More

    VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

    ಮ್ಯಾಡ್ರಿಡ್​ (ಸ್ಪೇನ್​): ಗ್ರಹಚಾರ ಸರಿಯಿಲ್ಲದಿದ್ದರೆ ಜೀವಕ್ಕೆ ಹೇಗೆ ಬೇಕಾದರೂ ಅಪಾಯ ಆಗುತ್ತದೆ. ಫುಟ್​ಪಾಥ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದರೂ ಅಪಘಾತದಲ್ಲಿ ಜೀವ ಹೋಗಬಲ್ಲುದು, ಸರಿಯಾಗಿ ವಾಹನ ಚಲಾಯಿಸುತ್ತಿದ್ದರೂ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳಬಹುದು, ಕಾರಣವೇ ಇಲ್ಲದೇ ಪ್ರಾಣಕ್ಕೆ ಸಂಚಕಾರ ಬರಬಹುದು.

    ಅಂಥದ್ದೇ ಒಂದು ಘಟನೆ ಸ್ಪೇನ್​ನ ಮ್ಯಾಡ್ರಿಡ್​ ನಗರದಲ್ಲಿ ನಡೆದಿದೆ. ಯುವತಿಯೊಬ್ಬಳು ತನ್ನ ಗೆಳೆಯನ ಜತೆ ಹಾಡಿನಲ್ಲಿ ಮೈಮರೆತಾಗ ಹಿಂದೆ ಇಟ್ಟಿದ್ದ ಕ್ರಿಸ್​ಮಸ್​ ಕ್ಯಾಂಡಲ್​ನ ಬೆಂಕಿ ಆಕೆಯ ಕೂದಲಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ.

    ಇಲ್ಲಿಯ ಪ್ರಸಿದ್ಧ ಗಾಯಕಿ ಸೋಫಿಯಾ ಎಲ್ಲಾರ್ ತನ್ನ ಗೆಳೆಯ ಅಲ್ವಾರೊ ಸೋಲರ್ ಜತೆ ಕ್ರಿಸ್‌ಮಸ್ ಕ್ಷಣವನ್ನು ಆನಂದಿಸುತ್ತಿದ್ದಳು. ಅಲ್ವಾರೊ ಗಿಟಾರ್​ ನುಡಿಸುತ್ತಿದ್ದರೆ, ಸೋಫಿಯಾ ಹಾಡು ಹಾಡುತ್ತಿದ್ದರು. ಇಬ್ಬರೂ ಆನಂದದಲ್ಲಿ ಮೈಮರೆತಿದ್ದರು.

    VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!
    ಈ ಸಡಗರವನ್ನು ಅವರು ವಿಡಿಯೋ ಕೂಡ ಮಾಡಿದ್ದಾರೆ. ಸೋಫಿಯಾ ಮತ್ತು ಅಲ್ವಾರೊ ಸುಂದರವಾಗಿ ಅಲಂಕರಿಸಲ್ಪಟ್ಟ ಕ್ರಿಸ್ಮಸ್ ವೃಕ್ಷದ ಮುಂದೆ ಕುಳಿತು ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಇಲ್ಲಿಯ ಪ್ರಸಿದ್ಧವಾಗ ಫೆಲಿಜ್ ನವಿದಾಡ್’ ಹಾಡನ್ನು ಹಾಡುತ್ತಿದ್ದರು. ಕ್ರಿಸ್​ಮಸ್​ ಟ್ರೀ ಮುಂದೆ ಮೇಣದಬತ್ತಿಗಳಿಂದ ಅಲಂಕರಿಸಿದ್ದರು.

    ಕೂದಲನ್ನು ಇಳಿಬಿಟ್ಟ ಸೋಫಿಯಾ ಹಾಡುತ್ತಾ ಹಾಡುತ್ತಾ ತಲೆಯಲ್ಲಾಡಿಸುತ್ತಾಳೆ. ಆಕೆಯ ಹಿಂದೆ ಇದ್ದ ಮೇಣದ ಬತ್ತಿಯ ಬೆಂಕಿಗೆ ಆಕೆಯ ಕೂದಲು ತಗುಲಿ ಕೂದಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಕೂಡಲೇ ಕಿರುಚಿಕೊಳ್ಳುತ್ತಾಳೆ ಸೋಫಿಯಾ. ಆತನ ಗೆಳೆಯ ಗಾಬರಿಯಿಂದ ಏಳುತ್ತಾನೆ. ಇಷ್ಟು ವೈರಲ್​ ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

    ಕೂಡಲೇ ಗೆಳೆಯ ಬೆಂಕಿ ನಂದಿಸುತ್ತಾನೆ. ಈ ಘಟನೆಯಲ್ಲಿ ಸೋಫಿಯಾ ಗಾಯಗೊಂಡಿಲ್ಲ, ಆದರೆ ಅವಳ ಸುಂದರವಾದ ಕೂದಲು ಸುಟ್ಟಿಹೋಗಿರುವುದಾಗಿ ವರದಿಯಾಗಿದೆ.

    ಸೋಫಿಯಾ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದು, ತನ್ನ ಗೆಳೆಯನಿಗೆ ಧನ್ಯವಾದ ಹೇಳಿದ್ದಾಳೆ. ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದೆ.

    ವಿಡಿಯೋ ಇಲ್ಲಿದೆ ನೋಡಿ:


    ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

    ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾರಾಟ- ಜಾಲದ ಹಿಂದೆ ಇಂಜಿನಿಯರ್​ ಪತ್ನಿ!

    ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?

    ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

    v

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts