VIDEO: ಕುಡಿದ ಗುಂಗಿನಲ್ಲಿ ನಾಯಕ್‌ ಹ್ಞೂಂ ಮೇ... ಖಳನಾಯಕ್‌ ಹ್ಞೂಂ... ಎಂದು ಡಾನ್ಸ್‌ ಮಾಡುತ್ತ ಸತ್ತೇ ಹೋದ...!

death
Published on

ಇಂದೋರ್: ಹೋಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಅನೇಕ ಮಂದಿ ಆಚರಿಸಿದರು. ಬಣ್ಣದ ಓಕುಳಿಯನ್ನು ಕೈಯಲ್ಲಿ ಹಿಡಿದು ನರ್ತಿಸಿ ಖುಷಿಪಟ್ಟರೆ, ಇನ್ನು ಕೆಲವು ಯುವಕರು ಗುಂಡು ಏರಿಸಿಕೊಂಡು ನರ್ತಿಸಿದರು. ಆದರೆ ಇದೇ ಕುಡಿತ ಯುವಕನೊಬ್ಬನ ಪ್ರಾಣವನ್ನೇ ತೆಗೆದಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಲ್ಲಿಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕ ಗೋಪಾಲ್‌ ಮೃತಪಟ್ಟವನು. ಈತ ಕೈಯಲ್ಲಿ ಚಾಕು ಹಿಡಿದುಕೊಂಡು ಕಂಠಪೂರ್ತಿ ಕುಡಿದು ತನ್ನ ಸ್ನೇಹಿತರ ಜತೆ ‘ಖಳನಾಯಕ್‌’ ಚಿತ್ರದ ನಾಯಕ್‌ ಹ್ಞೂಂ ಮೇ... ಖಳನಾಯಕ್‌ ಹ್ಞೂಂ... ಹಾಡಿಗೆ ನೃತ್ಯ ಮಾಡುತ್ತಿದ್ದ. ಹೀಗೆ ನರ್ತಿಸುತ್ತಾ ಇವನ ಕಿಕ್ಕು ಇನ್ನೂ ಏರಿತೋ ಏನೋ. ಒಟ್ಟಿನಲ್ಲಿ ಎಲ್ಲರೂ ಕುಡಿದ ಅಮಲಿನಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಈತ ಮಾತ್ರ ಚಾಕುವಿನಿಂದ ಎದೆ ಭಾಗವನ್ನು ಚುಚ್ಚಿಕೊಂಡಿದ್ದಾನೆ.

ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಯಾವುದೇ ಪರಯೋಜನವಾಗಿಲ್ಲ. ಮೃತಪಟ್ಟಿದ್ದಾನೆ. ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಕುಡಿದ ಗುಂಗಿನಲ್ಲಿ ಚಾಕು ಇರಿದುಕೊಂಡದ್ದು ತಿಳಿಯಲಿಲ್ಲವೋ ಎಂಬುದು ತಿಳಿದುಬಂದಿಲ್ಲ. ಗೋಪಾಲ್ ಸ್ನೇಹಿತರು ಒಟ್ಟಾಗಿ ಡ್ಯಾನ್ಸ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬಂಗಂಗಾ ಪೊಲೀಸರು ಮೃತ ಗೋಪಾಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಬಿಂದೋ ಆಸ್ಪತ್ರೆಗೆ ಕಳುಹಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

ಇದೀಗ ಈ ಪ್ರಕರಣದ ತನಿಖೆಯನ್ನು ಬಂಗಂಗಾ ಪೊಲೀಸರು ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ.

ಅದರ ವಿಡಿಯೋ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net