VIDEO: ದಸರಾ ಹಬ್ಬಕ್ಕೆ ಹೀಗೊಂದು 'ಬಂಪರ್​ ಕೊಡುಗೆ': ಆರ್ಡರ್​ ಮಾಡಿದ್ದು ಡ್ರೋನ್​ ಕ್ಯಾಮೆರಾ, ಮನೆಗೆ ಬಂದದ್ದು.....

dron
Published on

ಪಟ್ನಾ: ಅನ್​ಲೈನ್​ಗಳಲ್ಲಿ ಏನಾದರೂ ವಸ್ತುಗಳ ಆರ್ಡರ್​ ಮಾಡಿದಾಗ ಬೇರೆಯ ವಸ್ತುಗಳು ಬರುವುದು ಮಾಮೂಲಾಗಿ ಬಿಟ್ಟಿದೆ. ಅದೇ ರೀತಿ ದಸರಾಗೆ ಬಂಪರ್​ ಕೊಡುಗೆ ಎನ್ನುವ ಕಾರಣಕ್ಕೆ ಡ್ರೋನ್​ ಕ್ಯಾಮೆರಾ ಆರ್ಡರ್​ ಮಾಡಿದ್ದ ಒಬ್ಬ ಗ್ರಾಹಕ ಪ್ಯಾಕ್​ ಬಿಚ್ಚಿ ನೋಡಿದಾಗ ಶಾಕ್​ಗೆ ಒಳಗಾಗಿರುವ ಘಟನೆ ನಡೆದಿದೆ.


ಬಿಹಾರ ನಳಂದದ ಪರ್ವಾಲ್‍ಪುರದ ಚೈತನ್ಯ ಕುಮಾರ್ ಎನ್ನುವವರು "ಮೀಶೋ" ಮಾರ್ಕೆಟಿಂಗ್​ ವೆಬ್​ಸೈಟ್​ನಲ್ಲಿ ಡ್ರೋನ್ ಕ್ಯಾಮೆರಾ ಆರ್ಡರ್​ ಮಾಡಿದ್ದರೆ ಅವರಿಗೆ ಬಂದದ್ದು ಒಂದು ಕೆ.ಜಿ ಆಲೂಗಡ್ಡೆ! ಮನೆಗೆ ಬಂದಿರುವ ಪಾರ್ಸೆಲ್ ಅನ್ನು ಅವರು ವಿಡಿಯೋ ಮೂಲಕ ತೋರಿಸಿದ್ದು, ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಪಾರ್ಸೆಲ್ ತೆರೆದಾಗ ಅದರಲ್ಲಿ ಡ್ರೋನ್ ಕ್ಯಾಮೆರಾ ಬದಲಿಗೆ 10 ಆಲೂಗಡ್ಡೆ ಇರುವುದು ವಿಡಿಯೋದಲ್ಲಿ ನೋಡಬಹುದು. ಇದರಿಂದ ರೊಚ್ಚಿಗೆದ್ದ ಚೈತನ್ಯ ಕುಮಾರ್ ಅವರು, ಡೆಲಿಬಾಯ್​ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಆತ, 'ನನ್ನದೇನೂ ತಪ್ಪಿಲ್ಲ. ಬಾಕ್ಸ್ ಮಾಡಿ ವಿಳಾಸ ಹಾಕಿಟ್ಟಿದ್ದ ಪಾರ್ಸೆಲ್ ನಾನು ತಂದು ನಿಮಗೆ ತಲುಪಿಸಿದ್ದೇನೆ ಅಷ್ಟೇ' ಎಂದು ಹೇಳಿದ್ದಾನೆ.

ಅಂದಹಾಗೆ ಇವರು ಆರ್ಡರ್​ ಮಾಡಿದ್ದ ಡ್ರೋನ್ ಕ್ಯಾಮೆರಾಕ್ಕೆ ಮಾರುಕಟ್ಟೆ ಮೌಲ್ಯ 85 ಸಾವಿರ ರೂಪಾಯಿಗಳು ಇದ್ದರೆ ಮೀಶೋ ವೆಬ್​ಸೈಟ್​ನಲ್ಲಿ ಇದು 10, 212 ರೂ.ಗೆ ಇತ್ತು. ಇಷ್ಟು ಕಮ್ಮಿ ಬೆಲೆಗೆ ಡ್ರೋನ್​ ಕ್ಯಾಮೆರಾ ಸಿಗುತ್ತದೆ ಎಂದು ನೋಡಿ ಖುಷಿಪಟ್ಟುಕೊಂಡು ಅದನ್ನು ಆರ್ಡರ್​ ಮಾಡಿದರೆ ಬಂದದ್ದು ಅಲೂಗಡ್ಡೆ!

ಈ ಬಗ್ಗೆ ಚೈತನ್ಯ ಕುಮಾರ್ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ವಲಪುರ ಎಸ್‍ಎಚ್‍ಒ ಹೇಳಿದ್ದಾರೆ (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net