

ಪರಮಾಣು ಖನಿಜಗಳ ಉತ್ಖನನ ಹಾಗೂ ಸಂಶೋಧನಾ ನಿರ್ದೇಶನಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೈಜ್ಞಾನಿಕ, ತಾಂತ್ರಿಕ ಹಾಗೂ ಗುಮಾಸ್ತ, ಚಾಲಕರನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಹುದ್ದೆಗಳು: 134
*ಸೈಂಟಿಫಿಕ್ ಅಸಿಸ್ಟೆಂಟ್ ಬಿ- 36 ಹುದ್ದೆಗಳು
ಫಿಜಿಕ್ಸ್, ಕೆಮಿಸ್ಟ್ರಿ, ಜಿಯಾಲಜಿ, ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಷನ್, ಕಂಪ್ಯೂಟರ್ ಸೈನ್ಸ್/ಇನ್ಪಮೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಹಾಗೂ ಸಿವಿಲ್ ವಿಭಾಗದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಬಿ ಹುದ್ದೆಗಳಾಗಿದ್ದು, 35,400 ರೂ.ಗಳೊಂದಿಗೆ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಆಯಾ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಹಾಗೂ ಇನ್ಸ್ಟ್ರುಮೆಂಟೇಷನ್, ಎಲೆಕ್ಟ್ರಿಕ್ ಸಿವಿಲ್ ವಿಷಯದಲ್ಲಿ ಡಿಪ್ಲೊಮಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
*ಟೆಕ್ನಿಕಲ್ ಬಿ- 41 ಸ್ಥಾನಗಳು
ಫಿಜಿಕ್ಸ್/ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಷನ್ ವಿಭಾಗ, ಲ್ಯಾಬೋರೇಟರಿ, ಪ್ಲಂಬರ್, ಬೈಂಡಿಂಗ್, ಪ್ರಿಂಟಿಂಗ್, ಡ್ರಿಲ್ಲಿಂಗ್ನಲ್ಲಿ ಸಿಬ್ಬಂದಿ ಬೇಕಾಗಿದ್ದಾರೆ. ಇವುಗಳು ಗ್ರೂಪ್ ಸಿ ಹುದ್ದೆಗಳಾಗಿದ್ದು, ಮಾಸಿಕ 21,700 ರೂ. ವೇತನ ಹಾಗೂ ಇತರ ಭತ್ಯೆಗಳನ್ನು ನೀಡಲಾಗುತ್ತದೆ. ಇದಕ್ಕೆ 10ನೇ ತರಗತಿ ಉತ್ತೀರ್ಣರಾಗಿದ್ದು, ಆಯಾ ಟ್ರೇಡ್ನಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಕೋರ್ಸ್ ಪೂರೈಸಿರಬೇಕು. ಅನುಭವವಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
*ಅಪ್ಪರ್ ಡಿವಿಷನಲ್ ಕ್ಲರ್ಕ್-16
ಗ್ರೂಪ್ ಸಿ ಹುದ್ದೆಯಾಗಿದ್ದು, ಶೇ.50 ಅಂಕಗಳೊಂದಿಗೆ ಪದವಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಜತೆಗೆ, ಇಂಗ್ಲಿಷ್ನಲ್ಲಿ ಪ್ರತಿ ನಿಮಿಷಕ್ಕೆ 30 ಪದ ಟೈಪಿಂಗ್ ವೇಗ ಮಾಡಬೇಕು. . ಕಂಪ್ಯೂಟರ್ ಜ್ಞಾನ, ಡೇಟಾ ಎಂಟ್ರಿ, ಡೇಟಾ ಪ್ರೊಸೆಸಿಂಗ್ ಗೊತ್ತಿರಬೇಕು. ಆಯ್ಕೆಯಾದವರು 25,500 ರೂ. ವೇತನ ಹಾಗೂ ಇತರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ.
ಚಾಲಕರು-13
10ನೇ ತರಗತಿ ಪಾಸಾಗಿದ್ದು, ಲಘು ಹಾಗೂ ಭಾರಿ ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಹಿಂದಿ, ಇಂಗ್ಲಿಷ್ನಲ್ಲಿರುವ ಫಾರಂ ಭರ್ತಿ ಮಾಡಲು ತಿಳಿದಿರುವವರಿಗೆ ಆದ್ಯತೆ. 19,900 ರೂ. ವೇತನ, ಇತರ ಭತ್ಯೆಗಳಿವೆ.
ಸೆಕ್ಯುರಿಟಿ ಗಾರ್ಡ್-18
10ನೇ ತರಗತಿ ಪಾಸಾಗಿರಬೇಕು. ಮಾಜಿ ಸೈನಿಕರಿಗೆ ಸೇನಾಪಡೆಯಿಂದ ನೀಡಲಾಗುವ ಮಾಜಿ ಸೈನಿಕ ಪ್ರಮಾಣಪತ್ರ ಪರಿಗಣಿಸಲಾಗುತ್ತದೆ. ನಿಗದಿತ ದೈಹಿಕ ಅರ್ಹತೆ ಹೊಂದಿರಬೇಕು. ಇವರಿಗೆ 18,000 ರೂ. ಸಂಬಳ ನೀಡಲಾಗುತ್ತದೆ. ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
*ವಯೋಮಿತಿ
ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯರಿಗೆ 35, ಎಸ್ಸಿ- ಎಸ್ಟಿ 40, ಒಬಿಸಿಯವರಿಗೆ 38 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಇದರ ಹೊರತಾಗಿಯೂ ಮೀಸಲಾತಿಯನ್ವಯ ವಯೋಮಿತಿ ಸಡಿಲಿಕೆ ಇರಲಿದೆ.
*ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ನಡೆಸಲಾಗುತ್ತದೆ. ಗುಮಾಸ್ತ ಹಾಗೂ ತಾಂತ್ರಿಕ ಹುದ್ದೆಗಳಿಗೆ ಕೌಶಲ ಪರೀಕ್ಷೆಯೂ ಇರಲಿದೆ. ಸೈಂಟಿಸ್ಟ್ ಬಿ ಹುದ್ದೆಗಳಿಗೆ 200 ರೂ. ಹಾಗೂ ಉಳಿದ ಹುದ್ದೆಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯ್ತಿ ಇದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 24.10.2021
ಅಧಿಸೂಚನೆಗೆ: https://bit.ly/305KxHk
ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ: https://bit.ly/3BzU8Eq
*ಸಂಸ್ಥೆ ಪರಿಚಯ
ಅಣುಶಕ್ತಿ ಯೋಜನೆಗಳಿಗೆ ಅಗತ್ಯವಾದ ಯುರೇನಿಯಂ ನಿಕ್ಷೇಪಗಳನ್ನು ಪತ್ತೆ ಹಚ್ಚುವುದು ಈ ಸಂಸ್ಥೆಯ ಪ್ರ ಮುಖ ಉದ್ದೇಶವಾಗಿದೆ. ಬೆಂಗಳೂರು, ನವದೆಹಲಿ, ಜೆಮ್ೆಡ್ಪುರ್, ಶಿಲ್ಲಾಂಗ್, ಜೈಪುರ, ನಾಗ್ಪುರ್ ಹಾಗೂ ಹೈದರಾಬಾದ್ನಲ್ಲಿ ಕೇಂದ್ರಗಳನ್ನು ಹೊಂದಿದೆ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಸಂಶೋಧನೆ ನಡೆಸುತ್ತಿದೆ. ಕಡಲ ತೀರ, ಕರಾವಳಿ ಮರಳು ಪ್ರದೇಶ, ಅಪರೂಪದ ಖನಿಜಗಳ ಅನ್ವೇಷಣೆಗೂ ತಂಡಗಳನ್ನು ಹೊಂದಿದೆ.