ಮೂವರು ಪಾಕ್​ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

encounter
Published on

ಶ್ರೀನಗರ: ಕರೊನಾ ವೈರಸ್​, ರೂಪಾಂತರಿ ಕರೊನಾ ಏನೇ ಇದ್ದರೂ ಗಡಿಭಾಗದಲ್ಲಿ ಉಗ್ರರ ಕಾಟ ಮಾತ್ರ ತಪ್ಪುತ್ತಿಲ್ಲ. ಅನಧಿಕೃತವಾಗಿ ಭಾರತದೊಳಗೆ ನುಸುಳುವ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಭಾರತೀಯ ಯೋಧರು ಅವರಿಗೆ ತಕ್ಕ ಉತ್ತರ ನೀಡುತ್ತಲಿದ್ದಾರೆ.

ಇಂದು ನಡೆದ ಎನ್​ಕೌಂಟರ್​ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಶ್ರೀನಗರದ ಲಾವಾಪೋರಾ ಪ್ರದೇಶದಲ್ಲಿ ಎನ್​ಕೌಂಟರ್​ ನಡೆದಿದೆ. ಉಗ್ರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಉಗ್ರರ ಅಡಗುದಾಣದ ಸಮೀಪ ಹೋದಾಗ, ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹೀಗೆ ರಾತ್ರಿಯಿಂದ ಬೆಳಗಿನಜಾವದವರೆಗೆ ಎನ್​ಕೌಂಟರ್​ ನಡೆದಿದೆ.

ಇದರಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದಾರೆ. ಎನ್​ಕೌಂಟರ್​ ಪ್ರಕ್ರಿಯೆ ಇನ್ನೂ ಮುಂದುವರೆದಿರುವುದಾಗಿ ಸೇನೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net