ಛೇ... ಇದೆಂಥ ದುರಂತ! ಅಪಘಾತದಲ್ಲಿ ಪ್ರಾಣ ಬಿಡುತ್ತಲೇ ನಡುರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ಅಮ್ಮ

death
Published on

ಫಿರೋಜಾಬಾದ್ ​​(ಉತ್ತರ ಪ್ರದೇಶ): ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರು, ಅಮ್ಮನ ಮನೆಗೆ ಹೋಗುತ್ತಿದ್ದಾಗ ಭಾರಿ ದುರಂತ ನಡೆದುಹೋಗಿದೆ. ಪತಿಯ ಜತೆ ಬೈಕ್​ನಲ್ಲಿ ಹೋಗುವಾಗ ಟ್ರಕ್​ ಡಿಕ್ಕಿ ಹೊಡೆದು ಮಹಿಳೆ ನಡುರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆದರೆ ಅದೇ ವೇಳೆ ಮಗುವಿಗೆ ಜನ್ಮ ನೀಡಿದ್ದಾರೆ!

ಉತ್ತರ ಪ್ರದೇಶದ ಫಿರೋಜಾಬಾದ್​​ನ ನರಖಿ ಪೊಲೀಸ್​ ಠಾಣಾ ವ್ಯಾಪ್ತಿಯ ಬರ್ತಾರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಗ್ರಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ಕಾಮಿನಿ ಈ ದುರಂತ ಸಾವು ಕಂಡವರು.

ತುಂಬು ಗರ್ಭಿಣಿಯಾಗಿದ್ದ ಕಾಮಿನಿ, ಪತಿ ರಾಮು ಜತೆ ಬೈಕ್​ನಲ್ಲಿ ತವರಿಗೆ ಹೋಗುತ್ತಿದ್ದರು. ಬರ್ತಾರಾ ಗ್ರಾಮದ ಸಮೀಪ ಎದುರಿಗಿನಿಂದ ಬಂದ್​ ಟ್ರಕ್ ಇವರ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಬೈಕ್​ ಪಲ್ಟಿಯಾಗಿದೆ. ದಂಪತಿ ಇಬ್ಬರೂ ರಸ್ತೆಯ ಮೇಲೆ ಬಿದ್ದರು. ಆದರೆ ಕಾಮಿನಿ ಅವರು ಬಿದ್ದ ತಕ್ಷಣವೇ, ಹಿಂಬದಿಯಿಂದ ಟ್ರಕ್​ ಒಂದು ರಭಸದಿಂದ ಬಂದು ಕಾಮಿನಿಯವರಿಗೆ ಗುದ್ದಿದೆ. ಈ ಆಘಾತದಲ್ಲಿ ಕಾಮಿನಿಯವರಿಗೆ ಪ್ರಸವವಾಗಿದೆ. ಹೆಣ್ಣುಮಗುವಿಗೆ ಜನ್ಮ ನೀಡಿ ಅಲ್ಲಿಯೇ ಮೃತಪಟ್ಟಿದ್ದಾರೆ.

ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದು ಆರೋಗ್ಯವಾಗಿದೆ. ಕಾಮಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಹೆಂಡತಿ ಸಾವಿನಿಂದ ಗಂಡನ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net