

ತುಮಕೂರು: ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ದುರಂತವೊಂದು ತುಮಕೂರಿನ ಕುಣಿಗಲ್ ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಕೆಂಪಸಾಗರದ ಮುನಿರಾಜು (26), ವರಲಕ್ಷ್ಮಿ(22) ಈ ದುರಂತ ಅಂತ್ಯ ಕಂಡಿದ್ದಾರೆ.
ವರಲಕ್ಷ್ಮಿಯವರು ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಜಗಳವಾಡಿಕೊಂಡಿದ್ದರಿಂದ ವರಲಕ್ಷ್ಮಿ ಅವರು ತವರಿಗೆ ಹೋಗಿದ್ದರು. ಅಲ್ಲಿಗೆ ಹೋಗಿ ಮುನಿರಾಜು ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ.
ಗಂಡನ ಮನೆಗೆ ವಾಪಸಾದ ವರಲಕ್ಷ್ಮಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಕುಣಿಗಲ್ನಲ್ಲಿ ಇರುವ ತಮ್ಮ ಚಿಲ್ಲರೆ ಅಂಗಡಿಗೆ ಹೋಗಿದ್ದರು. ಅತ್ತೆ-ಮಾವ ಜಮೀನು ಕೆಲಸಕ್ಕಾಗಿ ಹೋಗಿದ್ದ ಸಮಯದಲ್ಲಿ ವರಲಕ್ಷ್ಮಿ ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ ಮುನಿರಾಜು ಪಾಲಕರು ವಾಪಸಾದ ವೇಳೆ ವರಲಕ್ಷ್ಮಿ ಮೃತದೇಹ ನೋಡಿದ್ದಾರೆ. ಕೂಡಲೇ ಅವರು ಮಗನಿಗೆ ವಿಷಯ ತಿಳಿಸಿದ್ದಾರೆ.
ಪತ್ನಿ ನೇಣಿಗೆ ಶರಣಾಗಿದ್ದ ವಿಷಯ ತಿಳಿಯುತ್ತಲೇ ಗಾಬರಿಯಾದ ಮುನಿರಾಜು, ಅಲ್ಲಿಯೇ ವಿಷ ಸೇವಿಸಿ ತೋಟಕ್ಕೆ ಹೋಗಿ ಅಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಣಿಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.