More

    ಡಿಮಾನಿಟೈಸೇಷನ್ ಆಗಿ ನಾಲ್ಕು ವರ್ಷ; ಮೋದಿ ಏನೆಂದರು?

    ನವದೆಹಲಿ: 2016ರ ನವೆಂಬರ್ 8, ಯಾರಿಗೆ ತಾನೇ ನೆನಪಿರಲ್ಲ ಹೇಳಿ. ಅಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಲೈವ್ ಬಂದು ‘ಮಿತ್ರೋಂ’ ಎನ್ನುತ್ತ ಡಿಮಾನಿಟೈಸೇಷನ್​ ಬಗ್ಗೆ ಹೇಳಿದ್ದೇ ತಡ, ಇಡಿ ದೇಶಾದ್ಯಂತ ದೊಡ್ಡ ಸಂಚಲನವೇ ಸೃಷ್ಟಿ ಆಗಿತ್ತು.

    ಅದಾಗಿ ಈಗ ನಾಲ್ಕು ವರ್ಷ. ಡಿಮಾನಿಟೈಸೇಷನ್​ ಕುರಿತು ಈ ನಡುವೆ ನಾನಾ ರೀತಿಯ ವ್ಯಾಖ್ಯಾನಗಳು, ಅಭಿಪ್ರಾಯಗಳು ಬಂದುಹೋಗಿವೆ. ಇದೀಗ ನಾಲ್ಕನೇ ವರ್ಷದ ಸಂದರ್ಭದಲ್ಲಿ ಪ್ರತಿಪಕ್ಷ ಡಿಮಾನಿಟೈಸೇಷನ್ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಬೆನ್ನಿಗೇ ಪ್ರಧಾನಿ ಅದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದಾರೆ.

    ಡಿಮಾನಿಟೈಸೇಷನ್​ ಕಪ್ಪು ಹಣವನ್ನು ಕಡಿಮೆ ಮಾಡುವಲ್ಲಿ, ತೆರಿಗೆ ಪಾವತಿ ಹೆಚ್ಚಿಸುವಲ್ಲಿ ಹಾಗೂ ಪಾರದರ್ಶಕತೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ತೆರಿಗೆ ಪಾವತಿಸದೇ ಇರುವ 13 ಸಾವಿರ ಕೋಟಿ ರೂ.ಗೂ ಮಿಕ್ಕಿದ ಸೆಲ್ಫ್​ ಅಸೆಸ್​​ಮೆಂಟ್​ ಟ್ಯಾಕ್ಸ್​ ತೆರಿಗೆ ಇದರಿಂದಾಗಿಯೇ ಸಂಗ್ರಹವಾಗಿದೆ. ಮಾತ್ರವಲ್ಲ ನಗದು ಚಲಾವಣೆ ಕೂಡ ಕಡಿಮೆಯಾಗಿದೆ. ಇದರಿಂದ ಉಗ್ರ ಹಾಗೂ ಎಡಪಂಥೀಯ ಸಂಘಟನೆಗಳಿಗೆ ಹೋಗುತ್ತಿದ್ದ ಆರ್ಥಿಕ ನೆರವು ಕೂಡ ತಗ್ಗಿದೆ ಎಂದಿದ್ದಾರೆ ಮೋದಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts