

ಇಸ್ರೋ ಅಧೀನದ ಸಂಸ್ಥೆಯಾಗಿರುವ ತಿರುವನಂತಪುರದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಂ ಸೆಂಟರ್ (ಎಲ್ಪಿಎಸ್ಸಿ) ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಪದವೀಧರರಿಂದ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅಪ್ರೆಂಟೀಸ್ ತರಬೇತಿಯು ಕೇರಳದ ಎಲ್ಪಿಎಸ್ಸಿಯಲ್ಲಿ 1 ವರ್ಷ ಇರಲಿದೆ. ಈ ಮೊದಲು ಅಪ್ರೆಂಟೀಸ್ ತರಬೇತಿ ಪಡೆದವರಿಗೆ ಮತ್ತೆ ಅವಕಾಶ ಇರುವುದಿಲ್ಲ. ಅಪ್ರೆಂಟೀಸ್ ನಿಯಮದ ಪ್ರಕಾರ ವಯೋಮಿತಿ ಇರಲಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ಮೀಸಲಾತಿ ನಿಯಮಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.
ಸ್ಥಾನಗಳ ವಿವರ
- ಗ್ರಾಜುಯೇಟ್ ಅಪ್ರೆಂಟೀಸ್ - 73
* ಮೆಕಾನಿಕಲ್ ಇಂಜಿನಿಯರಿಂಗ್ - 40
* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ - 7
* ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ - 8
* ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ - 2
* ಕೆಮಿಕಲ್ - 1
* ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ - 5
* ಸಿವಿಲ್ - 4
* ಲೈಬ್ರರಿ ಸೈನ್ಸ್ - 6
- ಡಿಪ್ಲೊಮಾ ಅಪ್ರೆಂಟೀಸ್ - 87
* ಮೆಕ್ಯಾನಿಕಲ್ - 53
* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ - 7
* ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ - 13
* ಸಿವಿಲ್ - 6
* ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ - 5
* ಆಟೋ ಮೊಬೈಲ್ - 2
* ಕೆಮಿಕಲ್ - 1
ಶೈಕ್ಷಣಿಕ ಅರ್ಹತೆ: ಗ್ರಾಜುಯೇಟ್ ಅಪ್ರೆಂಟೀಸ್ಗೆ ಇಂಜಿನಿಯರಿಂಗ್ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿದ್ದು, ಶೇ.65ಕ್ಕಿಂತ ಕಡಿಮೆ ಇರಬಾರದು. ಡಿಪ್ಲೊಮಾ ಅಪ್ರೆಂಟೀಸ್ಗೆ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ಸ್ಟೆ$ಪೆಂಡ್ : ಗ್ರಾಜುಯೇಟ್ ಅಪ್ರೆಂಟೀಸ್ಗೆ ಮಾಸಿಕ 9,000 ರೂ., ಹಾಗೂ ಡಿಪ್ಲೊಮಾ ಅಪ್ರೆಂಟೀಸ್ಗೆ ಮಾಸಿಕ 8,000 ರೂ. ಸ್ಟೆ$ಪೆಂಡ್ ನೀಡಲಾಗುವುದು.
ಸೂಚನೆ: ನ್ಯಾಷನಲ್ ಅಪ್ರೆಂಟೀಸ್ ಟೆನಿಂಗ್ ವೆಬ್ಸೈಟ್ನಲ್ಲಿ ದಿನಾಂಕ 20.7.2021ರ ಒಳಗಾಗಿ ಅಭ್ಯರ್ಥಿಗಳು ನೋಂದಾಯಿತರಾಗಬೇಕು. ಜು.26 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಆ.2ರಂದು ಶಾರ್ಟ್ಲಿಸ್ಟ್ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 26.7.2021
ಅಧಿಸೂಚನೆಗೆ: https://bit.ly/3jzRAzQ
ನೋಂದಣಿಗೆ:http://portal.mhrdnats.gov.in/
ಮಾಹಿತಿಗೆ: https://www.lpsc.gov.in/