

ಬೆಂಗಳೂರು: ಪ್ರತಿಯೊಬ್ಬ ಕ್ರೀಡಾಪಟುವಿಗೆ ಆಯಾ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿ ದೇಶ ಪ್ರತಿನಿಧಿಸುವುದೇ ಹೆಮ್ಮೆಯ ವಿಷಯ. ಜೆರ್ಸಿ ಹಿಂಬದಿ ಅದೃಷ್ಟದ ಅಥವಾ ೇವರಿಟ್ ಸಂಖ್ಯೆ ಬರೆಸಿಕೊಳ್ಳುವುದು ಸಾಮಾನ್ಯ. ಒಬ್ಬರು ಒಂದೊಂದು ಜೆರ್ಸಿ ಸಂಖ್ಯೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಕ್ರಿಕೆಟ್, ುಟ್‌ಬಾಲ್‌ನಲ್ಲಿ ಜೆರ್ಸಿ ಸಂಖ್ಯೆಗೆ ಇರುವಷ್ಟು ಪ್ರಾಮುಖ್ಯತೆ ಬೇರೆ ಯಾವುದೇ ಕ್ರೀಡೆಗಳಲ್ಲಿ ಕಾಣ ಸಿಗುವುದಿಲ್ಲ. ಜೆರ್ಸಿ ನಂಬರ್ ಹೇಳಿದರೆ ಸಾಕು ಥಟ್ಟನೆ ಆ ಆಟಗಾರ ನೆನಪಾಗುತ್ತಾರೆ. ಟೀಮ್ ಇಂಡಿಯಾದಲ್ಲಿ ಯಾರ ಜೆರ್ಸಿ ನಂಬರ್ ಮರೆತರೂ ದಿಗ್ಗಜ ಸಚಿನ್ ತೆಂಡುಲ್ಕರ್ ನಂಬರ್ ಯಾರೂ ಮರೆಯಲು ಸಾಧ್ಯವಿಲ್ಲ. ಸಚಿನ್ ಜೆರ್ಸಿ ಎಂದರೇ ಕ್ಷಣಮಾತ್ರದಲ್ಲೇ ಅಭಿಮಾನಿಗಳು ನಂ.10 ಎಂದು ಹೇಳಿಬಿಡುತ್ತಾರೆ. ಅಂದಹಾಗೇ ಇದೇ ಜೆರ್ಸಿ ನಂಬರ್ ತೊಟ್ಟು ಕನ್ನಡಿಗ ಸುನೀಲ್ ಜೋಶಿ ಪಂದ್ಯವನ್ನಾಡಿರುವ ಸಂಗತಿ ಎಷ್ಟೋ ಮಂದಿಗೆ ಗೊತ್ತಿಲ್ಲ....
ಸುನೀಲ್ ಜೋಶಿಗೂ ಸಿಕ್ಕಿತ್ತು ನಂ.10...!
2000ನೇ ಇಸವಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಹೀನಾಯ ಪ್ರದರ್ಶನ ತೋರಿದರೂ, ಆ ಸರಣಿ ಕನ್ನಡಿಗ ಸುನೀಲ್ ಜೋಶಿ ಪಾಲಿಗೆ ಅವಿಸ್ಮರಣೀಯವಾಗಿತ್ತು. ಏಕೆಂದರೆ, ಆಸ್ಟ್ರೇಲಿಯಾ ಎದುರಿನ ಪಂದ್ಯವೊಂದರಲ್ಲಿ ಸಚಿನ್ ಹಾಕುತ್ತಿದ್ದ ಜೆರ್ಸಿ ನಂಬರ್ 10 ಜೋಶಿ ಪಾಲಾಗಿತ್ತು. ಈ ಪಂದ್ಯದಲ್ಲೇ ಜೋಶಿ, ಮಾರ್ಕ್ ವಾ ಹಾಗೂ ರಿಕಿ ಪಾಂಟಿಂಗ್ ವಿಕೆಟ್ ಪಡೆದು ಮಿಂಚಿದ್ದರು. ಈ ವಿಷಯವನ್ನು ಸ್ವತಃ ಜೋಶಿ ಅವರೇ ವಿಡಿಯೋ ಸಮೇತ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುನೀಲ್ ಜೋಶಿ ಬಿಟ್ಟರೆ ಬೇರೆ ಯಾವುದೇ ಆಟಗಾರ ಈ ಸಂಖ್ಯೆ ಹಾಕಿಲ್ಲ. ಸಚಿನ್ ನಿವೃತ್ತಿ ಬಳಿಕ ಮುಂಬೈನವರೇ ಆದ ಶಾರ್ದೂಲ್ ಠಾಕೂರ್ ಈ ಸಂಖ್ಯೆ ಧರಿಸಿದ್ದರಿಂದ ವಿವಾದಕ್ಕೀಡಾಗಿದ್ದರು. ಬಳಿಕ ಸಚಿನ್ ಜತೆಗೆಯೇ ಈ ಸಂಖ್ಯೆಯನ್ನು ಬಿಸಿಸಿಐ ನಿವೃತ್ತಿಗೊಳಿಸಿತ್ತು.
ಇದನ್ನೂ ಓದಿ: ಐಪಿಎಲ್ ಯಾಕೆ ಸ್ಪೆಷಲ್? ಕೊಹ್ಲಿ ಕೊಡ್ತಾರೆ ಕಾರಣ
ನಂ.10 ಪ್ರಿಯ ಸಚಿನ್ ತೆಂಡುಲ್ಕರ್
ಟೀಮ್ ಇಂಡಿಯಾ ಜೆರ್ಸಿ ಮೇಲೆ ನಂ.10 ಇತ್ತೆಂದರೆ ಅದು ಸಚಿನ್ ತೆಂಡುಲ್ಕರ್ ಅಂತ. ವೃತ್ತಿ ಜೀವನದ ಕೊನೇ ಕ್ಷಣದವರೆಗೂ ಸಚಿನ್ 10 ಸಂಖ್ಯೆ ಬಿಡಲಿಲ್ಲ. ವೃತ್ತಿ ಜೀವನದ ಆರಂಭದಲ್ಲಿ ನಂ.33, 99 ಸಂಖ್ಯೆ ತೊಡುತ್ತಿದ್ದ ಸಚಿನ್ ಬಳಿಕ ಕಾಯಂ ಆಗಿ ನಂ.10 ಆಯ್ಕೆ ಮಾಡಿಕೊಂಡರು. ಅಂತಾರಾಷ್ಟ್ರೀಯ, ಬಳಿಕ ಐಪಿಎಲ್‌ನಲ್ಲೂ ಕಾಯಂ ಆಗಿ ಸಚಿನ್ ಈ ನಂಬರ್ ಬಳಸಿದರು. ಈ ಸಂಖ್ಯೆ ಗುಟ್ಟು ಸಚಿನ್‌ಗಷ್ಟೇ ಗೊತ್ತು.