ಕೋವಿಡ್‌ ಹೆಸರಿನಲ್ಲಿ ನಟ ಸೋನು ಸೂದ್‌ ಮೋಸದಾಟ- ಟ್ವೀಟ್‌ಗೆ ಲೈಕ್‌ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಂಗನಾ!

kangana
Published on

ನವದೆಹಲಿ : ಬಾಲಿವುಡ್‌ ನಟ ಸೋನು ಸೂದ್‌ ಹಾಗೂ ನಟಿ ಕಂಗನಾ ರಣಾವತ್‌ ಇಬ್ಬರೂ ಕಳೆದ ವರ್ಷದಿಂದ ಭಾರಿ ಸುದ್ದಿಯಲ್ಲಿರುವ ಚಿತ್ರತಾರೆಯರು. ನಟ ಸೋನು ಸೂದ್‌ ಕಳೆದ ಬಾರಿ ಕರೊನಾ ಆರಂಭವಾದ ದಿನದಿಂದಲೂ ಬಡವರಿಗೆ ಸಹಾಯಹಸ್ತ ಚಾಚುತ್ತಾ ಭಾರಿ ಪ್ರಚಾರ ಗಳಿಸಿದರೆ, ನಟಿ ಕಂಗನಾ, ದೇಶದ ಗಮನ ಸೆಳೆದ ಹಲವಾರು ವಿವಾದಿತ ಪ್ರಕರಣಗಳಲ್ಲಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಳಿಸಿದ್ದಾರೆ.

ಇದೀಗ ಈ ಇಬ್ಬರೂ ತಾರೆಯರ ಸುದ್ದಿ ಮತ್ತೆ ಪ್ರಚಾರಕ್ಕೆ ಬಂದಿದೆ. ಇದಕ್ಕೆ ಕಾಋ, ಕೋವಿಡ್-19 ಪರಿಸ್ಥಿತಿಯನ್ನು ಬಳಸಿಕೊಂಡು ಸೋನು ಸೂದ್ ದುಡ್ಡು ಮಾಡುತ್ತಿದ್ದಾರೆ, ಅವರೊಬ್ಬ ಮೋಸಗಾರ ಎಂದು ಕಳೆದ ಕೆಲ ದಿನಗಳಿಂದ ಟ್ವಿಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಸದ್ಯ ಮೈಥುಲ್ (@Being_Humor ) ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಸೋನುಸೂದ್ ವಂಚಕ, ಮೋಸಗಾರ ಎಂದು ಬರೆಯಲಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನೂ ನೀಡಲಾಗಿದೆ. ಈ ಟ್ವೀಟ್‌ಗೆ ಸಂಬಂಧಿಸಿದಂತೆ ಪರ- ವಿರೋಧಗಳ ಚರ್ಚೆ ನಡೆಯುತ್ತಿದೆ.

ಈ ಪೋಸ್ಟ್‌ಗೆ ನಟಿ ಕಂಗನಾ ರಣಾವತ್ ಲೈಕ್ ಮಾಡಿದ್ದಾರೆ. ಈ ಮೂಲಕ ಸೋನು ಸೂದ್‌ ಅವರ ಅಭಿಮಾನಿಗಳ ಕೆಂಗಣ್ಣಿಗೆ ಕಂಗನಾ ಗುರಿಯಾಗಿದ್ದಾರೆ. ಇತ್ತೀಚಿಗೆ ಸೋನು ಸೂದ್ ಅವರ ಆಕ್ಸಿಜನ್ ಸಾಂದ್ರಕದ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಜಾಹೀರಾತಿನಲ್ಲಿ ಆಕ್ಸಿಜನ್ ಸಾಂದ್ರಕದ ಬೆಲೆ 2 ಲಕ್ಷ ಎಂದು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಪೋಸ್ಟರಿಗಾಗಿ ಸೋನು ಸೂದ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದು, ಈ ಟ್ರೋಲ್‌ಗೂ ನಟಿ ಕಂಗನಾ ಲೈಕ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net