

ಉತ್ತರಪ್ರದೇಶದ ಮೀರತ್ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಯುನಿವಸಿರ್ಟಿ ಆಫ್ ಅಗ್ರಿಕಲ್ಚರ್ ಆ್ಯಂಡ್ ಟೆಕ್ನಾಲಜಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ (ಕೆವಿಕೆ) ಲ್ಯಾಬ್ ಟೆಕ್ನಿಷಿಯನ್ಸ್ ಸೇರಿ ವಿವಿಧ ಬೋಧಕೇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 62 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 27 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 5, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 18, ಎಸ್ಸಿ-ಎಸ್ಟಿಗೆ 12 ಸ್ಥಾನ ಮೀಸಲಿರಿಸಲಾಗಿದೆ.
ಹುದ್ದೆ ವಿವರ
*ಫಾರ್ಮ್ ಮ್ಯಾನೇಜರ್/ಟಿ 4 - 7
* ಪ್ರೋಗ್ರಾಮ್ ಅಸಿಸ್ಟೆಂಟ್ (ಕಂಪ್ಯೂಟರ್) - 7
* ಪ್ರೋಗ್ರಾಮ್ ಅಸಿಸ್ಟೆಂಟ್ (ಲ್ಯಾಬ್ ಟೆಕ್ನಿಷಿಯನ್) - 10
* ಅಸಿಸ್ಟೆಂಟ್ - 9
* ಸ್ಟೆನೋಗ್ರಾರ್ ಗ್ರೇಡ್ ಐಐಐ - 6
* ಡೆವರ್ - 23
ವೇತನ: ಸ್ಟೆನೋಗ್ರಾರ್ಗೆ ಮಾಸಿಕ 25,500- 81,100 ರೂ., ಚಾಲಕರಿಗೆ ಮಾಸಿಕ 18,000- 56,900 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 35,400- 1,12,400 ರೂ. ವೇತನ ಇದೆ.
ಶೈಕ್ಷಣಿಕ ಅರ್ಹತೆ: ಡೆವರ್ ಹುದ್ದೆಗೆ ಎಸ್ಸೆಸ್ಸೆಲ್ಸಿ ಜತೆ ಚಾಲನಾ ಪರವಾನಗಿ ಹೊಂದಿರಬೇಕು, ಸ್ಟೆನೋಗ್ರಾಫರ್ಗೆ ದ್ವೀತಿಯ ಪಿಯುಸಿ ಅಧ್ಯಯನ ಮಾಡಿದ್ದು, ನಿಮಿಷಕ್ಕೆ 80 ಪದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಟೈಪ್ ಮಾಡಲು ತಿಳಿದಿರಬೇಕು, ಉಳಿದ ಹುದ್ದೆಗಳಿಗೆ ಕೃಷಿ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಪದವಿ ಪಡೆದಿರಬೇಕು.
ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ., ಇತರ ಅಭ್ಯರ್ಥಿಗಳಿಗೆ 1,000 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಉತ್ತರಪ್ರದೇಶ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಲಿಖಿತ ಹಾಗೂ ಕೌಶಲ ಪರೀಕ್ಷೆಯ ಅಂಕ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು. ಹುದ್ದೆಗಳಿಗೆ ಅನುಗುಣವಾಗಿ ನಡೆಸುವ ಪರೀಕ್ಷೆಯ ದಿನಾಂಕ, ಸಮಯ, ಇತರ ಮಾಹಿತಿಯನ್ನು ವಿವಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ದಾಖಲೆ ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಗಳು ಎಲ್ಲ ದಾಖಲೆಗಳ ಮೂಲಪ್ರತಿ ತರಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ; 30.9.2021
ಅಧಿಸೂಚನೆಗೆ: https://bit.ly/3uaw5sQ
ಮಾಹಿತಿಗೆ: http://www.svbpmeerut.ac.in/