

ಉತ್ತರ: ಖಂಡಿತಾ ಇದೆ. ನಿಮ್ಮ ಈ ಸಮಸ್ಯೆಗೆ ಎರಡು ಮಗ್ಗುಲುಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಮೊದಲನೆಯದಾಗಿ ಕಾನೂನಿನ ಮೂಲಕ. ನೀವು ಅವಳ ವಿದ್ಯಾಭ್ಯಾಸಕ್ಕೆ ಹಣಕೊಟ್ಟದ್ದಕ್ಕೆ ಬ್ಯಾಂಕಿನ ದಾಖಲೆಗಳಿವೆ ಎಂದು ಬರೆದಿದ್ದೀರಿ. ನಿಮ್ಮ ಕೇಸಿಗೆ ಅದೂ ಒಂದು ಸಾಕ್ಷಿಯಾಗುತ್ತದೆಯಲ್ಲವೇ? ಮತ್ತೊಂದು ಅವಳ ಅನೈತಿಕ ಚಿತ್ರ ನಿಮ್ಮ ಹತ್ತಿರವಿದೆ. ಅದನ್ನೂ ಕೋರ್ಟಿಗೆ ಪ್ರಡ್ಯೂಸ್ ಮಾಡಬಹುದೆನಿಸುತ್ತದೆ. ಈ ಬಗ್ಗೆ ನೀವು ವಕೀಲರ ಹತ್ತಿರ ವಿಚಾರಿಸ ಬೇಕು.
ಎರಡನೆಯದಾಗಿ ಮಾನಸಿಕ ಕಾರಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಆಗ ನಿಮಗೆ ಈಗ ಆಗುತ್ತಿರುವ ಕೋಪ ವಿಷಾದಗಳು ಬೇರೆಯದೇ ರೀತಿಯಲ್ಲಿ ಕಾಣಬಹುದು. ನಿಮ್ಮ ಒಳ್ಳೆಯ ತನವನ್ನು ಮತ್ತು ನೀವು ಹುಡುಗಿಯಲ್ಲಿ ತೋರಿಸಿದ ಆಸಕ್ತಿಯನ್ನು ಆ ಜನ ದುರುಳುತನದಿಂದ ಬಳಸಿಕೊಂಡು ನಿಮ್ಮಿಂದ ಹಣಕಿತ್ತಿದ್ದಾರೆ. ಆ ಮಟ್ಟಿಗೆ ನೀವು ಮೋಸ ಹೋಗಿದ್ದೀರಿ. ಇದಕ್ಕೆ ಆ ಹುಡುಗಿ ಎಷ್ಟು ಕಾರಣವೋ ಗೊತ್ತಿಲ್ಲ.
ಇನ್ನೊಂದು. ನೀವು ಹುಡುಗಿಯ ಬಗ್ಗೆ ಯೋಚಿಸಬೇಕಾಗಿರುವುದು – ನೀವು ಆಕೆಯನ್ನು ಕಂಡಾಗ ಆಕೆ ಇನ್ನೂ ೯ನೇತರಗತಿಯಲ್ಲಿ ಓದುತ್ತಿದ್ದಳು. ಅದು ಅಪ್ರಾಪ್ತವಯಸ್ಸು ಪ್ರೇಮ ಪ್ರೀತಿಗಳ ಬಗ್ಗೆ ತಿಳುವಳಿಕೆ ಇಲ್ಲದ ವಯಸ್ಸು. ನಿಮ್ಮ ಹಣ, ಅಂತಸ್ತು, ನಿಲುವುಗಳನ್ನು ಕಂಡು ಮರುಳಾಗಿರಬಹುದು. ನಂತರ ನೀವು ಪರದೇಶಕ್ಕೆ ಹೋಗಿಬಿಟ್ಟಿದ್ದೀರಿ. ಕಣ್ಣಿಂದ ದೂರಾದರೆ ಮನಸ್ಸಿನಿಂದಲೂ ದೂರಾಗುವುದು ಮನುಷ್ಯನ ಸಹಜ ಸ್ವಭಾವಗಳಲ್ಲಿ ಒಂದು. ಆಕೆ ತನ್ನ ವಿದ್ಯಾಭ್ಯಾಸವನ್ನು ಮುಗಿಸುವ ಹೊತ್ತಿಗೆ ತನ್ನ ಮನೋಭೀಷ್ಟೆಗೆ ತಕ್ಕಂತೆ ಯಾರನ್ನೋ ಮೋಹಿಸಿರಬಹುದು. ಇವೆಲ್ಲವೂ ಬೆಳೆಯುವ ವಯಸ್ಸಿನಲ್ಲಿ ಸಹಜವಾಗಿ ಆಗುವಂತಹ ಕ್ರಿಯೆಗಳು. ಇಲ್ಲಿ ನಿಜವಾಗಿಯೂ ಸ್ವಾರ್ಥಿಗಳೂ, ದುರಾಚಾರಿಗಳೂ ಆಗಿರುವವರು ಆಕೆಯ ತಂದೆತಾಯಿ. ಅವಳಿಗೆ ಮತ್ತೊಬ್ಬನ ಮೇಲೆ ಪ್ರೀತಿಯಿರುವುದನ್ನು ತಿಳಿದೂ ನಿಮ್ಮಿಂದ ಹಣ ವಸೂಲಿಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಇದು ತೀರಾ ಧೂರ್ತತನ.
ನೀವು ಕೇಸನ್ನು ನೇರವಾಗಿ ಅವರ ಮೇಲೇ ಹಾಕಬಹುದೇನೋ. ಈಗಲೂ ಏನು ಕಾಲಮಿಂಚಿಲ್ಲ. ನಿಮ್ಮ ಹತ್ತಿರ ಬಲವಾದ ಸಾಕ್ಷಿಗಳಿರುವುದರಿಂದ ಸರಿಯಾದ ವಕೀಲರನ್ನು ನೋಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸರಿಯಾದ ಹುಡುಗಿಯನ್ನು ನೋಡಿ ಮತ್ತೊಂದು ಮದುವೆಯಾಗುವುದಕ್ಕೂ ಕಾಲವೇನೂ ಮಿಂಚಿಲ್ಲ.
ಡಾ.ಶಾಂತಾ ನಾಗರಾಜ್ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/