ಖನಿಜ ಅಭಿವೃದ್ಧಿ ಸಂಸ್ಥೆಯಲ್ಲಿ ಅಪ್ರೆಂಟೀಸ್‌ಗೆ ಅರ್ಜಿ: 59 ಹುದ್ದೆಗಳು ಖಾಲಿ

udyoga-khanija
Published on

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್​ಎಂಡಿಸಿ) ಚತ್ತೀಸಗಢ್​ದ ಬಛೇಲಿ ಟಕದಲ್ಲಿ ಅಪ್ರೆಂಟೀಸ್​ ಹಾಗೂ ಇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 59

ಎನ್​ಎಂಡಿಸಿ ಲಿಮಿಟೆಡ್​ನಲ್ಲಿನ ಅಪ್ರೆಂಟೀಸ್​ ತರಬೇತಿಗೆ ಹಾಜರಾಗಲು ಆಸಕ್ತರಾಗಿರುವ ಅಭ್ಯರ್ಥಿಗಳು ತಮ್ಮ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರ, ಭಾವಚಿತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಅರ್ಜಿಸಲ್ಲಿಕೆ ಅಂತಿಮ ದಿನಾಂಕದ ಒಳಗಾಗಿ ಇಮೇಲ್​ ವಿಳಾಸ www.mhrdnats.gov.inಗೆ ಮೇಲ್​ ಮಾಡಲು ಕೋರಲಾಗಿದೆ. ಅಪ್ರೆಂಟೀಸ್​ ತರಬೇತಿಯು ಒಂದು ವರ್ಷ ಇರಲಿದೆ.

ಹುದ್ದೆ ವಿವರ

* ಗ್ರಾಜುಯೇಟ್​ ಅಪ್ರೆಂಟೀಸ್​ - 16

* ಟೆಕ್ನಿಷಿಯನ್​ ಅಪ್ರೆಂಟೀಸ್​ - 13

* ಪ್ರೋಗ್ರಾಮಿಂಗ್​ ಆ್ಯಂಡ್​ ಸಿಸ್ಟಂ ಅಡ್ಮಿನಿಸ್ಟ್ರೆಷನ್​ ಅಸಿಸ್ಟೆಂಟ್​ (ಪಿಎಎಸ್​ಎಎಎ) - 30

ವಿದ್ಯಾರ್ಹತೆ: ಸಿವಿಲ್​, ಮೆಕ್ಯಾನಿಕಲ್​, ಎಲೆಕ್ಟ್ರಿಕಲ್​, ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​, ಮೈನಿಂಗ್​ ಇಂಜಿನಿಯರಿಂಗ್​ನಲ್ಲಿ 4 ವರ್ಷದ ಪದವಿ, ಮೆಕ್ಯಾನಿಕಲ್​, ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿ ಕಮ್ಯುನಿಕೇಷನ್​, ಮೈನಿಂಗ್​, ಮಾರ್ಡನ್‌​ ಆಫೀಸ್​ ಪ್ರಾಕ್ಟೀಸ್​ ಮ್ಯಾನೇಜ್​ಮೆಂಟ್​ ಮತ್ತು ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಅಪ್ಲಿಕೇಷನ್​ನಲ್ಲಿ 3 ವರ್ಷದ ಡಿಪ್ಲೊಮಾ, ಕಂಪ್ಯೂಟರ್​ ಆಪರೇಟರ್​ ಆ್ಯಂಡ್​ ಪ್ರೋಗ್ರಾಮಿಂಗ್​ ಅಸಿಸ್ಟೆಂಟ್​ (ಸಿಒಪಿಎ)ನಿಂದ ವೃತ್ತಿಪರ ತರಬೇತಿಗಾಗಿ ಪಡೆದ ರಾಷ್ಟ್ರೀಯ ಕೌನ್ಸಿಲ್​ ನೀಡಿದ ರಾಷ್ಟ್ರೀಯ ಟ್ರೇಡ್​ ಪ್ರಮಾಣಪತ್ರ ಹೊಂದಿರುವವರು ಅರ್ಜಿಸಲ್ಲಿಸಬಹುದು. (ಸೂಚನೆ: ಪದವಿ/ ಡಿಪ್ಲೊಮಾ/ಐಟಿಐ ಮುಗಿಸಿ 3 ವರ್ಷ ಆಗಿರುವ ಅಭ್ಯರ್ಥಿಗಳು, ಈಗಾಗಲೇ ಅಪ್ರೆಂಟಿಷಿಪ್​ ತರಬೇತಿ ಪಡೆದಿರುವ ಅಭ್ಯರ್ಥಿಗಳು, 1 ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಹರಲ್ಲ.)

ಸ್ಟೆ$ಪೆಂಡ್​: ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಮಾಸಿಕ 20,000 ರೂ., ಟೆಕ್ನಿಷಿಯನ್​ ಅಪ್ರೆಂಟೀಸ್​ಗೆ ಮಾಸಿಕ 16,000 ರೂ., ಟ್ರೇಡ್​ ಅಪ್ರೆಂಟೀಸ್​ಗೆ ಮಾಸಿಕ 10,000 ರೂ. ಗೌರವಧನ ನೀಡಲಾಗುವುದು.

ಸೂಚನೆ: ಬಿಐಒಎಂ ಬಿಛೇಲಿ ಟಕದಲ್ಲಿ ಅಪ್ರೆಂಟೀಸ್​ ತರಬೇತಿ ಪಡೆಯಬಯಸುವ ಟ್ರೇಡ್​ ಅಪ್ರೆಂಟೀಸ್​ ಅಭ್ಯರ್ಥಿಗಳು www.mhrdnats.gov.in

ನಲ್ಲಿ ನೋಂದಾಯಿತರಾಗಿರಬೇಕು. ಪದವಿ ಹಾಗೂ ಐಟಿ ಅಪ್ರೆಂಟಿಷಿಪ್​ ತರಬೇತಿ ಪಡೆಯಬಯಸುವ ಅಭ್ಯರ್ಥಿಗಳು ಡಿಡಿಡಿ.ಞಜ್ಟಛ್ಞಚಠಿಠ.ಜಟಡ.ಜ್ಞಿ ನಲ್ಲಿ ಕಡ್ಡಾಯವಾಗಿ ನೋಂದಾಯಿತರಾಗಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆದರಿಸಿ ಮೆರಿಟ್​ ಲಿಸ್ಟ್​ ಸಿದ್ಧಡಿಸಲಾಗುವುದು. ಶಾರ್ಟ್​ಲಿಸ್ಟ್​ನಲ್ಲಿರುವ ಅಭ್ಯರ್ಥಿಗಳಿಗೆ ಮೇಲ್​/ ಅಂಚೆ/ ಎಸ್​ಎಂಎಸ್​ ಮೂಲಕ ಮುಂದಿನ ಆಯ್ಕೆ ವಿಧಾನ ತಿಳಿಸಲಾಗುವುದು.

ಅರ್ಜಿಸಲ್ಲಿಸಲು ಕೊನೇ ದಿನ: 15.6.2021

ಅಧಿಸೂಚನೆಗೆ: https://bit.ly/34m5Svc

ಮಾಹಿತಿಗೆ: www.nmdc.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net