

ಟೆಕ್ಸಾಸ್: ಚಾಲಕ ರಹಿತ ಕಾರಿನಲ್ಲಿ ಕೂತು ಪ್ರಯಾಣಿಸುತ್ತಿದ್ದ ಇಬ್ಬರು ಸಜೀವವಾಗಿ ದಹನವಾಗಿರುವ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ.
2019ರ ಟೆಸ್ಲಾ ಮಾಡೆಲ್ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಕಾರು ಮರಕ್ಕೆ ಡಿಕ್ಕಿಹೊಡೆದು ಬೆಂಕಿಯಾದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರೂ ಹಿಂದಿನ ಸೀಟಿನಲ್ಲಿ ದಹಿಸಿ ಹೋಗಿರುವುದನ್ನು ಕಂಡಿರುವ ಪೊಲೀಸರು ಇದೊಂದು ಚಾಲಕ ರಹಿತವಾಗಿರುವ ಕಾರು ಎಂದಿದ್ದಾರೆ.
ಟೆಸ್ಲಾ ಕಂಪೆನಿ 2019ರಲ್ಲಿ ಚಾಲಕ ರಹಿತ ಕಾರನ್ನು ಕಂಡುಹಿಡಿದಿದೆ. ಅಂಕುಡೊಂಕಾದ ರಸ್ತೆಯಲ್ಲಿ ಕಾರಿನ ಚಾಲನೆ ಸರಿಯಾಗಿ ಆಗದ ಕಾರಣಕ್ಕೆ ತಂತ್ರಜ್ಞಾನವನ್ನು ಇನ್ನಷ್ಟು ಬಲಪಡಿಸಿ ಕಾರಿನ ವೇಗವನ್ನು ಹೆಚ್ಚಿಸಿತ್ತು. ಇದರ ಪರಿಣಾಮವಾಗಿ ಕಾರು ವೇಗವನ್ನು ಪಡೆದುಕೊಂಡು ಈ ಅನಾಹುತ ಆಗಿರುವುದಾಗಿ ಹೇಳಲಾಗಿದೆ.
ಚಾಲಕ ಹರಿತವಾಗಿರುವ ಕಾರು ಇದೇ ರೀತಿ ಅಪಘಾತ ಮಾಡಿರುವ 27 ಘಟನೆಗಳು ನಡೆದಿವೆ ಎನ್ನಲಾಗಿದೆ.