

ಯೂಕ್ರೇನ್: ಯೂಕ್ರೇನ್ ಕೆಲ ತಿಂಗಳಿನಿಂದ ಭಾರಿ ಸುದ್ದಿಯಲ್ಲಿ ಇರುವ ದೇಶ. ರಷ್ಯಾ ದಾಳಿ ಮಾಡಿದ ಮೇಲೆ ಯೂಕ್ರೇನ್ ಭಾರಿ ಪ್ರಸಿದ್ಧಿಗೆ ಬಂದಿದೆ. ಅಂದ ಹಾಗೆ ಇಲ್ಲಿ ಕಾಣುತ್ತಿರುವ ಯುವತಿ ಕೂಡ ಯೂಕ್ರೇನ್ನವಳೇ. ಅಲ್ಲಿಯ ಪ್ರಸಿದ್ಧ ಮಾಡೆಲ್ ಆಗಿರುವ ಈಕೆಯ ಹೆಸರು ಅನ್ಸ್ತಾಶಿಯಾ ಪ್ರೋಕ್ರೇಶ್ಚುಕ್.
ಈ ಮಾಡೆಲ್ ಹೆಸರು ವಿಚಿತ್ರವಾಗಿ ಇರುವಂತೆ, ಇವಳ ಕೆನ್ನೆಯೂ ವಿಚಿತ್ರವಾಗಿದೆ ಎನಿಸುತ್ತಿದೆ ಅಲ್ಲವೆ? ಹುಟ್ಟುತ್ತಲೇ ಈ ರೀತಿಯ ಕೆನ್ನೆ ಇದ್ದಿದ್ದರೆ ಅವಳು ಇಷ್ಟೊಂದು ಸುದ್ದಿಯಾಗುತ್ತಲೇ ಇರಲಿಲ್ಲ. ಈಗ ಈಕೆ ಇಷ್ಟೊಂದು ಸುದ್ದಿಗೆ ಬರಲು ಕಾರಣವೂ ಇವಳ ಕೆನ್ನೆ.
ಹಲವರಿಗೆ ವಿಚಿತ್ರ ಎಂದು ಕಾಣಿಸುವ ಈ ಕೆನ್ನೆಯನ್ನು ಪಡೆಯಲು ಈಕೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ! ಕೆಲವರಿಗೆ ಸೌಂದರ್ಯದ ಹುಚ್ಚು ಎಷ್ಟು ಇರುತ್ತದೆ ಎಂದರೆ ವಿಭಿನ್ನವಾಗಿ ಕಾಣಿಸಲು ನಾನಾ ಮೇಕಪ್ ಮೊರೆ ಹೋಗುತ್ತಾರೆ. ಶಾಶ್ವತವಾಗಿ ಚೆನ್ನಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿಗೆ ದುಡ್ಡು ತೆರುತ್ತಾರೆ. ಈ ಮಾಡೆಲ್ ಕೂಡ ಅಂಥವಳೇ. ಉಬ್ಬು ಕೆನ್ನೆಯನ್ನು ಪಡೆಯಬೇಕು ಎನ್ನುವ ಕಾರಣಕ್ಕೆ ಈಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.
ತಾನು ಅಂದುಕೊಂಡಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಈಕೆ ಈಗ ವಿಶ್ವದಲ್ಲೇ ದೊಡ್ಡದಾದ ಕೆನ್ನೆಯನ್ನು ಹೊಂದಿದವರು ಎಂಬ ದಾಖಲೆ ಬರೆದಿದ್ದಾಳೆ. ಅಂದಹಾಗೆ ಈಕೆಗೆ ಒಂದೇ ಒಂದು ಬಾರಿ ಮಾಡಿದ ಶಸ್ತ್ರಚಿಕಿತ್ಸೆಯಿಂದ ಹೀಗೆ ಕೆನ್ನೆ ಊದಿಕೊಳ್ಳಲಿಲ್ಲ. ಬದಲಿಗೆ ತನ್ನ ಇಷ್ಟದಂತೆ ಕೆನ್ನೆಗಾಗಿ ಈಕೆ ಹಲವಾರು ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾಳೆ. ಅದೂ ಬರೋಬ್ಬರಿ ಆರು ವರ್ಷ. ಆರು ವರ್ಷಗಳ ಸತತ ಶಸ್ತ್ರಚಿಕಿತ್ಸೆ ನಂತರ ಈಗ ಈ ದಾಖಲೆ ಬರೆದಿದ್ದಾಳೆ.
‘
33 ವರ್ಷದ ಈ ಮಾಡೆಲ್ ತನ್ನ 6 ವರ್ಷದ ಚಿತ್ರದ ಜತೆಗೆ ಈಗಿನ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಎಷ್ಟೋ ಮಂದಿ ನೀವು ಮೊದಲೇ ತುಂಬಾ ಚೆನ್ನಾಗಿದ್ರಿ ಎಂದು ಕಮೆಂಟ್ ಮಾಡಿದ್ದರೆ, ಕೆಲವರು ಮಾತ್ರ ಈಗಲೇ ಸೂಪರ್ ಕಾಣಿಸುತ್ತಿದ್ದೀರಿ ಎಂದಿದ್ದಾರೆ. (ಏಜೆನ್ಸೀಸ್)