ಟ್ರೋಲ್​ ಆಗಲೆಂದೇ ಅರ್ಧಂಬರ್ಧ ಬಟ್ಟೆ ತೊಡುವ ಉರ್ಫಿಯ ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

urfi
Published on

ಮುಂಬೈ: ಬಾಲಿವುಡ್​ ನಟಿ ಉರ್ಫಿ ಜಾವೇದ್​ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಮೈ ನವಿರೇಳುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಹಾಟ್​ ಆಗಿ ಕಾಣಿಸಿಕೊಳ್ಳುವ ಈ ನಟಿ ಈಗಂತೂ ಜಾಲತಾಣದಲ್ಲಿ ತಮ್ಮ ಬಟ್ಟೆಯಿಂದಲೇ ಫೇಮಸ್​ ಆಗುತ್ತಿದ್ದಾಳೆ. ಪ್ರಸಿದ್ಧಿಗಿಂತಲೂ ಹೆಚ್ಚಾಗಿ ಟ್ರೋಲ್​ಗೆ ಒಳಗಾಗುತ್ತಿರುವ ಈ ನಟಿಗೆ ಅದು ಇನ್ನಿಲ್ಲದ ಸಂತೋಷ ಕೊಡುತ್ತಿದೆಯೆಂತೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿ ಇರಲು ಬಯಸುವ ಹಲವು ಸೆಲೆಬ್ರಿಟಿಗಳಲ್ಲಿ ಉರ್ಫಿ ಕೂಡ ಒಬ್ಬಳು. ಇದಕ್ಕೆ ಈಕೆ ಆಯ್ದುಕೊಂಡಿರುವ ಮಾರ್ಗ ಕನಿಷ್ಠ ಬಟ್ಟೆ ತೊಡುವುದು. ಎಷ್ಟು ತಾನು ಟ್ರೋಲ್​ ಆಗುತ್ತೇನೋ ಅಷ್ಟು ಪ್ರಸಿದ್ಧಿಗೆ ಬರುತ್ತೇನೆ ಎಂದು ಅರಿತುಕೊಂಡಿರುವ ಈ ಬೆಡಗಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಈಕೆ ಗಳಿಸುತ್ತಿರುವ ಅದಾಯ.

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ಕನಿಷ್ಠ ಬಟ್ಟೆ ತೊಟ್ಟು ಪೋಸ್​ ನೀಡುವಂತೆ ಹಣ ಗಳಿಕೆಯ ವಿಷಯದಲ್ಲಿಯೂ ಯಾರನ್ನೂ ಮೀರಿಸಲಾರಳು. ಇದಕ್ಕೆ ಕಾರಣ ಈಕೆ ಸುಮಾರು 170 ಕೋಟಿ ರೂಪಾಯಿಗಳ ಒಡತಿ.

ವರದಿಯ ಪ್ರಕಾರ, 26 ವರ್ಷದ ಉರ್ಫಿ ಸುಮಾರು 170 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾಳೆ. ಇದರ ಜತೆಗೆ ಮುಂಬೈನಲ್ಲಿ ಐಷಾರಾಮಿ ಬಂಗಲೆ ಹಾಗೂ ಸಕಲ ಸೌಲಭ್ಯ ಇರುವ ಫ್ಲ್ಯಾಟ್​ ಇದೆ ಎನ್ನಲಾಗುತ್ತಿದೆ. ತನ್ನ ಈ ಕನಿಷ್ಠ ಬಟ್ಟೆಯ ಪೋಸ್​ ನೀಡುವುದರಿಂದಲೇ ತಿಂಗಳಿಗೆ ಸುಮಾರು 2-5 ದಶಲಕ್ಷ ರೂಪಾಯಿ ಗಳಿಸುತ್ತಾರೆ ಎನ್ನಲಾಗಿದೆ. ಈ ಮೂಲಕ ಮಾಡೆಲಿಂಗ್​ ಪ್ರಪಂಚದಲ್ಲಿ ಈಕೆ ಮಿಂಚುತ್ತಿದ್ದಾಳೆ.

ಇದೆಷ್ಟೇ ಅಲ್ಲದೇ, ಉರ್ಫಿ ಜಾವೇದ್ ಕೂಡ ಬಿಗ್ ಬಾಸ್ ಓಟಿಟಿ ಯಲ್ಲಿ ಭಾಗವಹಿಸಲು ಭಾರಿ ಮೊತ್ತವನ್ನು ತೆಗೆದುಕೊಂಡಿದ್ದರು. ಸೆಲೆಬ್ರಿಟಿಗಳು ಫೇಮಸ್​ ಆದಷ್ಟೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳಿಗೆ ಅವರಿಗೆ ಹಣ ಬರುತ್ತದೆ. ಅದರಂತೆ ಇದೀಗ ಉರ್ಫಿ ಕೂಡ ಪೋಸ್ಟ್​ ಮೂಲಕ ಹಣ ಗಳಿಕೆ ಮಾಡುತ್ತಿದ್ದಾಳೆ.

ಅಂದಹಾಗೆ ಉರ್ಫಿ ಜಾವೇದ್ ಉತ್ತರ ಪ್ರದೇಶದ ರಾಜಧಾನಿ ಲಖನೌದವರು. 1996ರ ಅಕ್ಟೋಬರ್​ 15ರಂದು ಹುಟ್ಟಿರುವ ಈ ಬೆಡಗಿಯ ವಯಸ್ಸು ಇದೀಗ 26 ವರ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net