More

    ನಿಮ್ಮ ಮಗಳು ಇಷ್ಟು ಹಾಟ್​ ಆಗಿದ್ದು ಯಾವಾಗ? ‘ರಸಿಕ’ ಟ್ರಂಪ್​ ವಿರುದ್ಧ ಪುಸ್ತಕ ಬರೆದ ವಕೀಲ

    ವಾಷಿಂಗ್ಟನ್​: ಇನ್ನೇನು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ.

    ಈ ನಡುವೆಯೇ, ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಅವರ ವಕೀಲರಾಗಿದ್ದ ಮೈಕೆಲ್ ಕೋಹೆನ್ ಪುಸ್ತಕ ಬರೆದಿದ್ದು, ಅದೀಗ ಭಾರಿ ವಿವಾದ ಸೃಷ್ಟಿಸಿದೆ. ಪುಸ್ತಕದ ಹೆಸರು Disloyal: The True Story of the Former Personal Attorney to President Donald J. Trump (ವಿಶ್ವಾಸದ್ರೋಹಿ: ಡೊನಾಲ್ಡ್​ ಜೆ. ಟ್ರಂಪ್​ ಅವರ ಮಾಜಿ ವೈಯಕ್ತಿಕ ವಕೀಲನಿಂದ ನಿಜವಾದ ಕಥೆ).

    ಟ್ರಂಪ್​ ರಸಿಕ. ಆದರೆ ನನ್ನ 15 ವರ್ಷದ ಮಗಳ ಮೇಲೆಯೇ ಅವರು ಕಣ್ಣುಹಾಕಿದ್ದರು. ನಿಮ್ಮ ಮಗಳು ತುಂಬಾ ಹಾಟ್​ ಇದ್ದಾಳೆ. ಅವಳು ಇಷ್ಟು ಹಾಟ್​ ಆಗಿದ್ದು ಯಾವಾಗ ಎಂದು ಟ್ರಂಪ್​ ಕೇಳಿದ್ದರು. ನನಗೆ ತೀವ್ರ ಮುಜುಗರವಾಗಿತ್ತು. ಅವಳು ನನ್ನ ಮಗಳು ಸರ್​, ಇನ್ನೂ 15 ವರ್ಷ ಅವಳಿಗೆ ಅಂದಿದ್ದೆ. ಆದರೂ ಟ್ರಂಪ್​ ಆಕೆಯ ಮೇಲೆ ಕಣ್ಣುನೆಟ್ಟಿದ್ದರು ಎಂದು ಮೈಕೆಲ್​ ಪುಸ್ತಕದಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ: ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ

    ಟ್ರಂಪ್​ ಹಿಂದೆ ತಮ್ಮ ಮಗಳನ್ನೇ ಬಿಟ್ಟಿರಲಿಲ್ಲ. ಆಕೆಯ ಸೌಂದರ್ಯವನ್ನು ವರ್ಣಿಸಿದ್ದರು. ವಿಶ್ವದ ಶ್ರೇಷ್ಠ ಸುಂದರಿ ಇವಳು. ನಾನು ಅವಳನ್ನು ಸೃಷ್ಟಿ ಮಾಡಿದ್ದೇನೆ. ಅವಳು ನನ್ನ ಮಗಳು ಅಲ್ಲದಿದ್ದರೆ ನಾನೇ ಮದುವೆಯಾಗುತ್ತಿದ್ದೆ. ಈಕೆ 6 ಅಡಿ ಎತ್ತರ ಹೊಂದಿದ್ದು, ಸುಂದರ ದೇಹವನ್ನು ಹೊಂದಿದ್ದಾಳೆ ಎಂದು ಸ್ವಂತ ಮಗಳ ಮೇಲೆ ಕೆಟ್ಟದ್ದಾಗಿ ಮಾತನಾಡಿದ್ದರು ಎಂದು ಕೋಹೆನ್​ ಹೇಳಿದ್ದಾರೆ.

    ಡೊನಾಲ್ಡ್‌ ಟ್ರಂಪ್‌ ಅವರ ಅಣ್ಣನ ಮಗಳು ಮೇರಿ ಕೂಡ ಟ್ರಂಪ್ ಕುರಿತು ಈ ಹಿಂದೆ ಪುಸ್ತಕ ಬರೆದಿದ್ದಾರೆ.​ಡೊನಾಲ್ಡ್ ಟ್ರಂಪ್​ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಬಿಂಬಿಸಿದ್ದಾರೆ.ಈ ಪುಸ್ತಕದ ಹೆಸರು ‘ಟೂ ಮಚ್ ಆ್ಯಂಡ್‌ ನೆವರ್‌ ಇನಫ್‌: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ (ಅತಿಯಾದ ಹಾಗೂ ಎಂದೂ ಮುಗಿಯದ: ಹೇಗೆ ನನ್ನ ಕುಟುಂಬ ವಿಶ್ವದ ಅತ್ಯಂತ ಭಯಾನಕ ಮನುಷ್ಯನನ್ನು ಸೃಷ್ಟಿಸಿದೆ).

    ಕೋಹೆನ್​ ಬರೆದಿರುವ ಈ ಪುಸ್ತಕವನ್ನೀಗ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ವಕೀಲ ಮಾಡಿರುವ ಈ ಆರೋಪವನ್ನು ಶ್ವೇತಭವನ ತಳ್ಳಿಹಾಕಿದೆ.

    ಚಂದ್ರಮನ ಸುತ್ತಲು ಬಿಡಲಿಲ್ಲ ಕರೊನಾ: ಮುಂದಿನ ವರ್ಷ ಚಂದ್ರಯಾನ-3

    ನಟಿ ಕಂಗನಾಗೆ ಕೇಂದ್ರದಿಂದ ‘ವೈ ಪ್ಲಸ್’​ ಭದ್ರತೆ: ಏನಿದರ ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts