ಶ್ರೀ ದುರ್ಗಾ ಸಹಕಾರ ಸಂಘಕ್ಕೆ ‘ಸಾಧನಾ’ ಪ್ರಶಸ್ತಿ

sid
Published on

ಗೋಳಿಯಂಗಡಿ: ಗೋಳಿಯಂಗಡಿ ಶ್ರೀ ದುರ್ಗಾ ವಿವಿದೋದ್ದೇಶ ಸಹಕಾರ ಸಂವು 2024-25ನೇ ಸಾಲಿನಲ್ಲಿ ಸಾಧಿಸಿದ ಸರ್ವೋತೋಮುಖ ಅಭಿವೃದ್ಧಿಗಾಗಿ ಸತತ 3ನೇ ಬಾರಿಗೆ ಸಾಧನಾ ಪ್ರಶಸ್ತಿ ಲಭಿಸಿದೆ. ಮಂಗಳೂರಿನಲ್ಲಿ ನಡೆದ ಜಿಲ್ಲಾ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರಕುವಾರ್ ಅವರು ಗೋಳಿಯಂಗಡಿ ಶ್ರೀದುರ್ಗಾ ವಿವಿದೋದ್ದೇಶ ಸಹಕಾರ ಸಂದ ಉಪಾಧ್ಯಕ್ಷ ಕೃಷ್ಣ ನಾಯ್ಕ ತೆಂಕಬೆಟ್ಟು ಬೆಳ್ವೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಲತಾ ಮರೂರು ಇವರಿಗೆ ಶನಿವಾರ ಪ್ರಶಸ್ತಿ ಪ್ರದಾನ ವಾಡಿದರು. ನಿರ್ದೇಶಕ ಕೃಷ್ಣ ನಾಯ್ಕ ಸೆಟ್ಟೋಳಿ, ಪ್ರಭಾಕರ ನಾಯ್ಕ ತೊನ್ನಾಸೆ ಹಾಡಿಮನೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net