More

    ಟಿಎಂಸಿಯ ಕೋಟಿವೀರನ ಎದುರು ಮನೆಕೆಲಸದಾಕೆಯ ರೋಚಕ ಗೆಲುವು-ಬಿಜೆಪಿ ಶಾಸಕಿಗೆ ಶ್ಲಾಘನೆಗಳ ಸುರಿಮಳೆ!

    ಕೋಲ್ಕತಾ: ಒಂದೆಡೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭರ್ಜರಿ ಜಯ ಗಳಿಸಿರುವ ಬೆನ್ನಲ್ಲೇ, ಬಿಜೆಪಿ ಕೂಡ ಹಿಂದೆಂದಿಗಿಂತಲೂ ಹೆಚ್ಚು ಸ್ಥಾನ ಗಳಿಸಿದೆ.

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸ್ಪರ್ಧಿಸಿದ್ದ ನಂದಿಗ್ರಾಮ ಕೊನೆಯ ಕ್ಷಣದಲ್ಲಿ ಅಚ್ಚರಿಯ ಫಲಿತಾಂಶ ನೀಡಿರುವುದು ಎಲ್ಲೆಡೆ ಸುದ್ದಿಯಾಯಿತು. ಆದರೆ ಅದೇ ರೀತಿ ಇನ್ನೊಂದು ಕ್ಷೇತ್ರ ಇದೀಗ ಭಾರಿ ಕುತೂಹಲವನ್ನೂ, ಅಚ್ಚರಿಯನ್ನೂ ಮೂಡಿಸಿದೆ. ಅದೇ ಬಂಕೂರ ಜಿಲ್ಲೆಯ ಸಲ್ಟೋರಾ ವಿಧಾನಸಭೆ ಕ್ಷೇತ್ರ.

    ದಿನವೊಂದಕ್ಕೆ 400 ರೂಪಾಯಿ ದುಡಿಯಲೂ ಆಗದ, ತೀರಾ ಕಡುಬಡತನದಲ್ಲಿರುವ, ಬುಡಕಟ್ಟು ಹಿನ್ನೆಲೆಯ ಮಹಿಳೆ, ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಚಂದನಾ ಬೌರಿ 4145 ಮತಗಳ ಅಂತರಗಳಿಂದ ಗೆಲುವು ಸಾಧಿಸಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಿಯಾಗಿದ್ದಾರೆ. ಕೋಟ್ಯಧಿಪತಿ ಟಿಎಂಸಿಯ ಸಂತೋಷ್‌ ಕುಮಾರ್‌ ಮೊಂಡಲ್‌ ಅವರನ್ನು ಚಂದನಾ ಸೋಲಿಸಿದ್ದಾರೆ.

    ಚಂದನಾ ಬಳಿ ಇರುವುದು ಮೂರು ಮೇಕೆ, ಮೂರು ಹಸು ಮತ್ತು ಒಂದು ಗುಡಿಸಲು ಸೇರಿ ಒಟ್ಟು ಆಸ್ತಿ ಮೌಲ್ಯ 31,985. ಇವರ ಪತಿ ಕೂಡ ದಿನಗೂಲಿ ಕಾರ್ಮಿಕರಾಗಿದ್ದಾರೆ. ಟಿಕೆಟ್‌ ಘೋಷಣೆಯಾಗುವ ವರೆಗೆ ನಾನು ಅಭ್ಯರ್ಥಿ ಎಂದು ತಿಳಿದಿರಲಿಲ್ಲ. ಅದೂ ಬಿಜೆಪಿ ನನಗೆ ಟಿಕೆಟ್‌ ನೀಡುತ್ತದೆ ಎಂದು ಕನಸಿನಲ್ಲಿಯೂ ನೆನೆಸಿರಲಿಲ್ಲ ಎಂದಿದ್ದಾರೆ ಚಂದನಾ.

    ಚಂದನಾ ಬೌರಿ ಒಟ್ಟು 91,648 ಮತಗಳನ್ನು ಪಡೆದು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

    ಚಂದನಾ ಜಯ ಗಳಿಸುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಅವರಿಗೆ ಶುಭಾಶಯ, ಪ್ರಶಂಸೆಯ ಸುರಿಮಳೆಯೇ ಹರಿದುಬರುತ್ತಿದ್ದು ಹಲವು ರೀತಿಯಲ್ಲಿ ಅವರ ಗೆಲುವನ್ನು ಬಣ್ಣಿಸುತ್ತಿದ್ದಾರೆ. 10ನೇ ತರಗತಿಯವರೆಗೆ ಕಲಿತಿರುವ ಚಂದನಾ ಮೂರು ಮಕ್ಕಳ ತಾಯಿ, ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ.

    ಎರಡು ದಶಕ ಬಾಲಿವುಡ್‌ ಆಳಿದ ‘ಮಿಸ್‌ ಇಂಡಿಯಾ’ ಮೀನಾಕ್ಷಿ ಶೇಷಾದ್ರಿಗೆ ಏನಾಯ್ತು? ಜಾಲತಾಣದಲ್ಲಿ ಹರಿದಾಡ್ತಿರೋ ಸುದ್ದಿ ನಿಜನಾ?

    ಇನ್ನು ಹದಿನೈದೇ ದಿನ ಬಾಕಿ.. ಯಾರನ್ನಾದ್ರೂ ತಬ್ಬಿಕೊಳ್ಳಿ… ಯಾರ ಜತೆ ಬೇಕಾದ್ರೂ ಡೇಟಿಂಗ್‌ ಮಾಡಿ…

    ನನ್ನ ಪ್ರೇಯಸಿಗೆ ಕುಜ ದೋಷ- ಒಬ್ಬನೇ ಮಗನಾಗಿರುವ ನಾನೀಗ ಸಂದಿಗ್ಧಕ್ಕೆ ಸಿಲುಕಿದ್ದೇನೆ, ಪ್ಲೀಸ್‌ ದಾರಿ ತೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts