

ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಸಾರ್ವಜನಿಕ ಉದ್ಯಮವಾಗಿದ್ದು, ರಾಷ್ಟ್ರೀಯ ಪ್ರವರ್ತಕ ತೈಲ ಮತ್ತು ಅನಿಲ ಉತ್ಪಾದನಾ ಸಂಸ್ಥೆಯಾಗಿದೆ. ಪ್ರಸ್ತುತ ಅಸ್ಸಾಂನ ಪ್ರಾದೇಶಿಕ ಕಚೇರಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 21
ಒಐಎಲ್‍ನಲ್ಲಿ ಖಾಲಿ ಇರುವ 21 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 16 ಸ್ಥಾನ, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 4 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಈ ಹುದ್ದೆಗಳು 6 ತಿಂಗಳ ಒಪ್ಪಂದದ್ದಾಗಿದ್ದು, ಅಭ್ಯರ್ಥಿಗಳು ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅಗತ್ಯತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು.
ಹುದ್ದೆ, ಸಂಖ್ಯೆ ವಿವರ
* ರೋಡ್ ರೋಲರ್ ಆಪರೇಟರ್ - 10
* ಐಟಿ ಅಸಿಸ್ಟೆಂಟ್ - 5
* ಡ್ರಾಟ್ಸ್‍ಮನ್ - 6
ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಇನ್‌ಫಾರ್ಮೇಷನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಸಿಸ್ಟಮ್ ಮೈಂಟೇನೆನ್ಸ್ ಟ್ರೇಡ್‍ನಲ್ಲಿ ಟ್ರೇಡ್ ಪ್ರಮಾಣಪತ್ರ, ರೋಡ್ ರೋಲರ್ ಹುದ್ದೆಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ವಯೋಮಿತಿ: ರೋಡ್‍ರೋಲರ್ ಆಪರೇಟರ್ ಹುದ್ದೆಯ ಸಾಮಾನ್ಯವರ್ಗದ ಅಭ್ಯರ್ಥಿಗೆ ಕನಿಷ್ಠ 18 ವರ್ಷ, ಗರಿಷ್ಠ 45 ವರ್ಷ, ಎಸ್ಟಿಗೆ ಗರಿಷ್ಠ 50 ವರ್ಷ, ಇತರ ಹಿಂದುಳಿದ ವರ್ಗಕ್ಕೆ ಗರಿಷ್ಠ 48 ವರ್ಷ, ಐಟಿ ಅಸಿಸ್ಟೆಂಟ್ ಹುದ್ದೆಯ ಸಾಮಾನ್ಯವರ್ಗದ ಅಭ್ಯರ್ಥಿಗೆ ಕನಿಷ್ಠ 18 ವರ್ಷ, ಗರಿಷ್ಠ 30ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ ಗರಿಷ್ಠ 33 ವರ್ಷ.
ವೇತನ: ಎಲ್ಲ ಹುದ್ದೆಗಳಿಗೂ ಮಾಸಿಕ 13,000 ರೂ. ಮೂಲ ವೇತನ ಇದೆ. ಜತೆಗೆ, ಅಭ್ಯರ್ಥಿಗಳಿಗೆ ಪ್ರತಿ ದಿನದ ಕೆಲಸಕ್ಕೆ ಗರಿಷ್ಠ 410ರೂ.ಗಳನ್ನು ವೇರಿಯೇಬಲ್ ಪೇ ಲೆಕ್ಕದಲ್ಲಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ನೇರ ಕೌಶಲ ಪರೀಕ್ಷೆಗೆ ಹಾಜರಾಗಬೇಕು. ನಂತರ ವೈಯಕ್ತಿಕ ಮೌಲಮಾಪನ ಮಾಡಿ ಆಯ್ಕೆ ಮಾಡಲಾಗುವುದು. ಪ್ರತಿ ಹುದ್ದೆಗೂ ನೋಂದಣಿ ಮಾಡಿಕೊಂಡು ಕೌಶಲ ಪರೀಕ್ಷೆಗೆ ಹಾಜರಾಗತಕ್ಕದ್ದು.
ನೋಂದಣಿ ಅವಧಿ
ರೋಡ್ ರೋಲರ್ ಹುದ್ದೆಗೆ 20.1.2021 ಬೆಳಗ್ಗೆ 7 - 11 ಗಂಟೆ ವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅಂದೇ ಕೌಶಲ ಪರೀಕ್ಷೆ ನಡೆಸಲಾಗುವುದು. ಐಟಿ ಅಸಿಸ್ಟೆಂಟ್‍ಗೆ 1.2.2021ರಂದು ಬೆಳಗ್ಗೆ 7-11ಗಂಟೆವರೆಗೆ ನೋಂದಣಿ, ನಂತರ ಕೌಶಲ ಪರೀಕ್ಷೆ, ಡ್ರಾಟ್ಸ್‍ಮನ್‍ಗೆ 9.2.2021ರಂದು ಬೆಳಗ್ಗೆ 7-11 ಗಂಟೆವರೆಗೆ ನೋಂದಣಿ, ನಂತರ ಕೌಶಲ ಪರೀಕ್ಷೆ ನಡೆಸಲಾಗುವುದು.
ಅಧಿಸೂಚನೆಗೆ: https://bit.ly/3oP01XX
ಮಾಹಿತಿಗೆ: http://www.oil-india.com