ಗೂಗಲ್​ ಮ್ಯಾಪ್​ ಎಡವಟ್ಟು, 'ನೇರವಾಗಿ ಹೋಗಿ...' ಎಂಬ ಮಾತು ಕೇಳಿ ನಡೆದದ್ದು ಭಾರಿ ದುರಂತ!

google map
Published on

ಕಾಡುತುರುತಿ (ಮಧ್ಯಪ್ರದೇಶ): ದಾರಿ ಗೊತ್ತಾಗಿದ್ದರೆ ಗೂಗಲ್​ ಮ್ಯಾಪ್​ ಬಳಸುವುದು ಮಾಮೂಲು. ಆದರೆ ಎಷ್ಟೋ ಸಂದರ್ಭಗಳಲ್ಲಿ ಈ ಮ್ಯಾಪ್​ ಹೇಳಿದಂತೆ ಹೋದರೆ ದಾರಿ ತಪ್ಪುವುದೂ ಉಂಟು, ಇಲ್ಲವೇ ಸುತ್ತಿದ್ದಲ್ಲೇ ಸುತ್ತಿ ಸುತ್ತಿ ಸುಸ್ತಾಗುವುದೂ ಉಂಟು. ಆದರೂ ಗೂಗಲ್​ ಮ್ಯಾಪ್​ ಬಳಕೆ ನಿಂತಿಲ್ಲ.

ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ಕರ್ನಾಟಕದ ಕುಟುಂಬವೊಂದು ಗೂಗಲ್​ ಮ್ಯಾಪ್​ ಮಾತು ಕೇಳಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಅದೃಷ್ಟವಶಾತ್​ ಅಲ್ಲಿದ್ದವರು ರಕ್ಷಿಸಿದ್ದರಿಂದ ಸ್ವಲ್ಪದಲ್ಲಿಯೇ ಭಾರಿ ಅನಾಹುತ ತಪ್ಪಿದೆ.

ಮುನ್ನಾರ್‌ನಿಂದ ಅಲಪ್ಪುಳಕ್ಕೆ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಂಪತಿ ಮತ್ತು ಮಕ್ಕಳು ಅದರಲ್ಲಿ ಇದ್ದರು. ಇವರಿಗೆ ದಾರಿ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಸಹಜವಾಗಿ ಗೂಗಲ್​ ಮ್ಯಾಪ್​ ಮೊರೆ ಹೋಗಿದ್ದಾರೆ. ಕಡವು ಬಳಿ ಹೋಗುತ್ತಿದ್ದಂತೆಯೇ ಗೂಗಲ್​ ಮ್ಯಾಪ್​ನಲ್ಲಿ ನೇರವಾಗಿ ಹೋಗಿ ಎಂದು ಹೇಳಲಾಗಿದೆ. ಅದು ಹೇಳಿದಂತೆ ಕಾರಿನ ಚಾಲಕ ನೇರವಾಗಿ ಹೋಗಿದ್ದಾನೆ. ಗೂಗಲ್​ ಮ್ಯಾಪ್​ ನಂಬಿದ್ದ ಆತ ಅಲ್ಲಿ ತಿರುವು ಇರುವುದನ್ನೂ ಗಮನಿಸಿಲ್ಲ.

ಆದರೆ ನೇರವಾಗಿ ಹೋಗುತ್ತಿದ್ದಂತೆಯೇ ಕಾರು ಅಲ್ಲಿರುವ ಪ್ರಪಾತಕ್ಕೆ ಬಿದ್ದುಬಿಟ್ಟಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅದರಲ್ಲಿ ನೀರು ತುಂಬಿದ್ದರಿಂದ ಕಾರು ಇನ್ನೇನು ಮುಳುಗಿ ಎಲ್ಲರ ಪ್ರಾಣವೂ ಹೋಗುತ್ತಿತ್ತು. ಆದರೆ ಅವರ ಅದೃಷ್ಟಕ್ಕೆ ಅಲ್ಲಿಯೇ ಇದ್ದ ಸ್ಥಳೀಯರು ಓಡೋಡಿ ಬಂದು ಅವರನ್ನು ರಕ್ಷಿಸಿದ್ದಾರೆ. ಟ್ರಕ್​ ಸಹಾಯದಿಂದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಆ ದಾರಿಯನ್ನು ಚೈನ್​ ಮೂಲಕ ಈಗ ಕ್ಲೋಸ್​ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net