ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ- ಮೂವರು ಯೋಧರು ಹುತಾತ್ಮ

kupwama
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಚಕಮಕಿಯಲ್ಲಿ ಒಬ್ಬ ಕ್ಯಾಪ್ಟನ್ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದೆ. ಉತ್ತರ ಕಾಶ್ಮೀರದ ಜಿಲ್ಲೆಯ ಮಚಲಿ ಸೆಕ್ಟರ್‌ನಲ್ಲಿ ಮೂವರು ಶಸ್ತ್ರ ಸಜ್ಜಿತ ಉಗ್ರರು ಭದ್ರತಾ ಪಡೆಗಳ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ಚಕಮಕಿಯಲ್ಲಿ ಮೂವರು ಯೋಧರು ಕೂಡ ಹುತಾತ್ಮರಾಗಿದ್ದಾರೆ.

ಉಗ್ರರ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸುವ ಪ್ರಯತ್ನದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 7 ಮತ್ತು 8 ರ ಮಧ್ಯರಾತ್ರಿ ಶಸ್ತ್ರಸಜ್ಜಿತ ಉಗ್ರರು ಅವಿತಿರುವ ಕುರಿತಾಗಿ ಬಿಎಸ್‌ಎಫ್‌ನ ಗಸ್ತು ಪಡೆ ಪತ್ತೆ ಹಚ್ಚಿತ್ತು. ತದನಂತರ ಎನ್‌ಕೌಂಟರ್‌ ನಡೆದಿದೆ. ಘಟನಾ ಸ್ಥಳದಿಂದ ಎಕೆ ರೈಫಲ್ ಮತ್ತು ಎರಡು ಚೀಲ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net