

ರೈಲ್ವೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕಲ್ ಸರ್ವೀಸಸ್ (ರೈಟ್ಸ್- ಆರ್ಐಟಿಇಎಸ್) ಲಿಮಿಟೆಡ್ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಸಾರಿಗೆ, ಮೂಲ ಸೌಕರ್ಯ ಮತ್ತು ಇತರ ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಗುರುಗಾಂವ್ ಟಕದಿಂದ ಅಪ್ರೆಂಟೀಸ್ ಟ್ರೇನಿ ಹುದ್ದೆಗಳಿಗೆ ಅರ್ಹ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 2 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯಥಿರ್ಗಳು ಈ ಮೊದಲು ಅಥವಾ ಪ್ರಸ್ತುತ ಅಪ್ರೆಂಟೀಸ್ ತರಬೇತಿ ಪಡೆದಿರಬಾರದು ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಇರುವವರಿಗೂ ಅವಕಾಶ ಇರುವುದಿಲ್ಲ. ಅಪ್ರೆಂಟೀಸ್ ತರಬೇತಿಯು 1 ವರ್ಷ ಇರುತ್ತದೆ. ಅಜಿರ್ ಸಲ್ಲಿಸುವ ಅಭ್ಯಥಿರ್ಗಳು ಎನ್ಎಟಿಎಸ್/ಎನ್ಎಪಿಎಸ್ ವೆಬ್ಸೈಟ್ನಲ್ಲಿ ಮೊದಲು ಹೆಸರು ನೋಂದಾಯಿಸಿದ ನಂತರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಂಪ್ರೆಂಟೀಸ್ಗಳ ವಿವರ
* ಗ್ರಾಜುಯೇಟ್ ಅಪ್ರೆಂಟೀಸ್ (ಇಂಜಿನಿಯರಿಂಗ್ ಪದವಿ- 76, ಇಂಜಿನಿಯರಿಂಗ್ ಪದವೀಧರರಲ್ಲದವರು - 20) - 96
* ಡಿಪ್ಲೊಮಾ ಅಪ್ರೆಂಟೀಸ್ - 15
* ಟ್ರೇಡ್ ಅಪ್ರೆಂಟೀಸ್ - 35
ಎಲ್ಲೆಲ್ಲಿ ನೇಮಕಾತಿ?
ಬೆಂಗಳೂರು, ಸಿಕಂದರಾಬಾದ್, ರಾಂಚಿ, ಗುರುಗಾಂವ್, ದೆಹಲಿ, ಕೋಲ್ಕತ್ತಾ, ಮುಂಬೈ, ಅಸ್ಸಾಂ, ರಾಜಸ್ಥಾನ್
ಶೈಕ್ಷಣಿಕ ಅರ್ಹತೆ: ಗ್ರಾಜುಯೇಟ್ ಅಪ್ರೆಂಟೀಸ್ಗೆ ಬಿಇ, ಬಿ.ಟೆಕ್ ಪದವಿ, ನಾನ್ ಇಂಜಿನಿಯರಿಂಗ್ ಪದವೀಧರ ಅಪ್ರೆಂಟೀಸ್ಗೆ ಬಿಎ/ ಬಿಬಿಎ/ ಬಿಕಾಂ ಪದವಿ, ಡಿಪ್ಲೊಮಾ ಅಪ್ರೆಂಟೀಸ್ಗೆ ಇಂಜಿನಿಯರಿಂಗ್ ಡಿಪ್ಲೊಮಾ, ಟ್ರೇಡ್ ಅಪ್ರೆಂಟೀಸ್ಗೆ ಐಟಿಐ ಉತ್ತೀರ್ಣರಾಗಿದ್ದು, ಸಾಮಾನ್ಯವರ್ಗ ಹಾಗೂ ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳು ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಉಳಿದ ಅಭ್ಯಥಿರ್ಗಳು ಕನಿಷ್ಠ ಶೇ.50 ಅಂಕ ಪಡೆದಿರಬೇಕು.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯಥಿರ್ಗಳಿಗೆ 67 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 12, ಎಸ್ಸಿಗೆ 21, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 37 ಸ್ಥಾನಗಳನ್ನು ಮೀಸಲಿರಿಸಿದ್ದು, ಇದರಲ್ಲಿ 6 ಸ್ಥಾನಗಳನ್ನು ಅಂಗವಿಕಲ ಅಭ್ಯಥಿರ್ಗಳಿಗೆ ಕಾಯ್ದಿರಿಸಲಾಗಿದೆ.
ಸ್ಟೆ$ಪೆಂಡ್: ಗ್ರಾಜುಯೇಟ್ ಅಪ್ರಂಟೀಸ್ಗೆ ಮಾಸಿಕ 14,000 ರೂ., ಡಿಪ್ಲೊಮಾ ಅಪ್ರೆಂಟೀಸ್ಗೆ ಮಾಸಿಕ 12,000 ರೂ., ಟ್ರೇಡ್ ಅಪ್ರೆಂಟೀಸ್ಗೆ ಮಾಸಿಕ 10,000 ರೂ. ಗೌರವಧನ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳ ಪಟ್ಟಿಯನ್ನು ರೈಟ್ಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 12.5.2021
ಅಧಿಸೂಚನೆಗೆ: https://bit.ly/3xpX04T
ಮಾಹಿತಿಗೆ: ttps://rites.com