೋಪಿಗಳ ವಿರುದ್ಧ ಕೊಲೆ ಹಾಗೂ ಜಾತಿನಿಂದನೆ ಕೇಸ್ ದಾಖಲಾಗಿತ್ತು. ಸದ್ಯ 27 ಜನ ಆರೋಪಿಗಳ ಪೈಕಿ 6 ಜನ ಮೃತಪಟ್ಟಿದ್ದರಿಂದ 21 ಆರೋಪಿಗಳಿಗೆ ಶಿಕ್ಷೆಯಾಗಿದೆ. 21 ಜನರಲ್ಲಿ ಇಬ್ಬರು ಮಹಿಳೆಯರು, 19 ಜನ ಪುರುಷ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net