ರಸ್ತೆಯಲ್ಲಿ ನಿಂತಿದ್ದ ಮೂರು ಬೈಕ್​ಗಳಿಗೆ ಗುದ್ದಿದ ಕಾಂಗ್ರೆಸ್​ ಮುಖಂಡನ ಕಾರು: ಇಬ್ಬರ ಸಾವು

vijay kulakarni
Published on

ಧಾರವಾಡ: ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್​ ಕುಲಕರ್ಣಿ ಅವರು ಇದ್ದ ಕಾರೂ ಬೈಕ್​ಗಳಿಗೆ ಗುದ್ದಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ರಸ್ತೆ ಬದಿ ನಿಂತಿದ್ದ ಮೂರು ಬೈಕ್​ಗಳಿಗೆ ವಿಜಯ್​ ಅವರು ಇದ್ದ ಕಾರು ಡಿಕ್ಕಿಹೊಡೆದಿದೆ. ಈ ರಭಸಕ್ಕೆ ಕುಮಾರೇಶ್ವರನಗರದ ಚರಣ್ ಮೌನೇಶ್ವರ ನಾಯಕ (16) ಹಾಗೂ ಎತ್ತಿನಗುಡ್ಡದ ಶೇಖರ ಬಸಪ್ಪ ಹುದ್ದಾರ (37) ಅವರು ಮೃತಪಟ್ಟಿದ್ದಾರೆ. ಸಾಧನಕೇರಿಯ ಅರವಿಂದ ಮಲ್ಲನಗೌಡ ಪಾಟೀಲ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಲ್ಲಿ ವಿಜಯ್​ ಸೇರಿದಂತೆ ಮೂವರು ಇದ್ದು, ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇವರ ಕಾರು ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿತ್ತು. ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಎದುರು ನಿಂತಿದ್ದ ಬೈಕ್​ಗಳಿಗೆ ಕಾರು ಢಿಕ್ಕಿ ಹೊಡೆದಿದ್ದು ಈ ಅವಘಡ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net