

ಹಾವೇರಿ ಜಿಲ್ಲೆ ಗೋಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಎಂಎ, ಎಂಪಿಎ, ಎಂವಿಎ, ಎಂಎಸ್ಡಬ್ಲು ಹಾಗೂ ಎಂಬಿಎ ತರಗತಿಯ ಬೋಧನೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರ, ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿಭಾಗವಾರು ಹುದ್ದೆ ವಿವರ
- ಸ್ನಾತಕೋತ್ತರ ಶಿಕ್ಷಣ (ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು) - 28
* ಜಾನಪದ ವಿಜ್ಞಾನ - 2
* ಜನಪದ ಸಾಹಿತ್ಯ - 2
* ಜನಪದ ಕಲೆ - 2
* ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ - 2
* ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ - 2
* ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ -2
* ಕನ್ನಡ ಮತ್ತು ಜಾನಪದ - 2
* ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ - 2
* ದೃಶ್ಯ ಕಲೆ (ಎಂವಿಎ) - 2
* ಅರ್ಥಶಾಸ್ತ್ರ - 2
* ಸಮಾಜಶಾಸ್ತ್ರ - 2
* ಇಂಗ್ಲಿಷ್ - 2
* ಸಮಾಜ ಕಾರ್ಯ (ಎಂಎಸ್ಡಬ್ಲು) - 2
* ಪ್ರದರ್ಶನ ಕಲೆ (ಎಂಪಿಎ) - 2
- ತಾತ್ಕಾಲಿಕ ಯೋಜನಾ ಸಹಾಯಕರು - 6
* ಮಲೆಮಹದೇಶ್ವರ ಬೆಟ್ಟ, ಜೋಯಿಡಾ, ಮಂಡ್ಯ ಹಾಗೂ ಬೀದರ್ನ ಪ್ರಾದೇಶಿಕ ಜಾನಪದ ಅಧ್ಯಯನ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ - 4
* ವಿಸ್ತರಣೆ ಹಾಗೂ ಸಲಹಾ ಕೇಂದ್ರ - 1
* ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ - 1
- ತಾತ್ಕಾಲಿಕ ಸಹಾಯಕ ಗ್ರಂಥಪಾಲಕ - 1
* ವಿಶ್ವವಿದ್ಯಾಲಯದ ಗ್ರಂಥಾಲಯ
ವಿದ್ಯಾರ್ಹತೆ: ಜಾನಪದ ವಿಜ್ಞಾನ/ ಜಾನಪದ/ ಮಾನವಶಾಸ್ತ್ರ, ಜನಪದ ಸಾಹಿತ್ಯ, ಜನಪದ ಕಲೆ, ಕನ್ನಡ ಮತ್ತು ಜಾನಪದ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಾಮೀಣ ಮತ್ತು ಬುಡಕಟ್ಟು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ/ ಮಹಿಳಾ ಅಧ್ಯಯನ/ ಸಮಾಜಶಾಸ್ತ್ರ/ ಸಮಾಜ ಕಾರ್ಯ, ಅರ್ಥಶಾಸ್ತ್ರ, ಪ್ರವಾಸೋದ್ಯಮ, ಕನ್ನಡ, ಗ್ರಂಥಾಲಯ ವಿಜ್ಞಾನ, ಮಾಹಿತಿ ವಿಜ್ಞಾನ/ ದಾಖಲಾತಿ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಎಂಬಿಎ, ಎಂಎ್ಎ, ಎಂಬಿಎ ಪದವಿ ಪಡೆದಿರಬೇಕು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು 500 ರೂ., ಹಾಗೂ ಉಳಿದ ಅಭ್ಯರ್ಥಿಗಳು 1,000 ರೂ. ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಹಣಕಾಸು ಅಧಿಕಾರಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೋಟಗೋಡಿ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.
ಸೂಚನೆ: ಈ ಹುದ್ದೆಗಳಿಗೆ ಯುಜಿಸಿ ನಿಯಮಾವಳಿಯಂತೆ ನೇಮಕಾತಿ ಮಾಡಲಾಗುವುದು. ಸರ್ಕಾರವು ನಿಗದಿಪಡಿಸಿದ ಕನಿಷ್ಠ ವಿದ್ಯಾಥಿರ್ಗಳ ಪ್ರವೇಶಾತಿ ಸಂಖ್ಯೆ ಇದ್ದಲ್ಲಿ ಮಾತ್ರ ಅಧ್ಯಾಪಕರನ್ನು ತಾತ್ಕಾಲಿಕವಾಗಿ ನಿಯೋಜಿಸಿಕೊಳ್ಳಲಾಗುವುದು. ಸಹಾಯಕ ಪ್ರಾದ್ಯಾಪಕ ಹಾಗೂ ಗ್ರಂಥಪಾಲಕ ಹುದ್ದೆಗೆ ನೆಟ್/ ಸ್ಲೆಟ್/ ಎಂಫಿಲ್/ ಪಿಎಚ್.ಡಿ ಮತ್ತು ಬೋಧನಾ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ವಿಶ್ವವಿದ್ಯಾಲಯ ನಿಯೋಜಿಸುವ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಹುದ್ದೆಗಳನ್ನು ಸರ್ಕಾರದ ಮೀಸಲಾತಿ ನಿಯಮಾನುಸಾರ ಭರ್ತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.9.2021
ಅಧಿಸೂಚನೆಗೆ: https://bit.ly/3kyDsqz
ಮಾಹಿತಿಗೆ: http://www.janapadauniversity.ac.in